ಬಾಲಕೃಷ್ಣ ಬಗ್ಗೆ ವಿಕಿಪೀಡಿಯ ದೊಡ್ಡ ಎಡವಟ್ಟು: ಅಭಿಮಾನಿಗಳು ಶಾಕ್.!

58ನೇ ವಯಸ್ಸಿನಲ್ಲೂ ಅದೇ ಜೋಶ್, ಅದೇ ಎನರ್ಜಿ ಇಟ್ಟುಕೊಂಡಿರುವ ಬಾಲಯ್ಯ, ಈಗಲೂ ಫಟಾಫಟ್ ಅಂತ ಡೈಲಾಗ್ ಉದುರಿಸ್ತಾರೆ, ಜಬರ್ ದಸ್ತ್ ಡ್ಯಾನ್ಸ್ ಮಾಡ್ತಾರೆ, ಚಿಂದಿ ಉಡಾಯಿಸುವಂತಹ ಫೈಟ್ ಮಾಡ್ತಾರೆ. ಬಾಲಕೃಷ್ಣ ಅವರ ಈ ಹುಮ್ಮಸ್ಸು ನೋಡಿದ್ರೆ ಇವರಿಗೆ 58 ವರ್ಷನಾ ಅಂತಹ ಅನುಮಾನ ಬರುತ್ತೆ.

ತೆಲುಗು ಇಂಡಸ್ಟ್ರಿಯ ಸೂಪರ್ ಸ್ಟಾರ್ ನಟ ಬಾಲಕೃಷ್ಣ ಒಂದು ಕಡೆ ರಾಜಕೀಯ ಮತ್ತು ಮತ್ತೊಂದೆಡೆ ಸಿನಿಮಾರಂಗದಲ್ಲಿ ಸಿಂಹದಂತೆ ಹೆಜ್ಜೆ ಘರ್ಜಿಸ್ತಿದ್ದಾರೆ.

ಸದ್ಯ, ಲೆಜೆಂಡ್ ನಟ ಎನ್.ಟಿ.ಆರ್ (ಬಾಲಕೃಷ್ಣ ತಂದೆ) ಅವರ ಬಯೋಪಿಕ್ ಚಿತ್ರದಲ್ಲಿ ನಟಿಸುತ್ತಿರುವ ಬಾಲಕೃಷ್ಣ ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಇದಾದ ಬಳಿಕ 'ಕ್ರಾಂತಿ' ಎಂಬ ಸಿನಿಮ ಆರಂಭಿಸಲಿದ್ದಾರೆ. ಇಷ್ಟೆಲ್ಲಾ ಆಕ್ಟೀವ್ ಆಗಿರುವ ಬಾಲಯ್ಯನ ಕುರಿತು ವಿಕಿಪೀಡಿಯ ದೊಡ್ಡ ಎಡವಟ್ಟು ಮಾಡಿದೆ. ಇದನ್ನೆ ಗಮನಿಸಿದ ಚಿತ್ರರಂಗ ಮತ್ತು ಅಭಿಮಾನಿ ಬಳಗ ಆಚ್ಚರಿಗೊಳಗಾಗಿದ್ದರು. ಅದೇನ್ ಅದು.? ಮುಂದೆ ಓದಿ.....

ಬಾಲಯ್ಯನ ಕೊಂದುಬಿಟ್ಟಿದ್ದ ವಿಕಿಪೀಡಿಯ

ಬಾಲಯ್ಯನ ಕೊಂದುಬಿಟ್ಟಿದ್ದ ವಿಕಿಪೀಡಿಯ

ಬಾಲಕೃಷ್ಣ ಅವರ ವಿಕಿಪೀಡಿಯದಲ್ಲಿ ಬಾಲಕೃಷ್ಣ ಅವರನ್ನ ಸಾಯಿಸಲಾಗಿತ್ತು. ಇದನ್ನ ಕಂಡ ನೆಟ್ಟಿಗರು ಕೆಲ ಕಾಲ ದಿಗ್ಬ್ರಮೆಗೊಂಡಿದ್ದಾರೆ. ಬಾಲಕೃಷ್ಣ ಅವರ ಹುಟ್ಟಿದ ದಿನ ಮತ್ತು ಸಾವಿನ ದಿನವನ್ನ ವಿಕಿಪೀಡಿಯ ಪ್ರಕಟಿಸಿತ್ತು. 1913 ನವೆಂಬರ್ 2 ರಂದು ಹುಟ್ಟಿದ್ದ ಬಾಲಕೃಷ್ಣ, 19 ಜುಲೈನಲ್ಲಿ 1995 ರಲ್ಲಿ ನಿಧನರಾಗಿದ್ದಾರೆ ಎಂದು ತೋರಿಸಿತ್ತು.

