ಒಂದೇ ದಿನ ಜೈಲ್‌ನಿಂದ ಹೊರ ಬರುತ್ತಾರಾ ದರ್ಶನ್-ಪವಿತ್ರಾ ಗೌಡ? ನಾಲ್ಕು ದಿನದಲ್ಲಿ ಜಾಮೀನು ಭವಿಷ್ಯ!

By ಫಿಲ್ಮಿಬೀಟ್ ಡೆಸ್ಕ್

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರ ಗೌಡ ಮೊದಲನೇ ಆರೋಪಿಯಾಗಿದ್ದರೆ, ದರ್ಶನ್ ಎರಡನೇ ಆರೋಪಿಯಾಗಿದ್ದರು. ಈಗ ದರ್ಶನ್ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್ ಹಾಗೂ ಸರ್ಕಾರದ ಪರ ವಕೀಲರಾದ ಪ್ರಸನ್ನ ಕುಮಾರ್ ವಾದವನ್ನು ಮಂಡಿಸಿದ್ದು ಆಗಿದೆ. ಪರ ಹಾಗೂ ವಿರೋಧ ಎರಡು ವಾದವನ್ನು ನ್ಯಾಯಾಧೀಶರು ಆಲಿಸಿ ತೀರ್ಪನ್ನು ಕಾಯ್ದಿರಿಸಿದ್ದಾರೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಎರಡು ದಿನಗಳ ಕಾಲ ಸುಧೀರ್ಘವಾಗಿ ನಡೆದಿದೆ. ಎರಡು ಸುತ್ತುಗಳಲ್ಲಿ ವಾದ-ಪ್ರತಿವಾದ ಮಾಡುವುದಕ್ಕೆ ನ್ಯಾಯಾಧೀಶರು ಅವಕಾಶವನ್ನು ನೀಡಿದ್ದರು. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ದರ್ಶನ್ ಪರ ಸಿವಿ ನಾಗೇಶ್ ಹಾಗೂ ಸರ್ಕಾರದ ವಕೀಲರಾದ ಪ್ರಸನ್ನ ಕುಮಾರ್ ಪ್ರತಿವಾದವನ್ನು ಮಾಡಿದ್ದರು. ಇಬ್ಬರ ವಾದಗಳು ಕೂಡ ಸಖತ್ ಇಂಟ್ರೆಸ್ಟಿಂಗ್ ಆಗಿದ್ದವು.

Will Darshan and Pavithra Gowda get bail on the same day in the Renukaswamy case

ಮೊದಲ ಸುತ್ತಿನಲ್ಲಿ ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ತನಿಖೆಯೇ ಸರಿಯಿಲ್ಲ ಎಂದು ವಾದ ಮಾಡಿದ್ದರು. ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್ ಅನ್ನು 'ಅರೇಬಿಯನ್ ನೈಟ್ಸ್' ಕಥೆಗಳಿಗೆ ಹೋಲಿಸಿದ್ದರು. ಹಾಗೇ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಸಾಕ್ಷಿಗಳ ಹೇಳಿಕೆ ಹಾಗೂ ಪೋಸ್ಟ್‌ ಮಾರ್ಟಮ್ ಅನ್ನು ವಿಳಂಬ ಮಾಡಿದ್ದಾರೆಂದು ಎಂದು ವಾದವನ್ನು ಮಂಡಿಸಿದ್ದರು. ಸಿ ವಿ ವಾದಕ್ಕೆ ಪ್ರತಿಯಾಗಿ ಎಪ್‌ಪಿಪಿ ಪ್ರಸನ್ನ ಕುಮಾರ್ ಪೂರ್ವಗ್ರಹ ಪೀಡಿತರಾಗಿ ತನಿಖೆ ಮಾಡಿಲ್ಲ. ಪೊಲೀಸರ ವಿಚಾರಣೆ ವೇಳೆ ದರ್ಶನ್ ತೋರಿಸಿದ್ದನ್ನೇ ವಶಕ್ಕೆ ಪಡೆಯಲಾಗಿದೆ. ಸಾಕ್ಷಿಗಳು ಬೇರೆ ಬೇರೆ ಕಡೆ ಸಂಚಾರ ಮಾಡುತ್ತಿದ್ದರಿಂದ ಹೇಳಿಕೆ ಪಡೆಯುವುದು ತಡವಾಗಿದೆ. ದರ್ಶನ್ ಧರಿಸಿದ ಬಟ್ಟೆಯನ್ನು ಕುಕ್ಕಿ ಒಗೆದರೂ ಡಿಎನ್‌ಎ ಪತ್ತೆ ಹಚ್ಚಬಹುದು ಎಂದು ಪ್ರಬಲವಾದ ಮಂಡಿದ್ದರು.

