ಏಕಾಏಕಿ ಬಿಗ್ ಬಾಸ್‌ನಿಂದ ಹೊರ ಬರಲು ಸುದೀಪ್ ನಿರ್ಧಾರ ಮಾಡಿದ್ದೇಕೆ..? ಅಸಲಿ ಸತ್ಯ ಬಹಿರಂಗ..!
ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಸುದೀಪ್ ತಾವು ಅತ್ಯುತ್ತಮ ನಿರೂಪಕ ಕೂಡ ಹೌದು ಎನ್ನುವುದನ್ನು ಕಳೆದ ಹತ್ತು ವರ್ಷಗಳ ಹಿಂದೆಯೇ ಸಾಬೀತು ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಇಂಥಾ ಸುದೀಪ್ ಮುಂದಿನ ವರ್ಷದಿಂದ ನಾನು ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎನ್ನುವ ಬಾಂಬ್ ಎಸೆದಾಗ ಅನೇಕರು, ಆಶ್ಚರ್ಯಗೊಂಡಿದ್ದರು. ಯಾಕೆ ಈ ದಿಢೀರ್ ನಿರ್ಧಾರ ಎಂದು ಪ್ರಶ್ನೆಯನ್ನು ಮಾಡಿದ್ದರು. ಇನ್ನೂ.. ಸುದೀಪ್ ಗೌರವ ಇಲ್ಲದ ಕಡೆ ಒಂದು ಕ್ಷಣ ಕೂಡ ಇರುವವರಲ್ಲ. ಯಾಕೆಂದರೆ ಸುದೀಪ್ ವ್ಯಕ್ತಿಯಾಗಿ ಗಳಿಸಿರುವ ಜನಪ್ರಿಯತೆಯ ಅಂಥದ್ದು. ಹೀಗಾಗಿಯೇ ಬಿಗ್ ಬಾಸ್‌ನಲ್ಲಿ ಸುದೀಪ್ ಅವರನ್ನು ಅಗೌರವಿಸಲಾಗಿದೆಯಾ ಎಂಬ ಅನುಮಾನ ಕಾಡಲು ಶುರು ಮಾಡಿತ್ತು. ಬಿಗ್ ಬಾಸ್ ಆಯೋಜಕರ ನಡಾವಳಿಯಿಂದ ಬೇಸತ್ತು ಸುದೀಪ್ ಈ ನಿರ್ಧಾರವನ್ನು ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಅದು ನಿಜಾ ಆಗಿದೆ. ಬಿಗ್ ಬಾಸ್‌ನಿಂದ ಸುದೀಪ್ ಅವರಿಗೆ ಬೇಸರವಾದ ವಿಚಾರ ಬಹಿರಂಗವಾಗಿದೆ.

ಹೌದು, ಅಸಲಿಗೆ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕನ್ನಡಕ್ಕಿಂತ ಇಂಗ್ಲಿಷ್‌ನ ಹೆಚ್ಚು ಮಾತನಾಡುತ್ತಿದ್ದಾರೆ ಎನ್ನುವ ಆರೋಪವನ್ನು ಪ್ರೇಕ್ಷಕರು ಮಾಡುತ್ತಿದ್ದಾರೆ. ಖುದ್ದು ಸುದೀಪ್ ಅವರಲ್ಲಿ ಕೂಡ ಇದೇ ಭಾವನೆ ಬಂದಿದೆ. ಇನ್ನೂ ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಯಾರಾದರೂ ಇಂಗ್ಲಿಷ್‌ನಲ್ಲಿ ಮಾತನಾಡಿದರೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನು ಹಾಕಲಾಗುತ್ತಿತ್ತು. ಆದರೆ ಈಗ ಕಳೆದ ಎರಡು ವರ್ಷಗಳಿಂದ ಆ ಹಾಡನ್ನು ಕೂಡ ಕೈ ಬಿಡಲಾಗಿದೆ. ಹೀಗಾಗಿ ಸುದೀಪ್ ಆಯೋಜಕರಲ್ಲಿ ಕನ್ನಡ ಹೆಚ್ಚು ಬಳಸಲು ಹೇಳಿದ್ದಾರೆ. ಆದರೆ ಅದಕ್ಕೆ ಅವರು ಸೊಪ್ಪು ಹಾಕಿಲ್ಲ. ಯಾಕೆಂದರೆ ಬಿಗ್ ಬಾಸ್ ಕಾರ್ಯಕ್ರಮದ ನಿರ್ದೇಶಕರು ಬದಲಾಗಿದ್ದಾರೆ. ಬಿಗ್ ಬಾಸ್ ಶೋ ನಿರ್ದೇಶಕ ಪ್ರಕಾಶ್ ತಮಿಳಿನವರಾದರೆ, ಶೋ ಆಯೋಜಕಿ ಸುಷ್ಮಾ ಮರಾಠಿಯವರು. ಈ ಹಿನ್ನೆಲೆ ಇಂಗ್ಲಿಷ್ ನ ಸ್ಫರ್ಧಿಗಳು ಹೆಚ್ಚು ಬಳಕೆ ಮಾಡುತ್ತಿದ್ದರು ಬಿಗ್ ಬಾಸ್ ಮೌನಕ್ಕೆ ಶರಣಾಗಿತ್ತು.
