ರಮ್ಯಾ ಗುಂಗಿನಿಂದ 'ಸಿದ್ಲಿಂಗು' ಅಭಿಮಾನಿಗಳನ್ನು ಹೊರ ತರುತ್ತಾರಾ ಸೋನು ಗೌಡ?

By ಅನಿತಾ ಬನಾರಿ

ಮೋಹಕ ತಾರೆ ರಮ್ಯಾ ನಾಯಕಿಯಾಗಿ ನಟಿಸಿರುವ 'ಸಿದ್ಲಿಂಗು' ಸಿನಿಮಾ ತೆರೆ ಕಂಡು ಬರೋಬ್ಬರಿ ಹನ್ನೆರಡು ವರುಷಗಳು ಕಳೆದಿದೆ. ಹನ್ನೆರಡು ವರ್ಷಗಳ ಬಳಿಕ ಇದೀಗ ಈ ಸಿನಿಮಾದ ಸೀಕ್ವೆಲ್ ಇದೀಗ ತೆರೆ ಕಾಣಲಿದೆ. ಇದರಲ್ಲಿ ಸಣ್ಣ ಬದಲಾವಣೆ ಎಂದರೆ ಈ ಸೀಕ್ವೆಲ್ ನಲ್ಲಿ ಮೋಹಕ ತಾರೆ ರಮ್ಯಾ ನಾಯಕಿಯಾಗಿ ನಟಿಸುತ್ತಿಲ್ಲ. ಬದಲಿಗೆ ಸೋನು ಗೌಡ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ವರ್ಷ ಜನವರಿಯಲ್ಲಿ ತೆರೆ ಕಂಡ 'ನೋಡಿದವರು ಏನಂತಾರೆ' ಸಿನಿಮಾದಲ್ಲಿ ಸೋನು ಗೌಡ ಬಣ್ಣ ಹಚ್ಚಿದ್ದರು. ಇದರ ಬೆನ್ನಲ್ಲೇ ಈಕೆ ನಾಯಕಿಯಾಗಿ ನಟಿಸಿರುವ ಮಗದೊಂದು ಸಿನಿಮಾ 'ಸಿದ್ಲಿಂಗು 2' ಬಿಡುಗಡೆಯಾಗುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಇನ್ನು ಸೋನು ಗೌಡ ಅವರ ನಿಜವಾದ ಹೆಸರು ಶ್ರುತಿ ರಾಮಕೃಷ್ಣ. ಇವರು ಮೇಕಪ್ ರಾಮಕೃಷ್ಣ ಅವರ ಮಗಳಾಗಿದ್ದು, ಕಿರುತೆರೆ ನಟಿ ನೇಹಾ ರಾಮಕೃಷ್ಣ ಅವರ ಅಕ್ಕ.

Will actress Sonu Gowda bring out the Sidlingu 2 fans from Ramya phobia

'ಇಂತಿ ನಿನ್ನ ಪ್ರೀತಿಯ' ಸಿನಿಮಾದಲ್ಲಿ ನಮನ ಪಾತ್ರದಲ್ಲಿ ನಟಿಸುವ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಸೋನು ಗೌಡ ಶ್ರೀನಗರ ಕಿಟ್ಟಿಯ ಜೊತೆಗೆ ತೆರೆ ಹಂಚಿಕೊಂಡಿದ್ದರು. ಮುಂದೆ 'ಪರಮೇಶಿ ಪಾನ್ ವಾಲ' ಸಿನಿಮಾದಲ್ಲಿ ನಾಯಕಿಯಾಗಿ ಸೋನು ಗೌಡ ಬಣ್ಣ ಹಚ್ಚಿದ್ದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆಗೆ ಅಭಿನಯಿಸಿದ್ದರು.

