For Quick Alerts
  ALLOW NOTIFICATIONS  
  For Daily Alerts

  ವಿಘ್ನಗಳನ್ನ ದಾಟಿ '50' ಮುಟ್ಟಿದ 'ದಿ ವಿಲನ್': ಸಂತಸದಲ್ಲೂ ಯಾಕೆ ಈ ನಿರ್ಲಕ್ಷ್ಯ.?

  By Abhimani
  |
  ಹೆತ್ತವರು, ಪೋಷಕರಿದ್ದು 'ಅನಾಥ'ವಾಯ್ತಾ 'ದಿ ವಿಲನ್'? | FILMIBEAT KANNADA

  ಸಿನಿಮಾ ರಿಲೀಸ್ ಗೆ ಮುಂಚೆ ಇದ್ದ ಉತ್ಸಾಹ, ಹುಮ್ಮಸ್ಸು 'ದಿ ವಿಲನ್' ಚಿತ್ರದ ಯಾವೊಬ್ಬ ಸದಸ್ಯರಲ್ಲಿ ಕಾಣ್ತಿಲ್ಲ. ರಿಲೀಸ್ ಗೆ ಮುಂಚೆ, ದಿನಕ್ಕೊಂದು ವಿಷ್ಯ, ಕ್ಷಣಕ್ಕೊಂದು ಟ್ವೀಟ್, ಪೋಸ್ಟರ್, ಹಾಡು, ಸಂದರ್ಶನಗಳು ಹೀಗೆ ಭರ್ಜರಿಯಾಗಿ ಪ್ರಚಾರ ಮಾಡಿದ್ರು.

  ಆದ್ರೆ, ಸಿನಿಮಾ ರಿಲೀಸ್ ಆದ್ಮೇಲೆ ಯಾರೂ ಕೂಡ ವಿಲನ್ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಎಲ್ಲೋ ಒಂದು ಕಡೆ ವಿಲನ್ ಸಿನಿಮಾ 'ಅನಾಥ'ವಾಯ್ತು ಎಂಬ ಭಾವನೆ ಮೂಡಿದೆ. ಹೆತ್ತವರು, ಪೋಷಕರು ಇದ್ದು ಕೂಡ ನಡುಬೀದಿಯಲ್ಲಿ ಬಿಟ್ಟು ಹೋದರ ಎಂಬ ಅನುಮಾನ ಕಾಡುತ್ತಿದೆ.

  'ವಿಲನ್' ಮೊದಲ ರಿವ್ಯೂ: ಫಸ್ಟ್ ಹಾಫ್ ಚಿಂದಿ, ಸೆಕೆಂಡ್ ಹಾಫ್.? 'ವಿಲನ್' ಮೊದಲ ರಿವ್ಯೂ: ಫಸ್ಟ್ ಹಾಫ್ ಚಿಂದಿ, ಸೆಕೆಂಡ್ ಹಾಫ್.?

  ಸಿನಿಮಾ ಚೆನ್ನಾಗಿಲ್ಲ ಅಂದ್ರು ಅದೆಷ್ಟೋ ಚಿತ್ರತಂಡಗಳು, ಬಿಟ್ಟುಬಿಡದ ಹಾಗೆ ಪ್ರಚಾರ ಮಾಡಿರುವ ಉದಾಹರಣೆ ಇದೆ. ಆದ್ರೆ, ವಿಲನ್ ಕನ್ನಡ ಚಿತ್ರರಂಗವನ್ನ ಹೊಸ ದಿಕ್ಕಿಗೆ ಕರೆದುಕೊಂಡು ಹೋಗುತ್ತೆ ಎಂದು ನಂಬಿದ್ದ ಸಿನಿಮಾ. ಆದ್ರೀಗ, ಈ ಚಿತ್ರದ ಬಗ್ಗೆ ಕೇಳೋರೆ ಇಲ್ಲ. ಯಾಕೆ ಹೀಗೆ.? ಮುಂದೆ ಓದಿ....

  50 ದಿನ ಪೂರೈಸಿದ್ರು ಸಂಭ್ರಮವಿಲ್ಲ

  50 ದಿನ ಪೂರೈಸಿದ್ರು ಸಂಭ್ರಮವಿಲ್ಲ

  'ದಿ ವಿಲನ್' ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ. ಆದ್ರೆ, ಕಿಚ್ಚ ಸುದೀಪ್ ಅವರ ಒಂದು ಟ್ವೀಟ್ ಬಿಟ್ಟರೇ, ಬೇರೆ ಯಾವ ಚಟುವಟಿಕೆಗಳು ಕಾಣ್ತಿಲ್ಲ. ನಿರ್ದೇಶಕ, ನಿರ್ಮಾಪಕರು ಈ ಬಗ್ಗೆ ಯೋಚನೆ ಮಾಡಿಲ್ವಾ ಅಥವಾ ಬೇಡ ಬಿಡು ಎಂದು ಸುಮ್ಮನಾದ್ರ ಗೊತ್ತಿಲ್ಲ. ಬಟ್, ವಿಲನ್ ಅಂತಹ ಸಿನಿಮಾ ಅರ್ಧಶತಕವಾಗಿದೆ ಎಂಬುದು ಖುಷಿಯ ವಿಷ್ಯ. ಆದ್ರೆ, ಈ ಸಿನಿಮಾ ಬಂದೇ ಇಲ್ವೇನೋ ಅನ್ನೋತರ ಆಗಿದೆ.

