ಸೆನ್ಸಾರ್ ಮಂಡಳಿ ವಿವಾದ: ದರ್ಶನ್ ನಟನೆಯ 'ಕಾಟೇರ' ಮುಂದಿದೆ ಭಾರಿ ಸವಾಲು, ಹೇಳಿದ ಡೇಟ್‌ಗೆ ರಿಲೀಸ್ ಆಗುತ್ತಾ!?

ಕನ್ನಡ ಚಿತ್ರರಂಗದಲ್ಲಿ ಈಗ ಎಲ್ಲರ ಕಣ್ಣಿರುವುದು ನಟ ದರ್ಶನ್ ತೂಗುದೀಪ ನಟನೆಯ 'ಕಾಟೇರ' ಸಿನಿಮಾ ಮೇಲೆ. ಈ ತಿಂಗಳ 29 ರಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಕನ್ನಡಿಗರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಈ ಸಿನಿಮಾ ರಿಲೀಸ್‌ಗೆ ಸಂಕಷ್ಟವೊಂದು ಎದುರಾಗಿದೆ. ಸೆನ್ಸಾರ್ ಮಂಡಳಿಯ ಘಟನೆಯಿಂದಾಗಿ 'ಕಾಟೇರ' ತಂಡಕ್ಕೆ ಸವಾಲು ಎದುರಾಗಿದೆ.

ಸಿನಿಮಾ ತಂಡ ಘೋಷಿಸಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕಾಟೇರ' ಬಿಡುಗಡೆಗೆ ಕೇವಲ ಮೂರು ವಾರಗಳು ಮಾತ್ರ ಬಾಕಿಯಿದೆ. ಆದರೆ, ಬೆಂಗಳೂರಿನ ಪ್ರಾದೇಶಿಕ CBFC (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್) ಕಚೇರಿಯಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದಾಗಿ ಅಂದುಕೊಂಡಂತೆ ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ಆಗುವುದೋ ಇಲ್ಲವೇ ಎಂಬ ಆತಂಕ ಕಾಡುತ್ತಿದೆ.

Will Censor Boards arrest affect the release of challenging star Darshans Katera?

ಸೆನ್ಸಾರ್ ಬೋರ್ಡ್‌ನಿಂದಾಗಿ 'ಕಾಟೇರ'ನಿಗೆ ಸಂಕಷ್ಟ!

ಬೆಂಗಳೂರಿನ ಸೆನ್ಸಾರ್ ಮಂಡಳಿ ಕಚೇರಿಯಲ್ಲಿ ಚಲನಚಿತ್ರಗಳನ್ನು ಪ್ರಮಾಣೀಕರಿಸಲು ಗೊತ್ತುಪಡಿಸಿದ ಅಧಿಕಾರಿಗಳು ಇಲ್ಲ. ಚಿತ್ರಗಳಿಗೆ ಪ್ರಮಾಣಪತ್ರವ ನೀಡಲು ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಅಧಿಕಾರಿಯಾಗಿದ್ದ ಪ್ರಶಾಂತ್ ಕುಮಾರ್ ಸೇರಿ ಮೂವರನ್ನು ಕಳೆದ ತಿಂಗಳು ಬಂಧಿಸಲಾಗಿದ್ದು, ಸೆನ್ಸಾರ್ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಬರೋಬ್ಬರಿ 132 ಸಿನಿಮಾಗಳಿಗೆ ಸೆನ್ಸಾರ್ ಪ್ರಮಾಣ ಪತ್ರ ನೀಡಬೇಕಾಗಿದೆ. ಅದರಲ್ಲಿ ದರ್ಶನ್ ತೂಗುದೀಪ ನಟನೆಯ 'ಕಾಟೇರ' ಕೂಡ ಒಂದು. ಈ ಅಧಿಕಾರಿಗಳು ವೀಕ್ಷಿಸಿದ ಮತ್ತು ಪ್ರಮಾಣೀಕರಣಕ್ಕಾಗಿ ಕಾಯುತ್ತಿದ್ದ ಹಲವಾರು ಚಲನಚಿತ್ರಗಳು ಪ್ರಸ್ತುತ ಹಾಗೆ ಉಳಿದುಕೊಂಡಿವೆ. ಆದರೆ ಡಿಸೆಂಬರ್ 31 ರ ಮೊದಲು ಕ್ಲಿಯರೆನ್ಸ್‌ಗಾಗಿ ಕಾಯುತ್ತಿರುವ ಚಲನಚಿತ್ರಗಳ ಪಟ್ಟಿ ಸುಮಾರು 130 ರಷ್ಟಿದೆ. ಶೀಘ್ರದಲ್ಲೇ ಇದು ನಡೆಯದಿದ್ದರೇ, ಕಾಟೇರ ಚಿತ್ರವು ಡಿಸೆಂಬರ್‌ 29ಕ್ಕೆ ಬಿಡುಗಡೆಯಾಗಲು ಸಾಧ್ಯವಾಗುವುದಿಲ್ಲ.

