»   » ರಾಜಕೀಯಕ್ಕೆ ಬರ್ತಾರಾ ದರ್ಶನ್: ತಾಯಿ ಮೀನಾ ತೂಗುದೀಪ ಹೇಳಿದ್ದೇನು.?

ರಾಜಕೀಯಕ್ಕೆ ಬರ್ತಾರಾ ದರ್ಶನ್: ತಾಯಿ ಮೀನಾ ತೂಗುದೀಪ ಹೇಳಿದ್ದೇನು.?

Posted By:
Subscribe to Filmibeat Kannada
darshan mother react about him politics entry | Filmibeat Kannada

ಇಂದು ಬೆಳಗ್ಗಿನಿಂದ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಒಂದೇ ನ್ಯೂಸು. ಅದೇ ರಾಜ್ಯ ರಾಜಕೀಯಕ್ಕೆ ದರ್ಶನ್ ಎಂಟ್ರಿಕೊಡ್ತಾರೆ ಎಂಬ ಗುಸುಗುಸು.

ರೆಬೆಲ್ ಸ್ಟಾರ್ ಅಂಬರೀಶ್ ಗೆ ಅಪಾರ ಗೌರವ ಕೊಡುವ 'ದಾಸ' ದರ್ಶನ್, ಅಂಬರೀಶ್ ರವರಂತೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಗಾಸಿಪ್ ಹೇಗೆ ಹಬ್ಬಿತ್ತೋ ಗೊತ್ತಿಲ್ಲ. ಒಟ್ನಲ್ಲಿ ಇಂದು ಬೆಳಗ್ಗೆಯಿಂದ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಈ ಸುದ್ದಿ ಸಂಚಲನ ಉಂಟು ಮಾಡಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಇಂಥ ಗಾಸಿಪ್ ಗಳೂ ಕೇಳಿ ಬರ್ತಿವೆ.!

ಇಷ್ಟೆಲ್ಲ ಆದರೂ ಈ ಬಗ್ಗೆ ದರ್ಶನ್ ಮಾತ್ರ ತುಟಿಕ್ ಪಿಟಿಕ್ ಎಂದಿಲ್ಲ. ಆದರೆ, ದರ್ಶನ್ ತಾಯಿ ಮೀನಾ ತೂಗುದೀಪ ಇದೇ ವಿಚಾರದ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿರಿ...

ಮೀನಾ ತೂಗುದೀಪ ಏನಂದರು.?

''ದರ್ಶನ್ ರಾಜಕೀಯಕ್ಕೆ ಬರುವುದಾಗಲಿ, ಕಾಂಗ್ರೆಸ್ ಸೇರುವುದಾಗಲಿ, ಯಾವ ವಿಷಯವೂ ನನ್ನ ಗಮನಕ್ಕೆ ಬಂದಿಲ್ಲ'' ಎಂದು ಮೀನಾ ತೂಗುದೀಪ ಹೇಳಿದ್ದಾರೆ.

ವೈಯುಕ್ತಿಕ ಇಚ್ಛೆ

''ದರ್ಶನ್ ರಾಜಕೀಯಕ್ಕೆ ಬರಬೇಕು ಎಂಬ ಇಚ್ಛೆ ನನಗೇನೂ ಇಲ್ಲ. ಅದು ಅವರ ವೈಯುಕ್ತಿಕ ವಿಷಯ'' ಎಂದಿದ್ದಾರೆ ಮೀನಾ ತೂಗುದೀಪ

ನನಗೇನೂ ಗೊತ್ತಿಲ್ಲ

''ದರ್ಶನ್ ತಾಯಿ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಆಗಿದ್ದಾರೆ. ಆದರೆ, ಅವರ ಪುತ್ರನನ್ನು ಕರೆತರುವ ವಿಚಾರ ಯಾವತ್ತೂ ಚರ್ಚೆ ಆಗಿಲ್ಲ. ಈ ಬಗ್ಗೆ ನನಗೇನೂ ಗೊತ್ತಿಲ್ಲ'' ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಟ ದರ್ಶನ್ ಕಾಂಗ್ರೆಸ್ ಸೇರ್ಪಡೆ ಆಗ್ತಾರಾ? ಈ ಬಗ್ಗೆ ಪರಮೇಶ್ವರ್ ಏನಂದ್ರು?

ದರ್ಶನ್ ಉತ್ತರ ಕೊಡುತ್ತಿಲ್ಲ!

ರಾಜಕೀಯಕ್ಕೆ ಸೇರುವ ಕುರಿತು ದರ್ಶನ್ ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ.

English summary
''I have no clue about Challenging Star Darshan entering Politics'' says his Mother Meena Thoogudeepa
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada