ಅಂದು ಸುದೀಪ್ ತೆಗೆದುಕೊಂಡ ನಿರ್ಧಾರ ಸುಮಲತಾ ಪರ ಪ್ರಚಾರಕ್ಕೆ ಹೋಗದಂತೆ ಕೈ ಕಟ್ಟಿಹಾಕಿದ್ಯಾ?

Recommended Video

Lok Sabha Elections 2019 ಸುದೀಪ್ ತೆಗೆದುಕೊಂಡ ನಿರ್ಧಾರ ಸುಮಲತಾ ಪರ ಪ್ರಚಾರಕ್ಕೆ ಹೋಗದಂತೆ ಕೈ ಕಟ್ಟಿಹಾಕಿದ್ಯಾ?

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ನಿಂತಿದ್ದಾರೆ. ಮನೆ ಮಕ್ಕಳಾಗಿ ಸುಮಲತಾ ಅವರನ್ನ ಗೆಲ್ಲಿಸಲು ಈ ಇಬ್ಬರು ಸ್ಟಾರ್ ನಟರು ಮುಂದಾಗಿದ್ದಾರೆ.

ದರ್ಶನ್, ಯಶ್ ಅವರಂತೆ ನಟ ಸುದೀಪ್ ಕೂಡ ಸುಮಲತಾ ಅವರ ಪರ ಪ್ರಚಾರ ಮಾಡಬೇಕಿತ್ತು ಎಂಬ ಅಭಿಪ್ರಾಯ ಅಭಿಮಾನಿಗಳಲ್ಲಿತ್ತು. ಆದ್ರೆ, ಚಿತ್ರೀಕರಣ ಕಾರಣ ಹೇಳಿ ಸುದೀಪ್ ಬಾಹ್ಯ ಬೆಂಬಲ ನೀಡಿ ಪ್ರಚಾರದಿಂದ ಹಿಂದೆ ಸರಿದಿದ್ದಾರೆ.

ನಟ ದರ್ಶನ್ ಇರುವ ಕಾರಣ ಸುದೀಪ್ ಪ್ರಚಾರಕ್ಕೆ ಹಾಗೂ ಸುಮಲತಾ ಅವರ ನಿಲ್ಲಲು ಹಿಂದೆ ಸರಿಯುತ್ತಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ. ಇದಕ್ಕೆ ಕಾರಣ ಹುಡುಕಿ ಹೊರಟಾಗ, ಅಲ್ಲಿ ಬೇರೆಯದ್ದೇ ಕಾರಣ ಬಹಿರಂಗವಾಗುತ್ತೆ. ಹೌದು, ಅಂದು ತೆಗೆದುಕೊಂಡ ನಿರ್ಧಾರ ಇಂದು ಸುಮಲತಾ ಪರ ಪ್ರಚಾರಕ್ಕೆ ಹೋಗದಂತೆ ಸುದೀಪ್ ಕೈ ಕಟ್ಟಿಹಾಕಿದ್ಯಾ ಎಂಬ ಅನುಮಾನ ಕಾಡ್ತಿದೆ. ಹಾಗಿದ್ರೆ, ಸುದೀಪ್ ತೆಗೆದುಕೊಂಡಿದ್ದ ನಿರ್ಧಾರವೇನು? ಮುಂದೆ ಓದಿ.....

ಪ್ರಚಾರ ಮಾಡಲ್ಲ ಎಂದು ಬಹಿರಂಗ ಪತ್ರ ಬರೆದಿದ್ದ ಸುದೀಪ್

ಪ್ರಚಾರ ಮಾಡಲ್ಲ ಎಂದು ಬಹಿರಂಗ ಪತ್ರ ಬರೆದಿದ್ದ ಸುದೀಪ್

ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜುಗೌಡ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಅವರ ಪರವಾಗಿ ಸುದೀಪ್ ಮತಯಾಚನೆ ಮಾಡಿದ್ರು. ಆದ್ರೆ, ಇದನ್ನ ಖಂಡಿಸಿದ್ದ ಅಭಿಮಾನಿಗಳು, ಸುದೀಪ್ ಅವರನ್ನ ನಾವು ನಟನಾಗಿ ಮಾತ್ರ ನೋಡಲು ಇಷ್ಟಪಡುತ್ತೇವೆ. ಆದ್ರೆ, ನೀವು ಅಭ್ಯರ್ಥಿಗಳ ಪರ ಪ್ರಚಾರ ಮಾಡೋಕೆ ಹೋಗಿದ್ದೀರಾ. ಇದು ತಪ್ಪು. ಹೀಗೆ ಮಾಡಬಾರದಿತ್ತು ಎಂಬ ಟೀಕೆಗಳು, ಬೇಸರದ ಮಾತುಗಳು ಅಭಿಮಾನಿ ವಲಯದಿಂದ ಕೇಳಿ ಬಂತು. ಅದಾದ ಬಳಿಕ ''ಇನ್ಮುಂದೆ ನಾನು ಚುನಾವಣಾ ಪ್ರಚಾರ ಮಾಡುವುದಿಲ್ಲ'' ಎಂದು ಬಹಿರಂಗವಾಗಿ ಪತ್ರ ಬರೆದಿದ್ದರು.

