ಚಿರು ಸರ್ಜಾ ಮೇಲೆ ಬಂಡವಾಳ ಹೂಡಿದವರ ನೆರವಿಗೆ ಧ್ರುವ ಸರ್ಜಾ?
ಚಿರಂಜೀವಿ ಸರ್ಜಾ ಅರ್ಧಕ್ಕೆ ತಮ್ಮ ಜೀವನ ಪಯಣ ಮುಗಿಸಿದ್ದಾರೆ. ಚಿರು ಅಗಲಿಕೆ ಅವರ ಕುಟುಂಬ, ಸ್ನೇಹಿತರಿಗೆ ತುಂಬಲಾರದ ನಷ್ಟ.
Recommended Video
ಚಿರಂಜೀವಿ ಸರ್ಜಾ ಚಾಲ್ತಿಯಲ್ಲಿದ್ದ ಸಿನಿಮಾ ನಾಯಕ. ವರ್ಷಕ್ಕೆ ಮೂರು-ನಾಲ್ಕು ಸಿನಿಮಾಗಳು ಅನಾಯಾಸವಾಗಿ ಬಿಡುಗಡೆ ಆಗುತ್ತಿದ್ದವು.
ಈಗಲೂ ಅಷ್ಟೆ ಐದು ಸಿನಿಮಾಗಳು ಚಿರಂಜೀವಿ ಸರ್ಜಾ ಕೈಲಿದ್ದವು. ಅವುಗಳಲ್ಲಿ ಕೆಲವು ಸಿನಿಮಾಗಳು ಭಾಗಷಃ ಮುಗಿದಿದ್ದರೆ ಇನ್ನು ಕೆಲವು ಚಿತ್ರೀಕರಣದ ಹಂತದಲ್ಲಿದ್ದವು, ಇನ್ನು ಕೆಲವು ಇನ್ನಷ್ಟೆ ಆರಂಭಗೊಳ್ಳಬೇಕಿತ್ತು.
ಚಿರು ಅಗಲಿಕೆಯಿಂದ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದು, ಅರ್ಧಕ್ಕೆ ನಿಂತ ಸಿನಿಮಾಗಳನ್ನು ಚಿರು ಸರ್ಜಾ ಸಹೋದರ ಧ್ರುವ ಸರ್ಜಾ ಮುಗಿಸಿಕೊಡುತ್ತಾರೆಯೇ ಎಂಬ ಮಾತೊಂದು ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

ಡಬ್ಬಿಂಗ್ ಮಾಡಿಕೊಡುವ ಸಾಧ್ಯತೆ
ಬಹುತೇಕ ಚಿತ್ರೀಕರಣ ಮುಗಿದಿರುವ ಡಬ್ಬಿಂಗ್ ಬಾಕಿ ಇರುವ ಸಿನಿಮಾಗಳಿಗೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿಕೊಡುತ್ತಾರೆ ಎನ್ನಲಾಗುತ್ತಿದೆ. ಇಬ್ಬರ ಧ್ವನಿಯಲ್ಲಿ ತುಸು ಸಾಮ್ಯತೆ ಇರುವ ಕಾರಣ ಇದು ಸಾಧ್ಯ ಸಹ. ಶಂಕರ್ ನಾಗ್ ತೀರಿಕೊಂಡಾಗ ಅವರ ಸಿನಿಮಾಗಳಿಗೆ ಅನಂತ್ ನಾಗ್ ದ್ವನಿ ನೀಡಿದ್ದರು.

ಚಿತ್ರೀಕರಣದಲ್ಲಿ ಸಿಜಿಐ ಬಳಕೆ?
ಆದರೆ ಅರ್ಧ ಚಿತ್ರೀಕರಣ ಮುಗಿಸಿದ ಚಿತ್ರಗಳು ಬಹಳವೇ ಇಕ್ಕಟ್ಟಿಗೆ ಸಿಲುಕಿವೆ. ಕೆಲವು ಭಾಗಗಳ ಚಿತ್ರೀಕರಣವಷ್ಟೆ ಬಾಕಿ ಇರುವ ಸಿನಿಮಾಗಳಲ್ಲಿ ಬಾಡಿ ಡಬಲ್, ಸಿಜಿಐ ಪ್ರಯೋಗ ಮಾಡುವ ಸಾಧ್ಯತೆ ಇದೆ. ಈ ರೀತಿ ಕೆಲವು ಸಿನಿಮಾಗಳಲ್ಲಿ ಮಾಡಲಾಗಿದೆ.

ರಾಜಮಾರ್ತಾಂಡ ಡಬ್ಬಿಂಗ್ ಬಾಕಿ ಇದೆ
ಚಿರು ಸರ್ಜಾ ಒಪ್ಪಿಕೊಂಡಿದ್ದ ಚಿತ್ರಗಳಲ್ಲಿ ರಾಜಮಾರ್ತಾಂಡ ಮತ್ತು ಕ್ಷತ್ರಿಯ ಸಿನಿಮಾಗಳು ಬಹುತೇಕ ಚಿತ್ರೀಕರಣ ಮುಗಿಸಿವೆ. ರಾಜಮಾರ್ತಾಂಡ ಡಬ್ಬಿಂಗ್ ಮಾತ್ರವೇ ಬಾಕಿ ಉಳಿದಿದೆ. ಕ್ಷತ್ರೀಯ ಕೆಲವು ಭಾಗಗಳ ಚಿತ್ರೀಕರಣ ಬಾಕಿ ಇದೆ.

ಹಲವು ಸಿನಿಮಾಗಳು ಚಿರು ಕೈಯಲ್ಲಿದ್ದವು
ಇದನ್ನು ಹೊರತಾಗಿ ರಣಂ, ಏಪ್ರಿಲ್, ಜುಗಾರಿ ಕ್ರಾಸ್, ಧೀರಂ ಸಿನಿಮಾಗಳು ಚಿರಂಜೀವಿ ಸರ್ಜಾ ಕೈಯಲ್ಲಿದ್ದವು. ಕೆಲವು ಸಿನಿಮಾಗಳು ಚಿತ್ರೀಕರಣ ಆರಂಭವಾಗಿದ್ದರೆ ಇನ್ನೂ ಕೆಲವು ಆರಂಭ ಆಗುವುದರಲ್ಲಿತ್ತು.


Click it and Unblock the Notifications