ಇನ್ನೂ ಈ ಬಾರಿ ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಆದರೆ, ನರಕದಲ್ಲಿ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ವ್ಯವಸ್ಥೆ ಮಾಡುವಂತೆ ಸುದೀಪ್ ಹೇಳಿದರು ಕೂಡ ಈಡೇರಲಿಲ್ಲ. ಟಾಯ್ಲೆಟ್ ಬಳಕೆಗೆ ನರಕವಾಸಿಗಳಿಗೆ ಯಾವುದೇ ಷರತ್ತುಗಳನ್ನು ಹಾಕಬಾರದು ಎಂದು ಕೇಳಿಕೊಂಡರು ಕೇಳಿಸಿಕೊಳ್ಳಲಿಲ್ಲ. ಇನ್ನೂ ವಾರದ ಕಥೆ ಕಿಚ್ಚನ ಜೊತೆ ಸಮಯದಲ್ಲಿ ಸುದೀಪ್ ಜೊತೆ ನರಕದಲ್ಲಿರುವ ಸ್ಫರ್ಧಿಗಳು ಕೂಡ ನಿಂತುಕೊಂಡೇ ಇರಬೇಕಿತ್ತು. ಹೀಗಾಗಿ ಸುದೀಪ್ ನರಕದಲ್ಲಿರುವ ಸ್ಫರ್ಧಿಗಳಿಗೆ ಕೂರಿಸಿ ಮಾತನಾಡಿಸುವ ಸಲಹೆಯನ್ನು ನೀಡಿದ್ದರು. ಆದರೆ ಇದನ್ನು ಕೂಡ ಆಯೋಜಕರು ಗಂಭೀರವಾಗಿ ಪರಿಗಣಿಸಲಿಲ್ಲ. ಇದಿಷ್ಟೇ ಅಲ್ಲದೇ ಈ ಬಾರಿ ಬಿಗ್ ಬಾಸ್ ಪ್ರಾಯೋಜಕತ್ವವನ್ನು ಎ23ರಮ್ಮಿ ಆಪ್ ಪಡೆದುಕೊಂಡಿದೆ. ಈ ಹಿನ್ನೆಲೆ ರಮ್ಮಿ ಆಪ್ ಹೆಸರು ತೆಗೆದುಕೊಳ್ಳಲು ಇರಿಸು ಮುರಿಸಾಗುತ್ತೆ ಎಂದು ಸುದೀಪ್ ಹೇಳಿದ್ದರು. ಈ ಹೆಸರಿನ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಸಿ ಎಂದು ಕೇಳಿದ್ದರು. ಆದರೆ ಇದಕ್ಕೂ ಕೂಡ ಆಯೋಜಕರು ಒಪ್ಪಲಿಲ್ಲ.
ಈ ಎಲ್ಲಾ ಕಾರಣಗಳಿಂದ ಕೋಪ ಮಾಡಿಕೊಂಡ ಸುದೀಪ್, ಬಿಗ್ ಬಾಸ್ ತೊರೆಯುವ ನಿರ್ಧಾರವನ್ನು ಮಾಡಿದರು. ಹೀಗೆಂದು ಸದ್ಯಕ್ಕೆ ಕನ್ನಡದ ಪರ ಹೋರಾಟಗಾರ ರೂಪೇಶ್ ರಾಜಣ್ಣ ವಿವರಿಸಿದ್ದಾರೆ. ಸುದೀಪ್ ನಿರ್ಧಾರದ ಹಿಂದಿನ ಕಾರಣಗಳನ್ನು ತಿಳಿಸಿದ್ದಾರೆ. ಸದ್ಯ ನಿನ್ನೆ ರೂಪೇಶ್ ರಾಜಣ್ಣ ಅವರು ಹೇಳಿದಂತೆ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದಾಗಿ ಬಿಗ್ ಬಾಸ್ ಆಯೋಜಕರು ಹೇಳಿದ್ದಾರೆ. ಹೀಗಾಗಿ ಸುದೀಪ್ ಮನಸು ಬದಲಿಸುತ್ತಾರಾ ಅನ್ನುವುದು ಸದ್ಯದ ಕುತೂಹಲ.


Click it and Unblock the Notifications