ಈ ನಿರ್ಧಾರವೇ ಸುದೀಪ್ ಕೈ ಕಟ್ಟಿಹಾಕಿದ್ಯಾ?

ಈ ನಿರ್ಧಾರವೇ ಸುದೀಪ್ ಕೈ ಕಟ್ಟಿಹಾಕಿದ್ಯಾ?

ಅಂದು ಕಿಚ್ಚ ಸುದೀಪ್ ತೆಗೆದುಕೊಂಡ ಆ ನಿರ್ಧಾರ ಇಂದು ಸುಮಲತಾ ಅವರ ಪರವಾಗಿ ಪ್ರಚಾರಕ್ಕೆ ಹೋಗದಂತೆ ಕೈ ಕಟ್ಟಿಹಾಕಿದ್ಯಾ ಎಂಬ ಅನುಮಾನ ಕಾಡುತ್ತಿದೆ. ಯಾಕಂದ್ರೆ, ಅಭಿಮಾನಿಗಳ ಭಾವನೆಗೆ ಧಕ್ಕೆ ತರಲು ಇಷ್ಟಪಡದ ಸುದೀಪ್, ಅಂದು ಮಹತ್ವದ ನಿರ್ಧಾರ ಘೋಷಿಸಿದ್ರು. ಈಗೇನಾದರೂ ಅಂಬಿ ಕುಟುಂಬ ಎಂಬ ಕಾರಣಕ್ಕೆ ಪ್ರಚಾರಕ್ಕೆ ಹೋದರೇ, ಅಭಿಮಾನಿಗಳಿಗೆ ಭಾವನೆಗೆ ಮೋಸ ಮಾಡಿದಂತಾಗುತ್ತೆ ಎಂಬ ಆತಂಕ ಕಾಡಿರಬಹುದು.

ಸುದೀಪ್ ಪ್ರಚಾರಕ್ಕೆ ಹೋಗದಿರಲು ದಾಸ ಕಾರಣವಲ್ಲ

ಸುದೀಪ್ ಪ್ರಚಾರಕ್ಕೆ ಹೋಗದಿರಲು ದಾಸ ಕಾರಣವಲ್ಲ

ಹಾಗ್ನೋಡಿದ್ರೆ, ಸುಮಲತಾ ಅವರ ಜೊತೆ ದರ್ಶನ್ ಇರುವಾಗ ನಾನ್ಯಾಕೆ ಎಂದು ಸುದೀಪ್ ಹೇಳಿದ್ದರು. ಆ ಮಾತಿನ ಅರ್ಥ ದರ್ಶನ್ ಮೇಲಿರುವ ಮುನಿಸಿನಿಂದ ಹೇಳಿರಬಹುದು ಎಂಬ ಮಾತು ಚರ್ಚೆಯಾಗ್ತಿದೆ. ಆದ್ರೆ, ಎಷ್ಟರ ಮಟ್ಟಿಗೆ ನಿಜಾನೋ ಗೊತ್ತಿಲ್ಲ. ಬಟ್, ಸುದೀಪ್ ಈ ಹಿಂದಿನ ನಿರ್ಧಾರವನ್ನ ನೋಡಿದ್ರೆ ಅಂದು ತೆಗೆದುಕೊಂಡ ನಿರ್ಧಾರವೇ ಇದಕ್ಕೆ ಕಾರಣ ಎನ್ನಲಾಗಿದೆ.

ದರ್ಶನ್-ಯಶ್ ವಿರುದ್ಧ ತಿರುಗಿಬಿದ್ದ ಕೆಲವರು

ದರ್ಶನ್-ಯಶ್ ವಿರುದ್ಧ ತಿರುಗಿಬಿದ್ದ ಕೆಲವರು

ಸದ್ಯ ಸುಮಲತಾ ಅವರ ಪರವಾಗಿ ಪ್ರಚಾರಕ್ಕೆ ಸಜ್ಜಾಗಿರುವ ನಟ ದರ್ಶನ್ ಮತ್ತು ಯಶ್ ಅವರ ವಿರುದ್ಧ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನೀವು ಸಿನಿಮಾ ನಟರು, ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವುದು ಸರಿಯಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತರಿಸುತ್ತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Why Kannada actor Kiccha Sudeep is not campaigning for Sumalatha in the Mandya Lok Sabha Election? here is the real reason.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X