'ಅಗ್ನಿಸಾಕ್ಷಿ' ನಟ ಅಖಿಲ್ ವಿರುದ್ಧ ದೂರು ಕೊಟ್ಟ ಪತ್ನಿ ಶ್ರುತಿ.!
Recommended Video

'ಅಗ್ನಿಸಾಕ್ಷಿ' ಧಾರಾವಾಹಿಯ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಮೊನ್ನೆ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುದ್ದಿ ಆಗಿದ್ದರು. ಇದೀಗ ಅದೇ 'ಅಗ್ನಿಸಾಕ್ಷಿ' ಸೀರಿಯಲ್ ನ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಎರಡು ವರ್ಷಗಳ ಹಿಂದೆಯಷ್ಟೇ ಮದುವೆ ಆಗಿದ್ದ ರಾಜೇಶ್ ಧ್ರುವ ವಿರುದ್ಧ ಪತ್ನಿ ಶ್ರುತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವರದಕ್ಷಿಣೆ ತಂದಿಲ್ಲ ಅಂತ್ಹೇಳಿ ಮಾನಸಿಕ ಕಿರುಕುಳ ನೀಡುತ್ತಿದ್ದ ರಾಜೇಶ್ ಧ್ರುವ, ಪತ್ನಿ ಶ್ರುತಿ ರವರನ್ನು ಮನೆಯಿಂದ ಹೊರಹಾಕಿದ್ದಾರಂತೆ. ಹೀಗಾಗಿ, ಪೊಲೀಸ್ ಸ್ಟೇಷನ್ ನಲ್ಲಿ ಶ್ರುತಿ ದೂರು ಕೊಟ್ಟಿದ್ದಾರೆ.
ದೂರಿನ ಸಂಬಂಧ ರಾಜೇಶ್ ಧ್ರುವ ಆಗಲಿ, ಶ್ರುತಿ ಆಗಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. 'ಅಗ್ನಿಸಾಕ್ಷಿ' ಧಾರಾವಾಹಿ ತಂಡ ಕೂಡ ಈ ಕುರಿತು ತುಟಿಕ್ ಪಿಟಿಕ್ ಎಂದಿಲ್ಲ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

2017 ರಲ್ಲಿ ಮದುವೆ ಆಗಿದ್ದ ರಾಜೇಶ್ ಧ್ರುವ
2017 ರಲ್ಲಿ ಶ್ರುತಿ ಎಂಬುವರನ್ನು ರಾಜೇಶ್ ಧ್ರುವ ಮದುವೆ ಆಗಿದ್ದರು. ಮದುವೆಗೂ ಮುನ್ನ ಇವರಿಬ್ಬರು ಲಿವಿಂಗ್ ಟು ಗೆದರ್ ರಿಲೇಶನ್ ಶಿಪ್ ನಲ್ಲಿದ್ದರು. ಬಳಿಕ ಕುಟುಂಬಸ್ಥರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಇಬ್ಬರು ಕಾಲಿಟ್ಟಿದ್ದರು.

ಮುಖ್ಯಮಂತ್ರಿ ಚಂದ್ರು ಮನೆಯಲ್ಲಿ ಬಾಡಿಗೆ
ರಾಜೇಶ್ ಧ್ರುವ-ಶ್ರುತಿ ಮದುವೆ ಆದ್ಮೇಲೆ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು ಎನ್ನಲಾಗಿದೆ. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮುಖ್ಯಮಂತ್ರಿ ಚಂದ್ರು ಕೂಡ ನಟಿಸುತ್ತಿದ್ದರು ಎಂಬುದು ನಿಮಗೂ ಗೊತ್ತಿದೆ.

ಧ್ರುವಗೆ ಬೇರೆ ಅಫೇರ್.?
ಶ್ರುತಿ ಎಂಬುವರನ್ನು ಮದುವೆ ಆಗಿದ್ದರೂ, ಅದನ್ನ ರಾಜೇಶ್ ಧ್ರುವ ಹೊರಗೆಲ್ಲೂ ಹೇಳಿಕೊಳ್ಳುತ್ತಿರಲಿಲ್ಲವಂತೆ. ''ನನಗೆ ಮದುವೆ ಆಗಿಲ್ಲ'' ಎಂದು ಎಲ್ಲೆಡೆ ರಾಜೇಶ್ ಧ್ರುವ ಹೇಳಿಕೊಂಡು ತಿರುಗುತ್ತಿದ್ದರಂತೆ. ಅಲ್ಲದೇ, ಬೇರೆ ಯುವತಿಯರ ಜೊತೆಗೆ ರಾಜೇಶ್ ಧ್ರುವ ಅಫೇರ್ ಇಟ್ಟುಕೊಂಡಿದ್ದಾರೆ ಎಂದು ಶ್ರುತಿ ಆರೋಪಿಸಿದ್ದಾರೆ.

ತಕಧಿಮಿತ ಶೋನಲ್ಲಿ ರಾಜೇಶ್ ಧ್ರುವ
ಸದ್ಯ ರಾಜೇಶ್ ಧ್ರುವ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಈ ನಡುವೆಯೇ ರಾಜೇಶ್ ಧ್ರುವ ವಿರುದ್ಧ ಪತ್ನಿ ಆರೋಪ ಮಾಡಿದ್ದಾರೆ. ಮುಂದೆ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೋ, ನೋಡಬೇಕು.


Click it and Unblock the Notifications











