'ವಿಲನ್' ಚಿತ್ರತಂಡದ ಮೇಲೆ ಸುದೀಪ್ ಮುನಿಸಿಕೊಳ್ಳಲು ಕಾರಣ ಇದೇ.!
Recommended Video

'ದಿ ವಿಲನ್' ಸಿನಿಮಾದ ನಂತರ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಪ್ರೇಮ್ ಮಧ್ಯೆ ಸಣ್ಣ ಮಟ್ಟದ ಬೇಸರ ಮೂಡಿದೆ ಎಂಬ ಮಾತಿದೆ. ಶಿವಣ್ಣನ ಅಭಿಮಾನಿಗಳು ಪ್ರೇಮ್ ವಿರುದ್ಧ ನಿಂದಿಸಿದ್ದು, ಇದರಿಂದ ಕೋಪಿತಗೊಂಡ ಪ್ರೇಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ಎಲ್ಲವೂ ಗೊತ್ತಿರೋ ವಿಚಾರ.
ಇನ್ನು ಸಿನಿಮಾ ರಿಲೀಸ್ ಆಗಿದ್ದಾಗ ಇದ್ದ ಉತ್ಸಾಹ ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರತಂಡಕ್ಕೆ ಇರಲಿಲ್ಲ ಎಂಬುದು ಸತ್ಯ. ಯಾಕಂದ್ರೆ, ಸಿನಿಮಾ 25 ಹಾಗೂ 50 ದಿನ ಪೂರೈಸಿದಾಗಲೂ ಯಾವ ಸಂಭ್ರಮವೂ ವಿಲನ್ ತಂಡದಲ್ಲಿ ಕಂಡಿಲ್ಲ.
ಈ ಬಗ್ಗೆ ಸ್ವತಃ ಸುದೀಪ್ ಅವರೇ ಒಮ್ಮೆ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು. ಇನ್ನು ವಿಲನ್ ಸಿನಿಮಾ ಹಿಟ್ ಅಥವಾ ಫ್ಲಾಫ್ ಅಂತ ನೋಡುವುದಾರೇ ಈ ಸಿನಿಮಾ ತುಂಬಾ ಚೆನ್ನಾಗಿತ್ತು ಅಂತಾರೆ ಕಿಚ್ಚ ಸುದೀಪ್. ಬಟ್, ಸಿನಿಮಾ ತಂಡದ ನಡೆಯ ಬಗ್ಗೆ ಬೇಸರ ಈಗಲೂ ಇದೆ ಎಂದಿದ್ದಾರೆ. ಅಷ್ಟಕ್ಕೂ, ವಿಲನ್ ಚಿತ್ರಕ್ಕೆ ಮೋಸ ಆಯ್ತಾ? ಏನಿದು ವಿಲನ್ ಅಸಲಿ ಕಥೆ? ಮುಂದೆ ಓದಿ......

'ವಿಲನ್' ಒಳ್ಳೆಯ ಸಿನಿಮಾ
'ದಿ ವಿಲನ್' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಬಂದಿತ್ತು. ಸಿನಿಮಾ ಇಷ್ಟಪಟ್ಟವರಿಗಿಂತ ವಿಲನ್ ಚೆನ್ನಾಗಿಲ್ಲ ಎಂಬ ಅಭಿಪ್ರಾಯವೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿತ್ತು. ಈ ಬಗ್ಗೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಸುದೀಪ್ ''ವಿಲನ್ ಬಹಳ ಅದ್ಭುತವಾಗಿದ್ದ ಚಿತ್ರ. ಈ ಸಿನಿಮಾದಲ್ಲಿ ತಪ್ಪು ಎನ್ನುವುದು ಏನೂ ಇಲ್ಲ. ರೆಸ್ಪಾನ್ಸ್ ತುಂಬಾ ಚೆನ್ನಾಗಿತ್ತು. ಬಟ್, ಮೊದಲ ದಿನವೇ ನೆಗಿಟೀವ್ ರೆಸ್ಪಾನ್ಸ್ ಹೇಳಿ ಹೇಳಿ, ಜನರ ಮೈಂಡ್ ಸೆಟ್ ಬದಲಾಯಿಸಿಬಿಟ್ಟರು. ಅದೇ ಸಮಸ್ಯೆಯಾಗಿದ್ದು'' ಎಂದು ಸುದೀಪ್ ಬೇಸರ ವ್ಯಕ್ತಪಡಿಸಿದರು.