ಮುಂದೆ 'ಗುಲಾಮ', 'ರಾಮ್', 'ಪೊಲೀಸ್ ಕ್ವಾಟರ್ಸ್', 'ದ್ಯಾವ್ರೆ', 'ಗೋವಾ', 'ಕಿರಗೂರಿನ ಗಯ್ಯಾಳಿಗಳು', 'ಅಸ್ತಿತ್ವ', 'ಮಾರಿಕೊಂಡವರು', 'ಹ್ಯಾಪಿ ನ್ಯೂ ಇಯರ್', 'ಗುಲ್ಟು', 'ಕಾನೂರಾಯಣ', 'ಒಂಥರಾ ಬಣ್ಣಗಳು', 'ಫಾರ್ಚುನರ್', 'ಚಂಬಲ್', 'ಯುವರತ್ನ', 'ದೃಶ್ಯ 2', 'ಡಿಯರ್ ವಿಕ್ರಮ್', 'ಮರೀಚಿ' ಸಿನಿಮಾಗಳಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.

Will actress Sonu Gowda bring out the Sidlingu 2 fans from Ramya phobia

'ಕಿರಗೂರಿನ ಗಯ್ಯಾಳಿಗಳು' ಸಿನಿಮಾದಲ್ಲಿ ಸೋನು ಗೌಡ ಅವರು ನಾಗಮ್ಮ ಆಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಆ ಸಿನಿಮಾದ ನಟನೆಗೆ ಫಿಲಂಫೇರ್ ಕೊಡವ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಬೆಡಗಿ. ಇದರ ಜೊತೆಗೆ 'ಗುಲ್ಟು' ಸಿನಿಮಾದಲ್ಲಿ ಪೂಜಾ ಆಲಿಯಾಸ್ ಅನಘಾ ಪಾತ್ರಕ್ಕೆ ಜೀವ ತುಂಬಿದ ಸೋನು ಗೌಡ ಆ ಸಿನಿಮಾದ ನಟನೆಗಾಗಿ ಬರೋಬ್ಬರಿ ಮೂರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಹೌದು, 'ಗುಲ್ಟು' ಸಿನಿಮಾದ ನಟನೆಗಾಗಿ ಫಿಲ್ಮಿಬೀಟ್ ಕೊಡುವ ಅತ್ಯುತ್ತಮ ನಟಿ ಪ್ರಶಸ್ತಿ, ಸಿಟಿ ಸಿನಿ ಕೊಡುವ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಸೈಮಾ ಕೊಡಮಾಡುವ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿರುವ ಬೆಡಗಿ. ಅಂದ ಹಾಗೇ ಬರೋಬ್ಬರಿ ಇಪ್ಪತ್ತು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿರುವ ಸೋನು ಗೌಡ ಕನ್ನಡದ ಹೊರತಾಗಿ ಪರಭಾಷೆಯ ಸಿನಿಮಾದಲ್ಲಿಯೂ ಮಿಂಚಿದ್ದಾರೆ.

'ಶಿವಪ್ಪು ಮಝೈ' ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ಪರಭಾಷೆಯ ಸಿನಿರಂಗಕ್ಕೆ ಕಾಲಿಟ್ಟ ಈಕೆ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಮುಂದೆ ಬೆರಳೆಣಿಕೆಯಷ್ಟು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಸೋನು ಗೌಡ ಕಿರುತೆರೆಯಲ್ಲಿಯೂ ಮೋಡಿ ಮಾಡಿದ ಬೆಡಗಿ.

ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಜೊತೆಜೊತೆಯಲಿ' ಯಲ್ಲಿ ರಾಜನಂದಿನಿ ಆಗಿ ನಟಿಸಿದ್ದರು ಸೋನು ಗೌಡ. ಆ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡ ಈಕೆ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಅಂದ ಹಾಗೇ ಸೋನು ಗೌಡ ನಟಿಸಿದ್ದು ಒಂದೇ ಧಾರಾವಾಹಿಯಾಗಿದ್ದರೂ ತಮ್ಮ ನಟನೆಯ ಮೂಲಕ, ರಾಜನಂದಿನಿ ಪಾತ್ರದ ಮೂಲಕ ಈಗಲೂ ವೀಕ್ಷಕರ ಮನದಲ್ಲಿ ಸ್ಥಾನವನ್ನು ಪಡೆದಿದ್ದಾರೆ‌.

More from Filmibeat

English summary
Will actress Sonu Gowda bring out the 'Sidlingu 2' fans from Ramya phobia?:
Read more about: sonu gowda actress sanalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X