twitter
    For Quick Alerts
    ALLOW NOTIFICATIONS  
    For Daily Alerts

    ಸಂಜನಾ-ರಾಗಿಣಿಗೆ ಗೆ ಜಾಮೀನು ತಪ್ಪಲು ಕಾರಣವೇನು? ಸಿಸಿಬಿ ವಕೀಲರ ಹೇಳಿಕೆ

    |

    ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಜಾಮೀನಿಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

    ಜಾಮೀನು ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ ಸಂಜನಾ ಗಲ್ರಾನಿ, ರಾಗಿಣಿಗೆ ಗೆ ಮತ್ತೆ ಜಾಮೀನು ನಿರಾಕರಿಸಲಾಗಿದೆ. ಸಂಜನಾ, ರಾಗಿಣಿ ಮಾತ್ರವಲ್ಲದೆ, ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಹಲವರಿಗೆ ಇಂದು ಜಾಮೀನು ನಿರಾಕರಿಸಲಾಗಿದೆ.

    ಸಂಜನಾ, ರಾಗಿಣಿ ಹಾಗೂ ಇತರರಿಗೆ ಜಾಮೀನು ನೀಡಬಾರದೆಂದು ಹೈಕೋರ್ಟ್‌ನಲ್ಲಿ ಸಿಸಿನಿ ಪರ ವಾದ ಮಂಡಿಸಿದ ವಕೀಲ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಸಂಜನಾ-ರಾಗಿಣಿಗೆ ಜಾಮೀನು ಸಿಗದೇ ಇರುವುದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾರೆ.

    ಹಿರಿಯ ವಕೀಲ ವೀರಣ್ಣ ತಗಡಿಯಿಂದ ವಾದ

    ಹಿರಿಯ ವಕೀಲ ವೀರಣ್ಣ ತಗಡಿಯಿಂದ ವಾದ

    ಆದರೆ ಸಿಸಿಬಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವೀರಣ್ಣ ತಗಡಿ ಮಾಧ್ಯಮಗಳೊಂದಿಗೆ ಮಾತನಾಡಿ, 'ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಹಾಗೂ ಇನ್ನಿತರರು ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡಿರುವ ಬಗ್ಗೆ ಎಲೆಕ್ಟಾನಿಕ್ ಸಾಕ್ಷ್ಯಗಳಿವೆ, ಈ ಸಂದರ್ಭದಲ್ಲಿ ಅವರಿಗೆ ಜಾಮೀನು ನೀಡಿದರೆ ಇನ್ನಿತರೆ ಆರೋಪಿಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಹಾಗಾಗಿ ಜಾಮೀನು ನೀಡುವ ಬಗ್ಗೆ ವಿರೋಧಿಸಲಾಗಿತ್ತು' ಎಂದಿದ್ದಾರೆ.

    ಪೊಲೀಸರು ಸಾಕಷ್ಟು ಸಾಕ್ಷ್ಯ ಒಟ್ಟು ಮಾಡಿದ್ದಾರೆ: ವಕೀಲ

    ಪೊಲೀಸರು ಸಾಕಷ್ಟು ಸಾಕ್ಷ್ಯ ಒಟ್ಟು ಮಾಡಿದ್ದಾರೆ: ವಕೀಲ

    'ಸಂಜನಾ ಹಾಗೂ ರಾಗಿಣಿ ಡ್ರಗ್ಸ್ ದಂಧೆಗೆ ಹಣಕಾಸು ಸಹಾಯ ಹಾಗೂ ಇನ್ನೂ ವಿವಿಧ ಮಾದರಿಯಲ್ಲಿ ಸಹಾಯ ಮಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಸಾಕ್ಷ್ಯ ಒಟ್ಟು ಮಾಡಿದ್ದಾರೆ, ಇನ್ನೂ ತನಿಖೆ ನಡೆಯಬೇಕಿರುವ ಕಾರಣ ಈ ಹಂತದಲ್ಲಿ ಜಾಮೀನು ನೀಡುವುದು ಸಮಂಜಸವಲ್ಲ' ಎಂದಿದ್ದಾರೆ ವಕೀಲ ವೀರಣ್ಣ ತಗಡಿ.

    Recommended Video

    ACT-1978 : ಇದು ನನ್ ಸಿನಿಮಾನ ಅಂತ ನಂಗೆ ಕನ್ಫ್ಯೂಸ್ ಆಯ್ತು | Director Mansore | Filmibeat Kannada
    ಸುಪ್ರೀಂನಲ್ಲಿ ಅರ್ಜಿ ಸಲ್ಲಿಸುತ್ತಾರೆಯೇ ನಟಿಯರು?

    ಸುಪ್ರೀಂನಲ್ಲಿ ಅರ್ಜಿ ಸಲ್ಲಿಸುತ್ತಾರೆಯೇ ನಟಿಯರು?

    ಸಿಸಿಬಿ ಪೊಲೀಸರು, ಪ್ರಕರಣದ ಬಗ್ಗೆ ಚಾರ್ಜ್‌ಶೀಟ್ ಸಲ್ಲಿಸುವವರೆಗೆ ಸಂಜನಾ-ರಾಗಿಣಿ ಜೈಲಿನಲ್ಲಿಯೇ ಇರಬೇಕಾಗಿದೆ. ಅಥವಾ ಹೈಕೋರ್ಟ್‌ ತೀರ್ಪನ್ನು ಧಿಕ್ಕರಿಸಿ ಸುಪ್ರೀಂಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಹಾಕುವ ಅವಕಾಶ ನಟಿಯರಿಗಿದೆ.

    English summary
    Sanjana Galrani and Ragini Dwivedi did not get bail on November 03. CCB lawyer Veeranna gives answer.
    Wednesday, November 4, 2020, 9:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X