twitter
    For Quick Alerts
    ALLOW NOTIFICATIONS  
    For Daily Alerts

    ಅಂಬಿಗೆ ದರ್ಶನ್-ಸುದೀಪ್ ಇಬ್ಬರು ಒಟ್ಟಿಗೆ ಹೆಗಲು ಕೊಡಬೇಕಿತ್ತಂತೆ.!

    |

    ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಇಡೀ ಚಿತ್ರರಂಗವನ್ನೇ ಅನಾಥರನ್ನಾಗಿಸಿದೆ. ತಮ್ಮಲ್ಲಿದ್ದ ಪ್ರತಿಷ್ಠೆ, ಸ್ವಾಭಿಮಾನ, ಕೋಪ, ತಾಪ ಎಲ್ಲವನ್ನ ಮರೆತು ಅಂಬಿಯ ಅಂತಿಮ ದರ್ಶನದಲ್ಲಿ ಭಾಗಿಯಾದರು ಕಲಾಕುಟುಂಬ. ಶಿವರಾಜ್ ಕುಮಾರ್, ರವಿಚಂದ್ರನ್, ಅರ್ಜುನ್ ಸರ್ಜಾ, ಪುನೀತ್, ಗಣೇಶ್, ಯಶ್, ದರ್ಶನ್, ಸುದೀಪ್, ಧ್ರುವ ಸರ್ಜಾ, ಹೀಗೆ ಎಲ್ಲರೂ ಅಂಬಿಯ ಅಂತಿಮಯಾತ್ರೆಯಲ್ಲಿ ಹೆಜ್ಜೆಯಿಟ್ಟರು.

    ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಮತ್ತು ವಿಷ್ಣುವರ್ಧನ್ ಇದ್ದಂತೆ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇರ್ತಾರೆ ಎಂದೇ ಹೇಳಲಾಗ್ತಿದೆ. ಆದ್ರೆ, ಕಾರಣಾಂತರಗಳಿಂದ ಸದ್ಯ ಇವರಿಬ್ಬರ ದೂರವಾಗಿದ್ದಾರೆ.

    ಅಂಬಿ ನಿಧನದ ಸುದ್ದಿ ದಾಸನಿಗೆ ತಿಳಿದ 'ಆ ಕ್ಷಣ'ವನ್ನ ವಿವರಿಸಿದ ನಿರ್ಮಾಪಕಿ ಅಂಬಿ ನಿಧನದ ಸುದ್ದಿ ದಾಸನಿಗೆ ತಿಳಿದ 'ಆ ಕ್ಷಣ'ವನ್ನ ವಿವರಿಸಿದ ನಿರ್ಮಾಪಕಿ

    ಬಟ್, ಅಂಬಿಯ ಅಂತಿಮ ಕ್ಷಣದಲ್ಲಿ ಇವರಿಬ್ಬರ ಮೇಲೆ ಸಣ್ಣದೊಂದು ನಿರೀಕ್ಷೆ ಮೂಡಿತ್ತು. ಆ ಆಸೆ ಕೊನೆಗೂ ನೆರವೇರಲೇ ಇಲ್ಲ. ಇದು ದಚ್ಚು ಮತ್ತು ಕಿಚ್ಚ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಏನದು.? ಮುಂದೆ ಓದಿ....

