For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಭಾಗಿಯಾಗಿದ್ದ 'ಉದ್ಘರ್ಷ' ಕಾರ್ಯಕ್ರಮಕ್ಕೆ ಸುದೀಪ್ ಬಂದಿಲ್ಲ ಯಾಕೆ?

  |
  ದರ್ಶನ್ ಭಾಗಿಯಾಗಿದ್ದ 'ಉದ್ಘರ್ಷ' ಕಾರ್ಯಕ್ರಮಕ್ಕೆ ಸುದೀಪ್ ಬಂದಿಲ್ಲ ಯಾಕೆ? | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ತಯಾರಾಗಿರುವ ಉದ್ಘರ್ಷ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದರು. ವಿಶೇಷ ಅಂದ್ರೆ ಈ ಟ್ರೈಲರ್ ಗೆ ಕಿಚ್ಚ ಸುದೀಪ್ ವಾಯ್ಸ್ ನೀಡಿದ್ದರು. ಹೀಗಾಗಿ, ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಸುದೀಪ್ ಮತ್ತು ದರ್ಶನ್ ಇಬ್ಬರು ಬರಬಹುದು ಎಂಬ ನಿರೀಕ್ಷೆ ಇತ್ತು.

  ಆದ್ರೆ, ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಡಿ ಬಾಸ್ ಮಾತ್ರ ಕಾಣಿಸಿಕೊಂಡರು. ನಾಲ್ಕು ಭಾಷೆಯಲ್ಲಿ ಬರ್ತಿರುವ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಚಿತ್ರಕ್ಕೆ ಶುಭಹಾರೈಸಿದ್ರು. ಈ ಕಲರ್ ಫುಲ್ ಕಾರ್ಯಕ್ರಮದಲ್ಲಿ ಸುದೀಪ್ ಇರಬೇಕಿತ್ತು ಎಂಬ ಬಯಕೆ ಅನೇಕರಿಗಿತ್ತು.

  ಗುರುವಿಗಾಗಿ ಸುದೀಪ್, ಸ್ನೇಹಿತನಿಗಾಗಿ ದರ್ಶನ್ ಮುಖಾಮುಖಿ ಆಗ್ತಾರಾ? ಗುರುವಿಗಾಗಿ ಸುದೀಪ್, ಸ್ನೇಹಿತನಿಗಾಗಿ ದರ್ಶನ್ ಮುಖಾಮುಖಿ ಆಗ್ತಾರಾ?

  ಸುದೀಪ್ ಗೆ ಬ್ರೇಕ್ ಕೊಟ್ಟ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ಗುರುಗಳ ಚಿತ್ರಕ್ಕೆ ಧ್ವನಿ ನೀಡಿದ್ರು ಕಾರ್ಯಕ್ರಮಕ್ಕೆ ಬರಲಿಲ್ಲ. ಬಟ್, ಸುದೀಪ್ ಗೆ ಆಹ್ವಾನವಿತ್ತಾ ಎಂಬ ಕುತೂಹಲ ಕಾಡ್ತಿತ್ತು. ಈ ಬಗ್ಗೆ ಸ್ವತಃ ಸುನೀಲ್ ಕುಮಾರ್ ದೇಸಾಯಿ ಅವರೇ ಕಾರಣ ಬಿಚ್ಚಿಟ್ಟಿದ್ದಾರೆ. ಹಾಗಿದ್ರೆ, ಸುದೀಪ್ ಯಾಕೆ ಬರಲಿಲ್ಲ? ಮುಂದೆ ಓದಿ.....

  .

