For Quick Alerts
  ALLOW NOTIFICATIONS  
  For Daily Alerts

  'ಸಲಗ' ಚಿತ್ರದಲ್ಲಿ ಅಲೋಕ್ ಕುಮಾರ್-ಸೈಲೆಂಟ್ ಸುನೀಲನ ನೆರಳು?

  |

  ಕಳೆದ ಕೆಲ ದಿನಗಳ ಹಿಂದೆ ಸುದ್ದಿ ವಾಹಿನಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗತ್ತು. ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಬೆಂಗಳೂರಿನ ರೌಡಿ ಶೀಟರ್ ಗಳನ್ನ ಕರೆಸಿ ರೌಡಿ ಪರೇಡ್ ನಡೆಸಿ ಎಚ್ಚರಿಕೆ ನೀಡಿದ್ದರು.

  ಈ ವೇಳೆ ರೌಡಿ ಶೀಟರ್ ಸೈಲೆಂಟ್ ಸುನೀಲ್ ಮತ್ತು ಸಿಸಿಬಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನಡುವೆ ನಡೆದ ಸಂಭಾಷಣೆ ಸಾಮಾನ್ಯ ಜನತೆಗೆ ಅಚ್ಚರಿ ನೀಡಿತ್ತು. ಬರಿ ಸಿನಿಮಾಗಳಲ್ಲಿ ನೋಡುತ್ತಿದ್ದ ದೃಶ್ಯವನ್ನ ನಿಜವಾಗಲೂ ನೋಡಿ ಅಬ್ಬಾ ಎಂದು ಅಚ್ಚರಿಯಾಗಿದ್ದರು.

  ದುನಿಯಾ ವಿಜಿಯ 'ಸಲಗ' ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್

  'ಏನೋ ಗುರ್ರಾಯಿಸ್ತಿದ್ದಿಯಾ, ಕಣ್ಣು ಕೆಳಗೆ ಇಳಿಸೋ, ಸರಿಯಾಗಿ ನಿಂತ್ಕೋ' ಅದೂ ಇದು ಅಂತಹ ಸರಿಯಾಗಿ ಚಳಿ ಬಿಡಿಸಿದ್ದರು. ಇದೀಗ, ಈ ದೃಶ್ಯಕ್ಕೂ ದುನಿಯಾ ವಿಜಯ್ ಅವರ ಸಲಗ ಚಿತ್ರಕ್ಕೂ ಏನೋ ಲಿಂಕ್ ಇದೆ ಎಂಬ ಸುಳಿವು ಸಿಗುತ್ತಿದೆ. ಇದು ಎಷ್ಟು ನಿಜಾನೋ ಕುತೂಹಲ ಮೂಡಿಸುತ್ತಿದೆ. ಅಷ್ಟಕ್ಕೂ, ಏನಿದು ಕಥೆ.? ಮುಂದೆ ಓದಿ.....

  ಪ್ರಶ್ನೆ ಹುಟ್ಟುಹಾಕಿದ ಸಲಗ ಮೇಕಿಂಗ್ ಚಿತ್ರ

  ಪ್ರಶ್ನೆ ಹುಟ್ಟುಹಾಕಿದ ಸಲಗ ಮೇಕಿಂಗ್ ಚಿತ್ರ

  ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರದಲ್ಲಿ ಧನಂಜಯ್ ಐಪಿಎಸ್ ಆಫೀಸರ್ ಪಾತ್ರ ಮಾಡುತ್ತಿದ್ದು, ದುನಿಯಾ ವಿಜಯ್ ರೌಡಿ ಶೀಟರ್ ಪಾತ್ರ ಎನ್ನಲಾಗಿದೆ. ಇತ್ತೀಚಿಗಷ್ಟೆ ಸಲಗ ಚಿತ್ರದ ಮೇಕಿಂಗ್ ಚಿತ್ರವೊಂದು ಬಿಡುಗಡೆಯಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿ ಧನಂಜಯ್ ರೌಡಿ ಶೀಟರ್ ನಂತೆ ಕಾಣಿಸಿಕೊಂಡಿರುವ ದುನಿಯಾ ವಿಜಿಗೆ ಅವಾಜ್ ಹಾಕ್ತಿದ್ದಾರೆ.

  ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ 'ಸಲಗ' ಟೀಂ

  ಅದಕ್ಕೂ ಇದಕ್ಕೂ ಲಿಂಕ್ ಇದ್ಯಾ?

  ಅದಕ್ಕೂ ಇದಕ್ಕೂ ಲಿಂಕ್ ಇದ್ಯಾ?

  ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಮತ್ತು ಸೈಲೆಂಟ್ ಸುನೀಲ್ ನಡುವೆ ನಡೆದ ಘಟನೆ ಮತ್ತು ಸಲಗ ಚಿತ್ರದ ಮೇಕಿಂಗ್ ಚಿತ್ರ ಗಮನಿಸಿದಾಗ ಇವೆರಡಕ್ಕೂ ಸಂಬಂಧ ಇದ್ಯಾ ಎಂಬ ಪ್ರಶ್ನೆ ಮೂಡುತ್ತಿದೆ. ಅಂದು ನಿಜವಾಗಲೂ ನಡೆದ ಘಟನೆಯಂತೆ ಇಂದು ಸಿನಿಮಾದಲ್ಲಿ ಬಳಸಲಾಗಿದ್ಯಾ ಎಂಬ ಕುತೂಹಲವೂ ಇದೆ. ಅದೇ ಸನ್ನಿವೇಶ ಸಲಗ ಚಿತ್ರದಲ್ಲೂ ಮರುಕಳಿಸಬಹುದು ಎಂಬ ನಿರೀಕ್ಷೆ ಇದೆ.

  'ಟಗರು' ಅಡ್ಡಾದಲ್ಲಿ ಕಾಣಿಸಿಕೊಂಡ 'ಸಲಗ': ಇಲ್ಲಿದೆ ಕಾರಣ

  ಸೈಲೆಂಟ್ ಸುನೀಲನ ಪಾತ್ರನಾ?

  ಸೈಲೆಂಟ್ ಸುನೀಲನ ಪಾತ್ರನಾ?

  ಅಂದ್ಹಾಗೆ, ಸಲಗ ಚಿತ್ರದಲ್ಲಿ ದುನಿಯಾ ವಿಜಯ್ ಪಾತ್ರ ಏನು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ನಿಜ ಘಟನೆ ಆಧಾರಿತ ಸಿನಿಮಾ ಎಂದು ಹೇಳಲಾಗಿದೆ. ಇದೀಗ, ಈ ಮೇಕಿಂಗ್ ಚಿತ್ರ ನೋಡಿದ್ಮೇಲೆ ಇದು ಸೈಲೆಂಟ್ ಸುನೀಲನ ಕಥೆನಾ? ವಿಜಿ ಮಾಡ್ತಿರೋದು ಸುನೀಲನ ಪಾತ್ರನಾ ಎಂಬ ಕುತೂಹಲ ಕಾಡುತ್ತಿದೆ.

  ಟ್ರೋಲ್ ಆಗ್ತಿದೆ ಈ ಫೋಟೋ

  ಟ್ರೋಲ್ ಆಗ್ತಿದೆ ಈ ಫೋಟೋ

  ದುನಿಯಾ ವಿಜಯ್ ಗೆ ಅವಾಜ್ ಹಾಕ್ತಿರುವ ಧನಂಜಯ್ ಫೋಟೋ ಮತ್ತು ಸೈಲೆಂಟ್ ಸುನೀಲನಿಗೆ ಅವಾಜ್ ಹಾಕ್ತಿರುವ ಅಲೋಕ್ ಕುಮಾರ್ ಫೋಟೋ ಬಳಸಿ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗ್ತಿದೆ. ಇದು ನಿಜನಾ ಅಥವಾ ಬರಿ ಪ್ರಚಾರನಾ ಎಂದು ಚರ್ಚೆಗಳು ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.

  'ಸಲಗ' ನಿರ್ದೇಶಕ ಚೇಂಜ್, ವಿಜಿ ಮುಂದಿನ ಸಿನಿಮಾನೂ ಚೇಂಜ್

  ಸೈಲೆಂಟ್ ಸುನೀಲನ ಸಿನಿಮಾ ನಿಂತು ಹೋಗಿದೆ

  ಸೈಲೆಂಟ್ ಸುನೀಲನ ಸಿನಿಮಾ ನಿಂತು ಹೋಗಿದೆ

  ಈ ಹಿಂದೆ ಸೈಲೆಂಟ್ ಸುನೀಲನ ಹೆಸರಿನಲ್ಲಿ ಅಗ್ನಿ ಶ್ರೀಧರ್ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಮಾಡಲಾಗಿತ್ತು. ದುನಿಯಾ ಸೂರಿ ನಿರ್ದೇಶನ ಮಾಡುತ್ತಿದ್ದರು. ಈ ಚಿತ್ರದಲ್ಲಿ ಸ್ವತಃ ಸೈಲೆಂಟ್ ಸುನೀಲ ನಟಿಸುತ್ತಿದ್ದರು. ಆಮೇಲೆ ಏನಾಯ್ತೋ ಗೊತ್ತಿಲ್ಲ. ಸಿನಿಮಾ ನಿಂತು ಹೋಯಿತು. ಇದೀಗ, ಸಲಗ ಸಿನಿಮಾದ ಕೆಲವು ಚಿತ್ರಗಳು ಇದೇ ವಿಚಾರದಲ್ಲಿ ಸದ್ದು ಮಾಡ್ತಿದೆ.

  English summary
  Big debate going around salaga movie making still. after seeing this still we have one doubt. Duniya vijay playing silent sunila character in salaga movie?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X