ಅಮೀರ್ ಖಾನ್ ಜೊತೆ ಕಾಣಿಸಿಕೊಂಡ ಸುದೀಪ್, ಈ 'ಅಪೂರ್ವ ಸಂಗಮ'ದ ಹಿಂದಿನ ಅಸಲಿ ಕಥೆಯೇನು..?

ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಅಮೀರ್ ಖಾನ್. ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಅಮೀರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್‌ನ ಗೇಮ್ ಚೇಂಜರ್ ಕೂಡ ಹೌದು.

ಬಹುಶಃ ತಮ್ಮ ಪಾಡಿಗೆ ತಾವೂ ಇದ್ದು, ಕೇವಲ ಒಂದು ಚಿತ್ರದ ಮೂಲಕ ಸುದ್ದಿಯಾಗುವ ಕಲೆ ಅಮೀರ್ ಖಾನ್‌ಗಷ್ಟೇ ಗೊತ್ತು. ಯಾಕೆಂದರೆ, ಬಾಲಿವುಡ್ ಒಂದು ಸಿದ್ಧ ಮಾದರಿಯ ಹಿಂದೆ ಬಿದ್ದಾಗ ಭಿನ್ನವಾದ ಹಾದಿಯನ್ನು ತುಳಿದವರು ಅಮೀರ್ ಖಾನ್. ಕೇವಲ ಕಮರ್ಷಿಯಲ್ ಚಿತ್ರಗಳನ್ನಷ್ಟೇ ಮಾಡದೇ ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದರು.

Will Aamir Khan and Kichcha Sudeep Share the Screen Viral Photo of Both Superstars Raises Eyebrows

ಇಂಥಾ ಅಮೀರ್ ಖಾನ್ ಜೊತೆ ನಮ್ಮ ಕಿಚ್ಚ ಸುದೀಪ ಸಿನಿಮಾ ಮಾಡ್ತಾರಾ ಗೊತ್ತಿಲ್ಲ. ಆದರೆ ಸದ್ಯಕ್ಕೆ ಈ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಕಾರಣವಾಗಿರುವುದು ಒಂದು ಫೋಟೊ ಅನ್ನುವುದು ವಿಶೇಷ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಅಮೀರ್ ಖಾನ್ ಮತ್ತು ಸುದೀಪ್ ಜೊತೆಯಲ್ಲಿ ನಿಂತ ಫೋಟೊ ಒಂದು ವ್ಯಾಪಕವಾಗಿ ವೈರಲ್ ಆಗಿದೆ. ಅಭಿಮಾನಿಗಳ ಗಮನವನ್ನೂ ಈ ಫೋಟೊ ಸೆಳೆಯುತ್ತಿದೆ. ಅಮೀರ್ ಖಾನ್ ಮತ್ತು ಸುದೀಪ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎನ್ನುವ ಅನುಮಾನವನ್ನು ಕೂಡ ಈ ಫೋಟೊ ಹುಟ್ಟು ಹಾಕಿದೆ.

ಇನ್ನೂ.. ಸುದೀಪ್, ತಮ್ಮ ಅಭಿನಯದಿಂದ ಕೇವಲ ಕನ್ನಡಿಗರ ಹೃದಯವನ್ನಷ್ಟೇ ಅಲ್ಲ, ಭಾರತದೆಲ್ಲೆಡೆ ಅನೇಕ ಚಿತ್ರಪ್ರೇಮಿಗಳ ಹೃದಯಗಳನ್ನು ಗೆದ್ದವರು. ಇವತ್ತು ಪ್ಯಾನ್ ಇಂಡಿಯಾ ಸ್ಟಾರ್ ಆದ ಭ್ರಮೆಯಲ್ಲಿ ಅನೇಕರು ಮೆರೆಯುತ್ತಿರುವ ಸಮಯದಲ್ಲಿ ಸುದೀಪ್ ಆ ಕಾಲಕ್ಕೆ ರಾಮ ಗೋಪಾಲ್ ವರ್ಮಾ ಅವರ ಜೊತೆ ಮೂರು ಚಿತ್ರಗಳನ್ನು ಮಾಡಿದವರು. ರಾಜಮೌಳಿ ನಿರ್ದೇಶನದ 'ಈಗ' ಚಿತ್ರದ ಮೂಲಕ ಜಗದ್ವಿಖ್ಯಾತಿಯನ್ನು ಕೂಡ ಗಳಿಸಿದವರು. ನ್ಯಾಷನಲ್ ಸ್ಟಾರ್ ಎಂಬ ಬಿರುದನ್ನು ಅಲಂಕರಿಸದೇ ನ್ಯಾಷನಲ್ ಲೆವಲ್‌ನಲ್ಲಿ ಸದ್ದು ಮಾಡಿದವರು.