ಪ್ರೇಮ್ ತಪ್ಪು ಮಾಡಿಲ್ಲ
ಸಿನಿಮಾಗೆ ಹೋಗುವುದಕ್ಕೆ ಮುಂಚೆಯೇ ಚೆನ್ನಾಗಿಲ್ಲ ಚೆನ್ನಾಗಿಲ್ಲ ಎಂಬ ಅಭಿಪ್ರಾಯವನ್ನ ಮಾರಾಟ ಮಾಡ್ತಿದ್ದಾರೆ. ಅದೇನ್ ಆಗುತ್ತೆ ಅಂದ್ರೆ ಅವರ ಮೈಂಡ್ ನಲ್ಲಿ ಅದೇ ಫಿಕ್ಸ್ ಆಗಿ ಬಿಡುಗಡೆಯಾತ್ತೆ. ಇದು ತುಂಬಾ ಅಪಾಯ ಆಗಿ ಪರಿಣಾಮ ಆಗ್ತಿದೆ. ಅದನ್ನ ಬಿಟ್ಟರೇ ಪ್ರೇಮ್ ತಪ್ಪು ಮಾಡಿಲ್ಲ'' ಎಂದು ಕಿಚ್ಚ ಅಭಿಪ್ರಾಯ ಪಟ್ಟರು.

ಯಾಕೆ ಪ್ರಮೋಟ್ ಮಾಡಿಲ್ಲ
''ಸಿನಿಮಾ ರಿಲೀಸ್ ಆದ್ಮೇಲೆ ಒಂದು ವಾರಕ್ಕೆ ಯಾರೂ ಕಾಣಿಸಿಲ್ಲ. ಇದು ಸಹಜವಾಗಿ ಬೇಜಾರಾಗುತ್ತೆ. 25 ದಿನ ಪೋಸ್ಟರ್ ಇಲ್ಲ, 50 ದಿನ ಪೋಸ್ಟರ್ ಇಲ್ಲ. ಪೇಪರ್ ಜಾಹೀರಾತಿಲ್ಲ. ಇವರು ಕೇಳಿದ್ರೆ ಅವರು, ಅವರನ್ನ ಕೇಳಿದ್ರೆ ಇವರು. ಇದು ತಪ್ಪು'' ಎಂದು ಸುದೀಪ್ ಹೇಳಿದ್ರು.

ವಿಲನ್ ಅನಾಥವಾಗಿದ್ದಂತೂ ನಿಜಾ
ಫ್ಯಾನ್ಸ್ ವಾರ್, ರೆಸ್ಪಾನ್ಸ್, ಸೋಶಿಯಲ್ ಮೀಡಿಯಾದಲ್ಲಿ ಫೈಟ್ ಇದೆಲ್ಲದರ ಮಧ್ಯೆ ವಿಲನ್ ಸಿನಿಮಾ ಅನಾಥವಾಯ್ತು. ಮೊದಲ ದಿನದಲ್ಲಿ ಇದ್ದ ಉತ್ಸಾಹ ಎರಡನೇ ದಿನ ಕಾಣಲಿಲ್ಲ. ಪ್ರಚಾರ ಮಾಡಲಿಲ್ಲ, ಗಳಿಕೆ ಬಹಿರಂಗವಾಗಿಲ್ಲ. ಒಟ್ನಲ್ಲಿ, ಅಪರೂಪಕ್ಕೆ ಇಬ್ಬರು ಸ್ಟಾರ್ ಗಳು ಸೇರಿ ಮಾಡಿದ 'ವಿಲನ್' ಎಲ್ಲರ ಪಾಲಿಗೂ ವಿಲನ್ ಆಗಿಬಿಡ್ತು.
'ದಿ ವಿಲನ್' ತಂಡದ ಮೇಲೆ ಬೇಸರಗೊಂಡರಾ ಸುದೀಪ್?


Click it and Unblock the Notifications