  50 ದಿನ ಪೂರೈಸಿದ 'ದಿ ವಿಲನ್'ಗೆ ಶುಭಕೋರಿದ ಸುದೀಪ್ 50 ದಿನ ಪೂರೈಸಿದ 'ದಿ ವಿಲನ್'ಗೆ ಶುಭಕೋರಿದ ಸುದೀಪ್

  ಚಿತ್ರವನ್ನ ಪ್ರಚಾರ ಮಾಡ್ಲಿಲ್ಲ ಯಾಕೆ?

  ಚಿತ್ರವನ್ನ ಪ್ರಚಾರ ಮಾಡ್ಲಿಲ್ಲ ಯಾಕೆ?

  ಸಿನಿಮಾ ಬಗ್ಗೆ ಏನೇ ಪ್ರತಿಕ್ರಿಯೆ ಬಂದರೂ, ಪ್ರಚಾರ ಮಾಡಬೇಕಾಗಿತ್ತು. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿಕೊಂಡರೇ, ವಿಲನ್ ಗೆ ಹೆಚ್ಚು ಪ್ರಚಾರ ಅಗತ್ಯವಿತ್ತು. ಆದ್ರೆ, ನಾಲ್ಕೈದು ದಿನದ ನಂತರ ವಿಲನ್ ಸಿನಿಮಾ ಬಗ್ಗೆ ಎಲ್ಲಿಯೂ ಪ್ರಚಾರ ಅಥವಾ ವಿಶೇಷ ಚಟುವಟಿಕೆಗಳು ನಡೆಯಲೇ ಇಲ್ಲ. ಚಿತ್ರಕ್ಕೆ ಬಂದ ಮಿಶ್ರಪ್ರತಿಕ್ರಿಯೆಯಿಂದ ನಿರ್ಲಕ್ಷ್ಯ ಮಾಡಿದ್ರಾ?

  ಪೈರಸಿ ಬಗ್ಗೆ ಡೋಂಟ್ ಕೇರ್

  ಪೈರಸಿ ಬಗ್ಗೆ ಡೋಂಟ್ ಕೇರ್

  ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನವಾಗ್ತಿದೆ. ಹೀಗಿದ್ದರೂ ಎಚ್.ಡಿ ಕ್ವಾಲಿಟಿಯಲ್ಲಿ ವಿಲನ್ ಸಿನಿಮಾ ಪೈರಸಿಯಾಗಿತ್ತು. ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ವಿಲನ್ ಸಿನಿಮಾ ಲಿಂಕ್ ಹರಿದಾಡುತ್ತಿತ್ತು. ಈ ಬಗ್ಗೆ ವಿಲನ್ ತಂಡದ ಯಾವ ಸದಸ್ಯರು ಕೂಡ ಮಧ್ಯಪ್ರವೇಶ ಮಾಡಲಿಲ್ಲ. ಸೈಬರ್ ಕ್ರೈಂನಲ್ಲಿ ದೂರು ಅಥವಾ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರ ಬಗ್ಗೆ ಮಾಹಿತಿ ಇಲ್ಲ.

  'ಏಡ್ಸ್'ಗಿಂತ ದೊಡ್ಡ ರೋಗಕ್ಕೆ 'ವಿಲನ್' ಬಲಿ: ಸುದ್ದಿ ಮುಟ್ಟಿಸಿದ ಪ್ರಥಮ್ 'ಏಡ್ಸ್'ಗಿಂತ ದೊಡ್ಡ ರೋಗಕ್ಕೆ 'ವಿಲನ್' ಬಲಿ: ಸುದ್ದಿ ಮುಟ್ಟಿಸಿದ ಪ್ರಥಮ್

  ಕಲೆಕ್ಷನ್ ಗುಟ್ಟಾಗಿಯೇ ಉಳಿದುಬಿಡ್ತು

  ಕಲೆಕ್ಷನ್ ಗುಟ್ಟಾಗಿಯೇ ಉಳಿದುಬಿಡ್ತು

  ಸಿನಿಮಾ ಬಿಡುಗಡೆಗೂ ಮುಂಚೆ 'ದಿ ವಿಲನ್' ಸಿನಿಮಾ ನೂರು ಕೋಟಿ ಗಳಿಸುತ್ತೆ ಎನ್ನಲಾಯಿತು. ಅದರಂತೆ ಮೊದಲ ದಿನ ಗಳಿಕೆ 20 ಕೋಟಿ ಎಂದು ಸ್ವತಃ ಪ್ರೇಮ್ ಹೇಳಿದ್ದರು. ಆಮೇಲೆ ಕಲೆಕ್ಷನ್ ಏನಾಯ್ತು? 50 ಕೋಟಿ ದಾಟಿತಾ, 100 ಕೋಟಿ ಗಳಿಸಿತಾ ಎಂಬುದನ್ನ ಯಾರೂ ಹೇಳಿಲ್ಲ. ದೊಡ್ಡ ಮಟ್ಟದ ಕಲೆಕ್ಷನ್ ಆಗಿರಬಹುದು. ಅದನ್ನ ಬಹಿರಂಗವಾಗಿ ಘೋಷಿಸಿ, ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಬಹುದಿತ್ತು.

