ಬಿಗ್‌ಬಾಸ್ ರಿಯಾಲಿಟಿ ಶೋ ಗೆ ಸ್ಪರ್ಧಿಯೊಬ್ಬ ಸಿಕ್ಕಾಯಿತು!
ಬಿಗ್‌ಬಾಸ್ ರಿಯಾಲಿಟಿ ಶೋ ದೇಶದಾದ್ಯಂತ ಖ್ಯಾತವಾಗಿದೆ. ಆಂಗ್ಲದ ಬಿಗ್‌ಬ್ರದರ್ ಶೋ ಅನ್ನು ಹಿಂದಿಯಲ್ಲಿ ಮೊದಲಿಗೆ ಬಿಗ್ ಬಾಸ್ ಆಗಿ ಪ್ರಸ್ತುತಪಡಿಸಲಾಯಿತು.
Recommended Video
ನಂತರ ಬಹುತೇಕ ಭಾಷೆಗಳಲ್ಲಿ ಬಿಗ್‌ಬಾಸ್ ಪ್ರಸಾರ ಆರಂಭವಾಯಿತು. ಮತ್ತು ಯಶಸ್ಸು ಸಹ ಗಳಿಸಿತು. ಕನ್ನಡದಲ್ಲಂತೂ ಹಿಂದಿಯ ಬಿಗ್ ಬಾಸ್ ಅನ್ನೂ ಮೀರಿಸುವಂತೆ ಯಶಸ್ಸಾಯಿತು ಬಿಗ್‌ಬಾಸ್.
ಬಿಗ್‌ಬಾಸ್‌ನಲ್ಲಿ ಭಾವಹಿಸಿದ ಸ್ಪರ್ಧಾಳುಗಳು ಒಂದೇ ಶೋ ಗೆ ಸೆಲೆಬ್ರಿಟಿಗಳಾಗಿಬಿಟ್ಟರು. ಮೊದಲಿಗೆ ಸೆಲೆಬ್ರಿಟಿಗಳನ್ನು ಬಿಗ್‌ಬಾಸ್‌ಗೆ ಕರೆತರಲಾಗುತ್ತಿತ್ತು. ನಂತರ ಈ ಸಂಪ್ರದಾಯ ಬದಲಾಗಿ, ವಿವಾದಾತ್ಮಕ ವ್ಯಕ್ತಿಗಳನ್ನು ಬಿಗ್‌ಬಾಸ್ ಕರೆತರಲಾಯಿತು.

ಬಿಗ್‌ಬಾಸ್‌ಗೆ ಒಬ್ಬ ಸ್ಪರ್ಧಿ ಸಿಕ್ಕಾಯಿತು!
ಕೊರೊನಾ ಕಾರಣಕ್ಕೆ ಈ ಬಾರಿ ಬಿಗ್‌ಬಾಸ್ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಇದೆ. ಆದರೆ ಒಂದುವೇಳೆ ಬಿಗ್‌ಬಾಸ್ ನಡೆದಲ್ಲಿ, ಈಗಾಲಗೇ ಒಬ್ಬ ಸ್ಪರ್ಧಿ ಬಿಗ್‌ಬಾಸ್‌ಗೆ ಸಿಕ್ಕಾಗಿದೆ! ಹೀಗೆಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಚರ್ಚೆ
ಈಗಾಗಲೇ ಸಿಕ್ಕಿರುವ ಬಿಗ್‌ಬಾಸ್ ಸಂಭಾವ್ಯ ಸ್ಪರ್ಧಿ ಡ್ರೋನ್ ಪ್ರತಾಪ್ ಅಂತೆ. ಹೌದು, ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಬಿಗ್‌ಬಾಸ್ ನಡೆದಲ್ಲಿ ಪ್ರತಾಪ್ ಗೆ ಖಂಡಿತ ಆಫರ್ ದೊರೆಯುತ್ತದೆ ಎನ್ನುತ್ತಿದ್ದಾರೆ.

ವಿವಾದ ಸೃಷ್ಟಿಸಿರುವ ಡ್ರೋನ್ ಪ್ರತಾಪ್
ಬಿಗ್‌ಬಾಸ್ ಗೆ ಸಾಮಾನ್ಯವಾಗಿ ವಿವಾದಾತ್ಮಕ ವ್ಯಕ್ತಿಗಳು ಪ್ರವೇಶ ಪಡೆಯುತ್ತಾರೆ. ಆಗೊಮ್ಮೆ-ಈಗೊಮ್ಮೆ ಸೆಲೆಬರಿಟಿಗಳೂ ಸಹ ಹೋಗುವುದುಂಟು. ಈಗಾಗಲೇ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿರುವ ಡ್ರೋನ್ ಪ್ರತಾಪ್ ಈ ಬಾರಿ ಪಕ್ಕಾ ಸ್ಪರ್ಧಿ ಎನ್ನಲಾಗುತ್ತಿದೆ.

ಡ್ರೋನ್ ಪ್ರತಾಪ್ ಚರ್ಚೆಯಲ್ಲಿರುವ ವ್ಯಕ್ತಿ
ಡ್ರೋನ್ ಪ್ರತಾಪ್ ರಾಜ್ಯದಾದ್ಯಂತ ಈಗ ಚರ್ಚೆಯಲ್ಲಿರುವ ವ್ಯಕ್ತಿ. ತಾನು ಡ್ರೋನ್ ತಯಾರಿಸಿದ್ದೇನೆಂದು, ಬಡತನದಲ್ಲಿ ಅರಳಿದ ಪ್ರತಿಭೆ ತಾನೆಂದು. ತನಗೆ ಡಿಆರ್‌ಡಿಓ, ಮೋದಿ, ಅಮೆರಿಕ ಕಡೆಗಳಿಂದ ಕೆಲಸದ ಆಫರ್ ಬಂದಿತ್ತೆಂದು ಬೊಗಳೆ ಬಿಟ್ಟು ಪ್ರಸಿದ್ಧಿ ಗಳಿಸಿದ್ದಾತ. ಆದರೆ ಈಗ ಆತನ ಬಣ್ಣ ಬಯಲಾಗಿದೆ. ಆತನನ್ನು ವಿಪರೀತವಾಗಿ ಟ್ರೋಲ್ ಮಾಡಲಾಗುತ್ತಿದೆ.


Click it and Unblock the Notifications