ಎರಡನೇ ಸುತ್ತಿನಲ್ಲಿ ಸಿ ವಿ ನಾಗೇಶ್ ಅವರು ಟೆಕ್ನಿಕಲ್ ಎವಿಡೆನ್ಸ್ ಮುಂದಿಟ್ಟುಕೊಂಡು ವಾದ ಮಂಡಿದ್ದರು. ಗೂಗಲ್ ಮ್ಯಾಪ್ ಬಳಸಿ ಕೃತ್ಯದ ಸಮಯ ಹಾಗೂ ಸ್ಥಳವನ್ನು ತಿದ್ದು ಪಡಿ ಮಾಡಬಹುದು. ಟವರ್ ಲೋಕೇಶ್ ಬಳಸಿದ ತನಿಖೆ ಮಹತ್ವದಲ್ಲ. ಅಲ್ಲದೇ ದರ್ಶನ್ ಬಳಿ ಇರುವ ಫೋನ್ ನಂಬರ್ ಅವರ ಹೆಸರಿನಲ್ಲಿ ಇಲ್ಲ. ಹೇಮಂತ್ ಎಂಬುವವರ ಹೆಸರಲ್ಲಿ ಇದೆ ಎಂದು ವಾದ ಮಾಡಿದ್ದರು. ಇದಕ್ಕೆ ಎಪ್‌ಪಿಪಿ ಮತ್ತೆ ಪ್ರತಿವಾದ ಮಾಡಿದ್ದು, ಹಾಗಿದ್ದರೆ, ಪವಿತ್ರಾ ಗೌಡ ಮೆಸೇಜ್ ಮಾಡಿದ್ದರು ಹೇಮಂತ್‌ಗಾ? ದರ್ಶನ್‌ಗೆ ಅಲ್ಲವೇ? ಎಂದು ಪ್ರತಿವಾದ ಮಾಡಿದ್ದರು.

Will Darshan and Pavithra Gowda get bail on the same day in the Renukaswamy case

ಇಬ್ಬರ ವಾದ ಹಾಗೂ ಪ್ರತಿವಾದವನ್ನು ಆಲಿಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ ನ್ಯಾಯಾಧೀಶರಾದ ಜೈಶಂಕರ್ ಅಕ್ಟೋಬರ್ 14ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದಾರೆ. ಎರಡೂ ಕಡೆ ಪ್ರಬಲವಾದ ವಾದ ಹಾಗೂ ಪ್ರತಿವಾದ ನಡೆದಿದೆ. ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ಜಾಮೀನು ಕೊಡಬೇಕು ಅಂತಲೂ, ಎಸ್‌ಪಿಪಿ ಪ್ರಸನ್ನ ಕುಮಾರ್ ಬೇಡ ಅಂತಾನೂ ನ್ಯಾಯಾಧೀಶರ ಮುಂದೆ ವಾದಿಸಿದ್ದಾರೆ. ಇದರ ಫಲಿತಾಂಶ ಅಕ್ಟೋಬರ್ 14ಕ್ಕೆ ಗೊತ್ತಾಗಲಿದೆ.

ಹಾಗೇ ಇನ್ನೊಂದು ಕಡೆ ಪವಿತ್ರಾ ಗೌಡ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಕೂಡ ಈ ಹಿಂದೆ ನಡೆದಿತ್ತು. ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಪರ ವಕೀಲರ ವಾದವನ್ನು ಆಲಿಸಿದ ಬಳಿಕ ನ್ಯಾಯಾಧೀಶರು ತೀರ್ಪನ್ನು ಅಕ್ಟೋಬರ್ 14ಕ್ಕೆ ಕಾಯ್ದಿಸಿದ್ದಾರೆ. ಹೀಗಾಗಿ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಒಂದೇ ಜಾಮೀನು ಮಂಜೂರು ಆಗಬಹುದು ಎಂದು ಅವರ ಅಭಿಮಾನಿಗಳು ಅಂದಾಜು ಮಾಡುತ್ತಿದ್ದಾರೆ. ಇಬ್ಬರಿಗೂ ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡಿವುದಕ್ಕೆ ತುದಿಗಾಲಲ್ಲಿ ನಿರ್ಧರಿಸಿದ್ದಾರೆ.

ದರ್ಶನ್ ವಿಚಾರದಲ್ಲಂತೂ ವಾದ ಪ್ರತಿವಾದ ಪ್ರಬಲವಾಗಿಯೇ ಆಗಿದೆ. ಈ ಕಾರಣಕ್ಕೆ ಜಾಮೀನು ಸಿಗುತ್ತಾ? ಇಲ್ಲವಾ? ಅನ್ನೋದನ್ನು ಈಗಲೇ ಅಂದಾಜು ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗೇ ಪವಿತ್ರಾ ಗೌಡ ಆರೋಪಿ ನಂ 1, ದರ್ಶನ್ ಆರೋಪಿ ನಂ 2 ಆಗಿರುವುದರಿಂದ ಜಾಮೀನು ಸಿಗುವುದು ಅಷ್ಟು ಸುಲಭವಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ. ಸದ್ಯ ದರ್ಶನ್ ಅಭಿಮಾನಿಗಳು ಕೂಡ ಅದೇ ನಿರೀಕ್ಷೆಯಲ್ಲಿ ಇದ್ದಾರೆ.

More from Filmibeat

English summary
Will Darshan and Pavithra Gowda get bail on the same day in the Renukaswamy case?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X