ಈ ಕಾರಣಕ್ಕೆ ಸುದೀಪ್ ಮತ್ತು ಅಮೀರ್ ಖಾನ್ ಅವರ ಈ ಫೋಟೊ ಈಗ ಕುತೂಹಲ ಕೆರಳಿಸಿದೆ. ಸುದೀಪ್ ಮತ್ತು ಅಮೀರ್ ಖಾನ್ ಅವರ ಈ ಭೇಟಿಯ ಹಿಂದಿನ ಉದ್ದೇಶವೇನು ಎನ್ನುವ ಪ್ರಶ್ನೆಯನ್ನು ಕೂಡ ಈ ಫೋಟೊ ಹುಟ್ಟುಹಾಕಿದೆ. ಇನ್ನೂ ಅಮೀರ್ ಖಾನ್ ಸುಲಭಕ್ಕೆ ಯಾರ ಜೊತೆ ಬೆರೆಯಲ್ಲ. ಎಲ್ಲಿಯೂ ಹೆಚ್ಚು ಕಾಣಿಸಿಕೊಳ್ಳಲ್ಲ. ಹೀಗಿರುವಾಗ ಸುದೀಪ್ ಮತ್ತು ಅಮೀರ್ ಜೊತೆಯಲ್ಲಿ ನಿಂತುಕೊಂಡಿದ್ದಾರೆ. ನಗು ನಗುತ್ತಾ ಫೋಟೊ ತೆಗೆಸಿಕೊಂಡಿದ್ದಾರೆ. ಅಭಿಮಾನಿಗಳ ಅನುಮಾನ ಹೆಚ್ಚಾಗಲು ಇದು ಕೂಡ ಪ್ರಮುಖ ಕಾರಣ.

ಅಂದ್ಹಾಗೇ ಅಮೀರ್ ಖಾನ್ ಸದ್ಯ ಸಿತಾರೆ ಜಮೀನ್ ಪರ್ ಚಿತ್ರವನ್ನು ಮಾಡುತ್ತಿದ್ದಾರೆ. ಇನ್ನೂ ರಜನಿಕಾಂತ್ ಅಭಿನಯದ ಕೂಲಿ ಚಿತ್ರದಲ್ಲಿ ಕೂಡ ಅಮೀರ್ ಖಾನ್ ವಿಶೇಷವಾದ ಪಾತ್ರವನ್ನು ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಮತ್ತೊಂದು ಕಡೆ ಸುದೀಪ್ ಬಿಲ್ಲಾ ರಂಗ ಭಾಷಾ ಚಿತ್ರದ ತಯಾರಿಯನ್ನು ನಡೆಸಿದ್ದಾರೆ. ಮುಂಬರುವ ದಿನದಲ್ಲಿ ತಮ್ಮ ನಿರ್ದೇಶನದಲ್ಲಿ ಕೂಡ ಚಿತ್ರವೊಂದನ್ನು ಮಾಡುವ ಆಸೆಯನ್ನು ಸುದೀಪ್ ಹೊಂದಿದ್ದಾರೆ. ಈ ಚಿತ್ರಗಳಲ್ಲಿ ಈ ಇಬ್ಬರು ದಿಗ್ಗಜರ ಅಪೂರ್ವ ಸಂಗಮವಾಗುತ್ತಾ ಅನ್ನುವುದು ಸದ್ಯಕ್ಕೆ ಅನೇಕರನ್ನು ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.

ಇನ್ನುಳಿದಂತೆ ಈ ಫೋಟೊದಲ್ಲಿ ಇನ್ನೊಬ್ಬ ವ್ಯಕ್ತಿಯೂ ಇದ್ದಾರೆ. ಈ ವ್ಯಕ್ತಿ ಯಾರು ಎನ್ನುವುದು ಸದ್ಯಕ್ಕೆ ನಿಗೂಢ. ಸದ್ಯಕ್ಕೆ ಅಮೀರ್ ಖಾನ್ ಮತ್ತು ಸುದೀಪ್ ಅವರ ಅಭಿಮಾನಿಗಳು ಈ ಅನಾಮಿಕ ವ್ಯಕ್ತಿಯ ಹಿಂದೆ ಬಿದ್ದಿದ್ದಾರೆ. ಕುಲ ಗೋತ್ರ ನಕ್ಷತ್ರ ಮತ್ತು ರಾಶಿಯನ್ನು ವಿಚಾರಿಸುತ್ತಿದ್ದಾರೆ. ನವೆಂಬರ್ 08ರಂದು ಅಮೀರ್ ಖಾನ್ ಅವರ ನಿವಾಸದಲ್ಲಿ ಈ ಭೇಟಿ ನಡೆದಿದೆ ಎನ್ನುವುದನ್ನು ಅನೇಕರು ಹುಡುಕಿ ತೆಗೆದಿದ್ದಾರೆ. ಮಿಕ್ಕಂತೆ ಈ ಫೋಟೊ ಹಿಂದಿನ ಅಸಲಿ ಕಥೆ ಸದ್ಯದಲ್ಲಿಯೇ ಹೊರ ಬರುವ ನಿರೀಕ್ಷೆ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X