    ಒಟ್ಟಿಗೆ ಹೆಗಲು ಕೊಡಬೇಕಿತ್ತು

    ಒಟ್ಟಿಗೆ ಹೆಗಲು ಕೊಡಬೇಕಿತ್ತು

    ದರ್ಶನ್ ಗೆ ಅಂಬರೀಶ್ ಅಂದ್ರೆ ಎಷ್ಟು ಅಭಿಮಾನವೋ ಅದೇ ರೀತಿ ಸುದೀಪ್ ಗೂ ಅಂಬಿ ಅಂದ್ರೆ ಪಂಚಪ್ರಾಣ. ಇವರಿಬ್ಬರು ಅಂಬಿಯ ಎರಡು ಕಣ್ಣಗಳು ಇದ್ದಂತೆ. ಅಂಬಿ ಹಾಕಿದ ಗೆರೆಯನ್ನ ಇಬ್ಬರು ದಾಟುತ್ತಿರಲಿಲ್ಲ. ಆದ್ರೆ, ಅಂಬಿ ಸತ್ತಾಗ ಇಬ್ಬರು ಒಟ್ಟಿಗೆ ಹೆಗಲು ಕೊಡಲಿಲ್ಲ ಎಂಬ ಬೇಸರ ಅಭಿಮಾನಿಗಳನ್ನ ಕಾಡುತ್ತಿದೆ.

    ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ

    ದಾಸ ಬಂದ್ರು ಸುದೀಪ್ ಬರಲಿಲ್ಲ

    ದಾಸ ಬಂದ್ರು ಸುದೀಪ್ ಬರಲಿಲ್ಲ

    ದರ್ಶನ್ 'ಯಜಮಾನ' ಚಿತ್ರದ ಚಿತ್ರೀಕರಣಕ್ಕಾಗಿ ಸ್ವೀಡನ್ ಗೆ ತೆರಳಿದ್ದರು. ಅಂಬಿ ಇನ್ನಿಲ್ಲ ಎಂಬ ಸುದ್ದಿ ತಿಳಿದ ಕೂಡಲೇ ಫ್ಲೈಟ್ ಬುಕ್ ಮಾಡಿ ಬೆಂಗಳೂರಿನ ಕಡೆ ಬಂದ್ರು. ಅದೇ ರೀತಿ ಅಪ್ಪಾಜಿ ನಿಧನದ ಸುದ್ದಿ ಕೇಳಿದ ತಕ್ಷಣ ಸುದೀಪ್ ವಿಕ್ರಂ ಆಸ್ಪತ್ರೆಗೆ ದೌಡಾಯಿಸಿದರು. ಮರುದಿನ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ದರ್ಶನ ಪಡೆದುಕೊಂಡರು. ಅಲ್ಲಿಗೆ ಸುದೀಪ್ ಇದ್ದಾಗ ದರ್ಶನ್ ಬಂದಿರಲಿಲ್ಲ. ದರ್ಶನ್ ಬಂದಾಗ ಸುದೀಪ್ ಅವರೇ ಅಲ್ಲಿ ಇರಲಿಲ್ಲ.

    ಕನ್ನಡ ಚಿತ್ರರಂಗಕ್ಕೆ ಮುಂದಿನ 'ಯಜಮಾನ' ಯಾರಾಗಬಹುದು.? ಕನ್ನಡ ಚಿತ್ರರಂಗಕ್ಕೆ ಮುಂದಿನ 'ಯಜಮಾನ' ಯಾರಾಗಬಹುದು.?

    ಅಂಬಿ ಅಂತಿಮಯಾತ್ರೆಗೆ ಸುದೀಪ್ ಬರಬೇಕಿತ್ತು

    ಅಂಬಿ ಅಂತಿಮಯಾತ್ರೆಗೆ ಸುದೀಪ್ ಬರಬೇಕಿತ್ತು

    ಕಂಠೀರವ ಸ್ಟೇಡಿಯಂಗೆ ಬಂದಿದ್ದ ಸುದೀಪ್, ಕಂಠೀರವ ಸ್ಟುಡಿಯೋಗೆ ಬರಲಿಲ್ಲ. ಅಂಬಿಯನ್ನ ಆ ಸ್ಥಿತಿಯಲ್ಲಿ ನೋಡಲು ಸಾಧ್ಯವಿಲ್ಲದೆಯೋ ಅಥವಾ ಆ ದುಃಖವನ್ನ ಭರಿಸಲು ಸಾಧ್ಯವಾಗದೆಯೋ ಬಂದಿಲ್ಲ. ಬಟ್, ಬರಬೇಕಾಗಿತ್ತು ಎಂಬ ಅಭಿಪ್ರಾಯ ಅಭಿಮಾನಿಗಳದ್ದು.

    ಅಂಬರೀಶ್ ಬಗ್ಗೆ ಕಿಚ್ಚ ಸುದೀಪ್ ಬರೆದ ಭಾವಪೂರ್ಣ ಪತ್ರ ಇಲ್ಲಿದೆಅಂಬರೀಶ್ ಬಗ್ಗೆ ಕಿಚ್ಚ ಸುದೀಪ್ ಬರೆದ ಭಾವಪೂರ್ಣ ಪತ್ರ ಇಲ್ಲಿದೆ

    ಕೊನೆಯವರೆಗೂ ನಿಂತ ಜೂನಿಯರ್

    ಕೊನೆಯವರೆಗೂ ನಿಂತ ಜೂನಿಯರ್

    ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದ ದರ್ಶನ್, ನೇರವಾಗಿ ಕಂಠೀರವ ಸ್ಟೇಡಿಯಂನಿಂದ ಸ್ಟುಡಿಯೋದವರೆಗೂ ಅಂಬಿ ಅಂತಿಮಯಾತ್ರೆಯಲ್ಲಿ ಹೆಜ್ಜೆಯಿಟ್ಟರು. ಅಂಬರೀಶ್ ಮಗ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದಾಗಲೂ, ಜೊತೆಯಲ್ಲಿ ಇದ್ದ ದರ್ಶನ್ ಅವರನ್ನ ಸಾಂತ್ವನ ಪಡಿಸಿದರು.

    ಅಂಬಿ ಅಂತ್ಯಕ್ರಿಯೆ ವೇಳೆ ಡಿಸಿಪಿ ಅಣ್ಣಾಮಲೈ-ನಟಿ ಜಯಪ್ರದ ನಡುವೆ ಮಾತಿನ ವಾರ್ ಅಂಬಿ ಅಂತ್ಯಕ್ರಿಯೆ ವೇಳೆ ಡಿಸಿಪಿ ಅಣ್ಣಾಮಲೈ-ನಟಿ ಜಯಪ್ರದ ನಡುವೆ ಮಾತಿನ ವಾರ್

    ದಾಸ ಮತ್ತು ಯಶ್

    ದಾಸ ಮತ್ತು ಯಶ್

    ಸುದೀಪ್ ಮತ್ತು ದರ್ಶನ್ ರೀತಿಯೇ ರಾಕಿಂಗ್ ಸ್ಟಾರ್ ಯಶ್ ಕೂಡ ಅಂಬಿಯ ಬಹುದೊಡ್ಡ ಅಭಿಮಾನಿ ಮತ್ತು ಆಪ್ತ ನಟ ಆಗಿದ್ದರು. ಸತತ ಮೂರು ದಿನವೂ ಅಂಬಿಯ ಅಂತ್ಯಸಂಸ್ಕಾರದಲ್ಲಿ ಯಶ್ ಇದ್ದರು. ದರ್ಶನ್, ಯಶ್, ಶಿವಣ್ಣ, ಗಣೇಶ್ ಸೇರಿದಂತೆ ಹಲವು ಕಲಾವಿದರು ಹೆಗಲು ಕೊಟ್ಟು ತಮ್ಮ ಋಣ ತೀರಿಸಿಕೊಂಡರು.

    ಅಂಬಿ ವಿ ಮಿಸ್ ಯೂ....ಕಣ್ಣೀರು ತರಿಸುತ್ತೆ ಅಂತಿಮಯಾತ್ರೆಯ ಈ ಫೋಟೋಗಳು ಅಂಬಿ ವಿ ಮಿಸ್ ಯೂ....ಕಣ್ಣೀರು ತರಿಸುತ್ತೆ ಅಂತಿಮಯಾತ್ರೆಯ ಈ ಫೋಟೋಗಳು

    English summary
    Why Kannada actor kiccha sudeep did not involved in Ambarish funeral at Kanteerava studio.
    Thursday, November 29, 2018, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X