  'ದಿ ವಿಲನ್' ಚಿತ್ರದಲ್ಲಿ ಶಿವಣ್ಣನ ಅಸಲಿ ಗೆಟಪ್ ಇದಾಗಬೇಕಿತ್ತಂತೆ.! 'ದಿ ವಿಲನ್' ಚಿತ್ರದಲ್ಲಿ ಶಿವಣ್ಣನ ಅಸಲಿ ಗೆಟಪ್ ಇದಾಗಬೇಕಿತ್ತಂತೆ.!

  ಸಕ್ಸಸ್ ಮೀಟ್ ಮಾಡಲಿಲ್ಲ

  ಸಕ್ಸಸ್ ಮೀಟ್ ಮಾಡಲಿಲ್ಲ

  ಆಡಿಯೋ ರಿಲೀಸ್ ಭಾರತ ಮತ್ತು ದುಬೈನಲ್ಲಿ ಎರಡು ಕಡೆ ಮಾಡಿದ್ರು. ಪ್ರತಿಯೊಂದನ್ನ ಪ್ಲಾನ್ ಮಾಡಿ ಪ್ರಚಾರ ಮಾಡಿದ್ರು. ಆದ್ರೆ, ಸಿನಿಮಾ ಸಕ್ಸಸ್ ಆಯ್ತು ಅಥವಾ ಹೆಚ್ಚು ಗಳಿಕೆ ಕಂಡಿದೆ ಎಂದು ಸಕ್ಸಸ್ ಮೀಟ್ ಕೂಡ ಮಾಡಿಲ್ಲ. ಸಾಧಾರಣ ಸಿನಿಮಾ ತಂಡದವರು ಕೂಡ ಈಗ ಸಕ್ಸಸ್ ಮೀಟ್ ಮಾಡ್ತಾರೆ. ಆದ್ರೆ, ಸುದೀಪ್-ಶಿವಣ್ಣ ಅಂತಹ ನಟರನ್ನೊಳಗೊಂಡು ಚಿತ್ರ ಸಕ್ಸಸ್ ಮೀಟ್ ಮಾಡ್ಲಿಲ್ಲ.

  ಇತಿಹಾಸ ಸೃಷ್ಟಿಸಿದ 'ದಿ ವಿಲನ್': ದಾಖಲೆ ಬೆಲೆಗೆ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್.! ಇತಿಹಾಸ ಸೃಷ್ಟಿಸಿದ 'ದಿ ವಿಲನ್': ದಾಖಲೆ ಬೆಲೆಗೆ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್.!

  ಒಳಜಗಳ ಕಾರಣಾವಾಯ್ತಾ.?

  ಒಳಜಗಳ ಕಾರಣಾವಾಯ್ತಾ.?

  ವಿಲನ್ ಸಿನಿಮಾ ಮಿಶ್ರಪ್ರತಿಕ್ರಿಯೆ ಬಂತು. ಶಿವಣ್ಣನ ಪಾತ್ರ ಕಡಿಮೆ ಇದೆ ಹಾಗೂ ಸುದೀಪ್ ಅವರು ಶಿವಣ್ಣನಿಗೆ ಹೊಡೆಯುವ ದೃಶ್ಯ ತೆಗೆಯಬೇಕು ಎಂಬ ಗಲಾಟೆ ಆಯ್ತು. ಇದರಿಂದ ಪ್ರೇಮ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳ ನಡುವೆ ವಾಕ್ಸಮರ ಆಗೋಯ್ತು. ಪ್ರೇಮ್ ಅವರನ್ನ ವೈಯಕ್ತಿಕವಾಗಿ ನಿಂದಿಸಿದ ಕೆಲವರ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಅಲ್ಲಿಂದ ವಿಲನ್ ಸಿನಿಮಾದ ಬಗ್ಗೆ ಪ್ರೇಮ್ ಮಾತನಾಡುವುದನ್ನೇ ಬಿಟ್ಟರು. ಅಲ್ಲಿಗೆ ವಿಲನ್ ನಿಜವಾಗಲೂ ಅನಾಥವಾಯ್ತು.

  English summary
  Kannada actor, kiccha sudeep and shivaraj kumar starrer the villain movie completes 50 days. but, no celebration from film team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X