  ಸುದೀಪ್ ಮತ್ತು ದರ್ಶನ್ ಬೇಕಿತ್ತು

  ಸುದೀಪ್ ಮತ್ತು ದರ್ಶನ್ ಬೇಕಿತ್ತು

  ಉದ್ಘರ್ಷ ಚಿತ್ರದಲ್ಲಿ ನಟಿಸಿರುವವರು ಬಹುತೇಕ ಹೊಸ ಕಲಾವಿದರು. ಠಾಕೂರ್ ಅನೂಪ್ ಸಿಂಗ್, ಸಾಯಿ ಧನ್ಸಿಕಾ, ಕಬೀರ್ ದುಹಾನ್ ಸಿಂಗ್, ಡ್ಯಾನಿಶ್, ಹರ್ಷಿಕಾ ಪೂಣಚ್ಚ ಹೀಗೆ ಯುವ ಮತ್ತು ಪರಭಾಷೆಯ ಕಲಾವಿದರು ಅಭಿನಯಿಸಿದ್ದಾರೆ. ನಾಲ್ಕು ಭಾಷೆಯಲ್ಲಿ ಬರ್ತಿರುವ ಈ ಚಿತ್ರವನ್ನ ನಮ್ಮವರೇ ಆದ ದರ್ಶನ್ ಮತ್ತು ಸುದೀಪ್ ಅವರಿಂದ ಪ್ರಮೋಟ್ ಮಾಡಿಸಬೇಕು ಎಂಬುದು ಸ್ವತಃ ಸುನೀಲ್ ಕುಮಾರ್ ದೇಸಾಯಿ ಅವರ ಮನಸ್ಸಲ್ಲಿತ್ತಂತೆ. ಹಾಗಾಗಿ, ಇಬ್ಬರನ್ನ ಆಯ್ಕೆ ಮಾಡಿಕೊಂಡಿದ್ದಾರೆ.

  ದರ್ಶನ್ ಗೆ 1 ಕೆಜಿ ತೂಕದ ವಾಚ್ ಉಡುಗೊರೆ ನೀಡಿದ ಠಾಕೂರ್ ಅನೂಪ್ದರ್ಶನ್ ಗೆ 1 ಕೆಜಿ ತೂಕದ ವಾಚ್ ಉಡುಗೊರೆ ನೀಡಿದ ಠಾಕೂರ್ ಅನೂಪ್

  ಸುದೀಪ್ ವಾಯ್ಸ್, ದರ್ಶನ್ ಲಾಂಚ್

  ಸುದೀಪ್ ವಾಯ್ಸ್, ದರ್ಶನ್ ಲಾಂಚ್

  ಸುದೀಪ್ ಅವರಿಂದ ಟ್ರೈಲರ್ ಗೆ ಹಿನ್ನಲೆ ಧ್ವನಿ ಕೊಡಿಸಿದ್ದ ಸುನೀಲ್ ಕುಮಾರ್ ದೇಸಾಯಿ ಅವರು, ದರ್ಶನ್ ಅವರಿಂದ ಟ್ರೈಲರ್ ಲಾಂಚ್ ಮಾಡಲು ಪ್ಲಾನ್ ಮಾಡಿದ್ದಾರೆ. ಬಹುಶಃ ದರ್ಶನ್ ಮತ್ತು ಸುದೀಪ್ ಇಬ್ಬರು ಒಟ್ಟಿಗೆ ವೇದಿಕೆ ಹಂಚಿಕೊಳ್ಳುವುದು ಅನುಮಾನ ಎಂಬುದು ಸ್ವತಃ ನಿರ್ದೇಶಕರಿಗೆ ಗೊತ್ತಿತ್ತು. ಹಾಗಾಗಿ, ಇಬ್ಬರಿಂದಲೂ ಪ್ರತ್ಯೇಕವಾಗಿ ಪ್ರಮೋಟ್ ಮಾಡಿಸಿದ್ದಾರೆ.

  ಗುರುಗಳ ಚಿತ್ರಕ್ಕೆ ಪವರ್ ತುಂಬಿದ ಕಿಚ್ಚ ಸುದೀಪ್ಗುರುಗಳ ಚಿತ್ರಕ್ಕೆ ಪವರ್ ತುಂಬಿದ ಕಿಚ್ಚ ಸುದೀಪ್

