ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಟಿ ಅಮೂಲ್ಯ ಸ್ಪರ್ಧೆ.?

Recommended Video

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಟಿ ಅಮೂಲ್ಯ ಸ್ಪರ್ಧೆ.? | FILMIBEAT KANNADA

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಆಪರೇಷನ್ ಕಮಲ, ರಾಜಕೀಯದ ಹೈಡ್ರಾಮಾದ ನಡುವೆ ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಟಿ ಸುಮಲತಾ ಅಂಬರೀಶ್ ಗೆ ಟಿಕೆಟ್ ಕೊಡಬೇಕು ಎಂಬ ಒತ್ತಾಯ ಕೇಳಿಬರುತ್ತಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಗೋಲ್ಡನ್ ಗರ್ಲ್ ಅಮೂಲ್ಯ ಸ್ಪರ್ಧೆ ಮಾಡ್ತಾರೆ ಎಂಬ ಗುಸುಗುಸು ಆರಂಭವಾಗಿದೆ.

ಹಾಗಾದ್ರೆ, ಚುನಾವಣಾ ರಾಜಕೀಯಕ್ಕೆ ನಟಿ ಅಮೂಲ್ಯ ಧುಮುಕುತ್ತಾರಾ.? ಹೇಳಿ ಕೇಳಿ ಅಮೂಲ್ಯ ಮಾವ ರಾಜಕಾರಣದಲ್ಲಿ ಗುರುತಿಸಿಕೊಂಡವರು. ಹೀಗಾಗಿ ನಟಿ ಅಮೂಲ್ಯ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರಿದ್ದಾರಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಮೂಲ್ಯ ಮಾವ

ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಮೂಲ್ಯ ಮಾವ

ಬಿಜೆಪಿ ಪಕ್ಷದಿಂದ ಕಾರ್ಪೊರೇಟರ್ ಆಗಿದ್ದ ಅಮೂಲ್ಯ ಮಾವ ರಾಮಚಂದ್ರ ಇದೀಗ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ತೆನೆ ಹೊತ್ತ ಅಮೂಲ್ಯ : ಕುಮಾರಣ್ಣನ ಪಕ್ಷ ಸೇರಿದ ಗೋಲ್ಡನ್ ಕ್ವೀನ್

ಮಾವನ ಪರವಾಗಿ ಪ್ರಚಾರ ಮಾಡಿದ್ದ ಅಮೂಲ್ಯ

ಮಾವನ ಪರವಾಗಿ ಪ್ರಚಾರ ಮಾಡಿದ್ದ ಅಮೂಲ್ಯ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾವನ ಪರವಾಗಿ ರಾಜರಾಜೇಶ್ವರಿನಗರ ಕ್ಷೇತ್ರದ ತುಂಬಾ ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಪ್ರಚಾರ ಮಾಡಿದ್ದರು. ಆದರೆ ಚುನಾವಣೆಯಲ್ಲಿ ರಾಮಚಂದ್ರ ಸೋಲು ಅನುಭವಿಸಿದ್ದರು.

ಲೋಕಸಭಾ ಚುನಾವಣೆಯಲ್ಲಿ ಅಮೂಲ್ಯ ಸ್ಪರ್ಧೆ.?

ಲೋಕಸಭಾ ಚುನಾವಣೆಯಲ್ಲಿ ಅಮೂಲ್ಯ ಸ್ಪರ್ಧೆ.?

ಇದೀಗ ಲೋಕಸಭಾ ಚುನಾವಣೆಯಲ್ಲಿ ಅಮೂಲ್ಯರನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ನಟಿ ಅಮೂಲ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಅಮೂಲ್ಯ ಹೇಳಿದ್ದೇನು.?

ಅಮೂಲ್ಯ ಹೇಳಿದ್ದೇನು.?

''ಸಮಾಜ ಸೇವೆ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇದೆ. ಆದರೆ ರಾಜಕೀಯದಿಂದಲೇ ಸಮಾಜಸೇವೆ ಮಾಡಬೇಕು ಎಂಬುದೇನಿಲ್ಲ. ರಾಜಕೀಯ ಪ್ರವೇಶದ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ತಿಳಿಸುವೆ'' ಎಂದಿದ್ದಾರೆ ನಟಿ ಅಮೂಲ್ಯ.

More from Filmibeat

English summary
Will Kannada Actress Amulya Jagadish contest in Loksabha Elections 2019.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X