»   » ಎಲ್ಲರನ್ನ ಬಿಟ್ಟು 'ಪ್ರಜಾಕಾರಣಿ' ಉಪೇಂದ್ರಗೆ ಮಾತ್ರ ಯಾಕೆ ಜೈ ಎನ್ನಬೇಕು.?

ಎಲ್ಲರನ್ನ ಬಿಟ್ಟು 'ಪ್ರಜಾಕಾರಣಿ' ಉಪೇಂದ್ರಗೆ ಮಾತ್ರ ಯಾಕೆ ಜೈ ಎನ್ನಬೇಕು.?

Posted By:
Subscribe to Filmibeat Kannada

ನಮ್ ದೇಶದಲ್ಲಿ ರಾಜಕೀಯ, ರಾಜಕಾರಣ ಹೊಸದಾ.? ಖಂಡಿತ ಇಲ್ಲ. ಎಂತೆಂಥವ್ರೋ ರಾಜಕೀಯಕ್ಕೆ ಧುಮುಕಿ ಬೇಜಾನ್ ಕಾಸು ಮಾಡ್ಕೊಂಡಿದ್ದನ್ನ ನೋಡಿದ್ದೀವಿ. ಹಾಗೇ ಜೇಬು ತುಂಬಾ ದುಡ್ಡು ಹಿಡ್ಕೊಂಡ್ ಬಂದು, ಎಲೆಕ್ಷನ್ ನಲ್ಲಿ ಮಕಾಡೆ ಮಲಗಿ, ಇದ್ದ ಹಣವನ್ನೆಲ್ಲ ಕಳ್ಕೊಂಡೋರ ಕಥೆಯನ್ನೂ ಕೇಳಿದ್ದೀವಿ. ಈ ಮಧ್ಯೆ ಸಿನಿಮಾ ಮಾಡ್ಕೊಂಡಿದ್ದ ಉಪೇಂದ್ರಗೆ ರಾಜಕೀಯದ ಉಸಾಬರಿ ಯಾಕ್ ಬೇಕು ಅಂತ ಕೆಲವರು ತಲೆ ಚಚ್ಚಿಕೊಳ್ಳಬಹುದು.

ಹಾಗೇ, ರಾಜಕೀಯದಲ್ಲಿ ಅನುಭವವೇ ಇಲ್ಲದ ಉಪ್ಪಿಗೆ ನಾವ್ಯಾಕೆ ಸಪೋರ್ಟ್ ಮಾಡಬೇಕು ಎಂಬ ಹುಳ ಕೆಲವರ ತಲೆಯಲ್ಲಿ ಹರಿದಾಡುತ್ತಿರಬಹುದು. ಅಂಥವರೆಲ್ಲರಿಗೂ ಉಪೇಂದ್ರ ಕೊಟ್ಟಿರುವ ಉತ್ತರ ಇದು. ಒಮ್ಮೆ ಓದ್ಕೊಂಡ್ಬಿಡಿ...

Why should you support Upendra.? Here is the reason.

''ರಾಜನ ಕೈಯಲ್ಲಿ ಕೀ ಕೊಡುತ್ತೀರಾ... ರಾಜಕೀಯಕ್ಕೆ ಸಪೋರ್ಟ್ ಮಾಡಿ. ಇಲ್ಲ ನೀವು ಪ್ರಜೆಗಳ ಕೈಯಲ್ಲಿ ಕೀ ಇಟ್ಕೊಂತೀರಾ.? ಪ್ರಜಾಕೀಯಕ್ಕೆ ಸಪೋರ್ಟ್ ಮಾಡಿ ಅಂತ ಹೇಳಿ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ಅಷ್ಟಕ್ಕೂ, ಉಪ್ಪಿ ಹೀಗೆ ಟ್ವೀಟ್ ಮಾಡಲು ಕಾರಣ ಪಾರ್ಥ ವಾಸು ಎಂಬ ಉಪ್ಪಿ ಅಭಿಮಾನಿ. ''ಸರ್ ನಾನು ನನ್‌ ಫ್ರೆಂಡ್ಸ್ ಗೆ ಉಪ್ಪಿ ಸರ್ ಸ ಸಪೋರ್ಟ್ ಮಾಡಿ ಎಂದಾಗ ಅವರು ಕೇಳಿದ ಒಂದು ಪ್ರಶ್ನೆ 'ಯಾಕೆ ಸಪೋರ್ಟ್ ಮಾಡಬೇಕು' ಅಂತ. ಅದಕ್ಕೆ ನಿಮ್ಮ ಉತ್ತರವೇನು.?'' ಎಂದು ಪಾರ್ಥ ವಾಸು ಎಂಬುವರು ಉಪ್ಪಿಗೆ ಟ್ವೀಟ್ ಸಂದೇಶ ಕಳುಹಿಸಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ಉಪೇಂದ್ರ ಪ್ರಜೆಗಳ ಕೈಯಲ್ಲಿ ಕೀ ಇರಬೇಕು ಅಂದ್ರೆ, ಪ್ರಜಾಕಾರಣಕ್ಕೆ ಸಪೋರ್ಟ್ ಮಾಡಿ ಎಂದಿದ್ದಾರೆ. ಉಪ್ಪಿ ಉತ್ತರ ಸರಿ ಎನಿಸಿದರೆ, ಉಪ್ಪಿಗೆ ಜೈಕಾರ ಹಾಕಿಬಿಡಿ....

English summary
Why should you support 'Prajakarani' Upendra.? Read the article to know the reason.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada