ಸೈರಾ ಚಿತ್ರದ ಬೆಂಗಳೂರು ಕಾರ್ಯಕ್ರಮಕ್ಕೆ ಸುದೀಪ್ ಯಾಕೆ ಬರಲಿಲ್ಲ?
Recommended Video
ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾ ಅಕ್ಟೋಬರ್ 2 ರಂದು ಐದು ಭಾಷೆಯಲ್ಲಿ ತೆರೆಕಾಣುತ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಜೊತೆಗೆ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.
ಈ ಹಿನ್ನೆಲೆ ಸೈರಾ ನರಸಿಂಹ ರೆಡ್ಡಿ ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮವನ್ನ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ, ನಟಿ ತಮನ್ನಾ ಆಗಮಿಸಿದ್ದರು.
ಮುಖ್ಯ ಅತಿಥಿಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೈರಾಗೆ ಸಾಥ್ ಕೊಟ್ಟಿದ್ದು ಸರ್ಪ್ರೈಸ್ ಆಗಿತ್ತು. ಇಂತಹ ಕಲರ್ ಫುಲ್ ಕಾರ್ಯಕ್ರಮದಲ್ಲಿ ಸುದೀಪ್ ಇರಲಿಲ್ಲ ಎನ್ನುವುದು ಅಭಿಮಾನಿಗಳಿಗೆ ಬೇಸರ ತಂದಿದ್ದಂತೂ ನಿಜ. ಅಷ್ಟಕ್ಕೂ, ಸುದೀಪ್ ಯಾಕೆ ಭಾಗವಹಿಸಿಲಿಲ್ಲ? ಮುಂದೆ ಓದಿ....

ಕೋಟಿಗೊಬ್ಬನ ಜೊತೆ ಸುದೀಪ್ ಬ್ಯುಸಿ
ಸೈರಾ ಚಿತ್ರದಲ್ಲಿ ಅವುಕ ರಾಜು ಎಂಬ ಪಾತ್ರದಲ್ಲಿ ನಟಿಸಿರುವ ಸುದೀಪ್, ಬೆಂಗಳೂರಿನ ಕಾರ್ಯಕ್ರಮಕ್ಕೆ ಲಭ್ಯವಾಗ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಯಾಕಂದ್ರೆ, ಸುದೀಪ್ ಪೋಲ್ಯಾಂಡ್ ನಲ್ಲಿದ್ದಾರೆ. ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣಕ್ಕಾಗಿ ಪೋಲ್ಯಾಂಡ್ ಗೆ ಹೋಗಿದ್ದ ಸುದೀಪ್ ಇನ್ನು ಬೆಂಗಳೂರಿಗೆ ವಾಪಸ್ ಆಗಿಲ್ಲ. ಆ ಕಾರಣದಿಂದ ಸೈರಾ ಕಾರ್ಯಕ್ರಮಕ್ಕೆ ಭಾಗಿಯಾಗಿಲಿಲ್ಲ.

ಲೈವ್ ವಿಡಿಯೋದಲ್ಲಿ ಸುದೀಪ್ ಮಾತು
ಸೈರಾ ಕಾರ್ಯಕ್ರಮಕ್ಕೆ ಬರದೇ ಹೋದರು, ಅಲ್ಲಿಂದಲೇ ಲೈವ್ ವಿಡಿಯೋ ಮೂಲಕ ಸುದೀಪ್ ಮಾತನಾಡಿದರು. ''ಸೈರಾ ಸಿನಿಮಾ ಕನ್ನಡದಲ್ಲಿ ಬರುತ್ತಿರುವುದು ನಿಜಕ್ಕೂ ಖುಷಿ. ಇಂತಹ ಅದ್ಭುತವಾದ ಚಿತ್ರ ಮತ್ತೆ ಮತ್ತೆ ಆಗುವುದಿಲ್ಲ. ಇಂತಹ ಸಿನಿಮಾದಲ್ಲಿ ನಾನು ಒಂದು ಭಾಗವಾಗಿದ್ದಕ್ಕೆ ಸಂತಸವಿದೆ'' ಎಂದು ಸಂಭ್ರಮ ಪಟ್ಟರು.

ಶಿವಣ್ಣ-ಚಿರುಗೆ ಥ್ಯಾಂಕ್ಸ್
ಸೈರಾ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಹಾಗೂ ಸೈರಾ ನಾಯಕ ಚಿರಂಜೀವಿ ಅವರಿಗೆ ಸುದೀಪ್ ವಿಶೇಷವಾಗಿ ಥ್ಯಾಂಕ್ಸ್ ಹೇಳಿದರು.

ಸುದೀಪ್ ಬಗ್ಗೆ ಚಿರಂಜೀವಿ ಮೆಚ್ಚುಗೆ
ಸೈರಾ ಚಿತ್ರದಲ್ಲಿ ಅವುಕ ರಾಜ ಪಾತ್ರದಲ್ಲಿ ನಟಿಸಿರುವ ಸುದೀಪ್ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಹುಶಃ ಈ ಪಾತ್ರವನ್ನ ಸುದೀಪ್ ಅವರಿಗಾಗಿಯೇ ಸಿದ್ಧ ಮಾಡಿದಂತಿದೆ. ಸೈರಾ ಪಾತ್ರ ಬಿಟ್ಟರೇ ಬಹಳ ಪ್ರಾಮುಖ್ಯತೆ ಹೊಂದಿರುವ ಪಾತ್ರ ಅವುಕ ರಾಜು. ತುಂಬಾ ಚೆನ್ನಾಗಿ ನಟಿಸಿದ್ದಾರೆ'' ಎಂದು ಚಿರು ಹೇಳಿದರು.


Click it and Unblock the Notifications