  ಆಹ್ವಾನ ನೀಡಿರಲಿಲ್ಲ

  ಆಹ್ವಾನ ನೀಡಿರಲಿಲ್ಲ

  ಅಂದ್ಹಾಗೆ, ದರ್ಶನ್ ಅವರು ಉದ್ಘರ್ಷ ಟ್ರೈಲರ್ ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಸುದೀಪ್ ಅವರಿಗೆ ಆಹ್ವಾನ ನೀಡಿರಲಿಲ್ಲ. ಯಾಕಂದ್ರೆ, ಆಲ್ ರೆಡಿ ತಮ್ಮ ಚಿತ್ರಕ್ಕೆ ಸಹಾಯ ಮಾಡಿದ್ರು. ಸತತ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಮತ್ತೆ ಟ್ರೈಲರ್ ಲಾಂಚ್ ಗೆ ಬನ್ನಿ ಎನ್ನುವುದು ಸರಿಯಿರಲ್ಲ ಎಂಬ ಕಾರಣಕ್ಕೆ ನಾವು ಸುದೀಪ್ ಅವರಿಗೆ ಕಷ್ಟ ನೀಡಿಲಿಲ್ಲ ಅಷ್ಟೇ ಎಂದು ದೇಸಾಯಿ ತಿಳಿಸಿದ್ದಾರೆ.

  ಸುನೀಲ್ ಕುಮಾರ್ ದೇಸಾಯಿ ಸಂದರ್ಶನ: ನಾನು, ನನ್ನ ಬರ್ತಡೇ ಮತ್ತು 'ಉದ್ಘರ್ಷ'ಸುನೀಲ್ ಕುಮಾರ್ ದೇಸಾಯಿ ಸಂದರ್ಶನ: ನಾನು, ನನ್ನ ಬರ್ತಡೇ ಮತ್ತು 'ಉದ್ಘರ್ಷ'

  ಮೊದಲೇ ನಿರ್ಧರಿಸಿದ್ದ ಕಾರಣ ಬರಲಿಲ್ಲ

  ಮೊದಲೇ ನಿರ್ಧರಿಸಿದ್ದ ಕಾರಣ ಬರಲಿಲ್ಲ

  ಬಹುಶಃ ದರ್ಶನ್ ಅವರು ಬಂದ್ರೆ ಸುದೀಪ್ ಬರೋದು ಅನುಮಾನ ಅಥವಾ ಸುದೀಪ್ ಅವರು ಬಂದ್ರೆ ದರ್ಶನ್ ಅವರು ಬರೋದು ಅನುಮಾನ ಎಂಬ ಗೊಂದಲ ಬೇಡ. ಹಾಗಾಗಿ, ಒಬ್ಬರಿಂದ ಟ್ರೈಲರ್ ಲಾಂಚ್ ಮತ್ತೊಬ್ಬರಿಂದ ಟ್ರೈಲರ್ ಗೆ ವಾಯ್ಸ್ ಎಂಬ ಕಾನ್ಸೆಪ್ಟ್ ಹೊಂದಿದ್ದರಂತೆ ದೇಸಾಯಿ. ಅವರ ನಿರ್ಧರಿಸಿದಂತೆ ಕಾರ್ಯಕ್ರಮವೂ ಆಗಿದೆ. ಅಲ್ಲಿಗೆ ದರ್ಶನ್ ಮತ್ತು ಸುದೀಪ್ ಇಬ್ಬರು ಉದ್ಘರ್ಷಕ್ಕೆ ಸಾಥ್ ನೀಡಿದ್ದಾರೆ.

  'ಸ್ಟಾರ್' ನಿರ್ದೇಶಕನ ಚಿತ್ರಕ್ಕೆ ಆಯ್ಕೆಯಾದ 'ಕುರುಕ್ಷೇತ್ರ'ದ ಭೀಮ.! 'ಸ್ಟಾರ್' ನಿರ್ದೇಶಕನ ಚಿತ್ರಕ್ಕೆ ಆಯ್ಕೆಯಾದ 'ಕುರುಕ್ಷೇತ್ರ'ದ ಭೀಮ.!

  English summary
  Why sudeep did not attend the udgharsha trailer launch event? Director sunil kumar desai has clarified about this confusion. udgharsha trailer released by darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X