ಬೆಂಗಳೂರಿನಲ್ಲಿ ಮರಣ

ಬೆಂಗಳೂರಿನಲ್ಲಿ ಮರಣ

ಅಷ್ಟೇ ಅಲ್ಲದೇ, ಬಾಲಕೃಷ್ಣ ಅವರ ಹುಟ್ಟಿದ ಸ್ಥಳದಲ್ಲೂ ವ್ಯತ್ಯಾಸವಾಗಿತ್ತು. ಕರ್ನಾಟಕದ ಅರಸಿಕೆರೆಯಲ್ಲಿ ಜನಸಿದ್ದ ಬಾಲಕೃಷ್ಣ ಅವರು ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದರು ಎಂದು ಗೂಗಲ್ ತೋರಿಸಿತ್ತು. ಇದರಿಂದ ಅಭಿಮಾನಿಗಳು ಅಚ್ಚರಿಗೊಳಗಾದರು.

ಅದು ಕನ್ನಡ ನಟ ಬಾಲಯ್ಯ

ಅದು ಕನ್ನಡ ನಟ ಬಾಲಯ್ಯ

ಅಂದ್ಹಾಗೆ, ತೆಲುಗು ನಟ ಬಾಲಕೃಷ್ಣ ಅವರ ವಿಕಿಪೀಡಿಯದಲ್ಲಿ ತೋರಿಸಿದ್ದ ಡೆತ್ ಡೇಟ್ ಮತ್ತು ಹುಟ್ಟಿದ ದಿನ ವಾಟ್ಸಾಪ್, ಫೇಸ್ ಬುಕ್ ಶೇರ್ ಆಗಿತ್ತು. ಆದ್ರೆ, ಅದು ನಿಜವಾಗಲೂ ತೆಲುಗು ನಟ ಬಾಲಕೃಷ್ಣ ಅವರದ್ದಲ್ಲ. ಕನ್ನಡ ನಟ ಬಾಲಕೃಷ್ಣ ಅವರದ್ದು. ಬಟ್, ಗೂಗಲ್ ಎಡವಟ್ಟಿನಿಂದ ತೆಲುಗು ಬಾಲಕೃಷ್ಣನ ವಿಕಿಪೀಡಿಯದಲ್ಲಿ ಇದು ಗೋಚರವಾಗಿದ್ದು ಈ ಗೊಂದಲಕ್ಕೆ ಕಾರಣವಾಯಿತು.

ಬಾಲಕೃಷ್ಣ ನಿಜವಾದ ವಿಕಿಪೀಡಿಯದಲ್ಲಿ ಏನಿದೆ.?

ಬಾಲಕೃಷ್ಣ ನಿಜವಾದ ವಿಕಿಪೀಡಿಯದಲ್ಲಿ ಏನಿದೆ.?

ಇನ್ನು ಬಾಲಕೃಷ್ಣ ಅವರ ವಿಕಿಪೀಡಿಯ ಪ್ರಕಾರ, ಜೂನ್ 10, 1960 ರಲ್ಲಿ ಜನಿಸಿದ್ದಾರೆ. ಇವರು ಹುಟ್ಟಿದ ಸ್ಥಳ ಮದ್ರಾಸ್ ನಲ್ಲಿ. ಈ ರೀತಿ ಗೂಗಲ್ ಯಡವಟ್ಟು ಮಾಡ್ತಿರೋದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಹಲವು ಸೆಲೆಬ್ರಿಟಿಗಳ ಬಗ್ಗೆ ಹೀಗೆ ತಪ್ಪು ಮಾಡಿದೆ.

More from Filmibeat

English summary
wikipedia was shows wrong information about telugu actor nandamuri balakrishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X