ಆತಂಕದಲ್ಲೂ ವಿಶ್ವಾಸ ವ್ಯಕ್ತಪಡಿಸುತ್ತಿದೆ 'ಕಾಟೇರ' ತಂಡ!

ಇನ್ನು, ಸೆನ್ಸಾರ್ ಸರ್ಟಿಫಿಕೇಟ್ ಸಿಗದ ಕಾರಣ ಇದು ಚಿತ್ರದ ಬಿಡುಗಡೆಯ ದಿನಾಂಕದ ಮೇಲೆ ಪರಿಣಾಮ ಬೀರಬಹುದೇ ಎಂಬ ಆತಂಕ ಚಿತ್ರರಂಡದ್ದು. ಆದರು ಕೂಡ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು, ಇನ್ನೇರಡು ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದಿದ್ದಾರೆ. ಕಾಟೇರ ಬಿಡುಗಡೆ ಬಗ್ಗೆ ಮುಂದಿನ ವಾರದ ಆರಂಭದಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ.

Will Censor Boards arrest affect the release of challenging star Darshans Katera?

'ಕ್ರಾಂತಿ' ನಂತರ ದರ್ಶನ ನೀಡಲಿದೆ 'ಕಾಟೇರ'

ಈ ವರ್ಷದ ಆರಂಭದಲ್ಲಿ ನಟ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗಿತ್ತು. ಶಿಕ್ಷಣ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಬಗ್ಗೆ ಬಂದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಅಂತಹ ಕಮಾಲ್ ಮಾಡಲಿಲ್ಲ. ಹಾಗಾಗಿ ಎಲ್ಲರ ಗಮನ ಕಾಟೇರ ಮೇಲಿದೆ. ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿಯಾಗಿ ಹಿರಿಯ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ತುಂಬಾ ಚಿಕ್ಕ ಹುಡುಗಿಯ ಹಾಗೆ ಕಾಣುತ್ತಾರೆ ಎಂಬ ಟ್ರೋಲ್‌ಗಳ ಹೊರತಾಗಿಯೂ ಆರಾಧನಾ ಸಕತ್ ಆಗಿ ಕಾಣಿಸಿದ್ದಾರೆ.

ಮೊದಲ ಸಾಂಗ್ 'ಪಸಂದಾಗವನೆ' ಬಿಡುಗಡೆ

ಇನ್ನು, ಇತ್ತೀಚೆಗೆ ಕಾಟೇರ ಸಿನಿಮಾದ ಮೊದಲ ಹಾಡು 'ಪಸಂದಾಗವನೆ' ಬಿಡುಗಡೆಯಾಗಿದೆ. ಸುಧಾಕರ್ ಅವರ ಛಾಯಾಗ್ರಹಣ ಮತ್ತು ಹರಿಕೃಷ್ಣ ಸಂಗೀತ ಇರುವ ಈ ಹಾಡು ಈಗಾಗಲೇ 10 ಮಿಲಿಯನ್ ವೀವ್ಸ್ ಕಂಡಿದೆ. ಕಾಟೇರ 70 ರ ದಶಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ.

More from Filmibeat

English summary
Will Challenging Star Darshan’s Kaatera release plans be affected?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X