Bigg Boss Kannada 11 ; ನನಗೆ ನಾನೇ ಬಾಸ್, ನಮ್ಮ ಮನೆ ಬಿಟ್ಟು ಯಾವ ಮನೆಗೂ ಹೋಗ್ತಿಲ್ಲ ಎಂದ ಖ್ಯಾತ ನಟಿ..!

ಪ್ರತಿ ವರ್ಷ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಮುನ್ನ, ಈ ಬಾರಿ ಮನೆಯಲ್ಲಿ ಯಾರನ್ನೆಲ್ಲ ಕಣ್ತುಂಬಿಕೊಳ್ಳಬಹುದು ಎನ್ನುವ ಚಿಂತೆ ಕೆಲವರನ್ನು ಕಾಡಲು ಶುರುಮಾಡುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲು ಇನ್ನೂ ಒಂದೆರಡು ತಿಂಗಳು ಬಾಕಿ ಇರುವಾಗಲೇ ಕೆಲ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಸದ್ದು ಮಾಡಲು ಶುರು ಮಾಡುತ್ತವೆ

ಈ ಬಾರಿ ಕೂಡ ಇದೇ ತರಹದ ವಾತಾವರಣ ಇದೆ. ತುಕಾಲಿ ಸಂತೋಷ್ ಅವರ ಪತ್ನಿ ಮಾನಸಾ ಅವರಿಂದ ಹಿಡಿದು ಭೀಮನ ಗಿರಿಜಾ ಪ್ರಿಯಾ ಷಠಮರ್ಷಣವರೆಗೆ, ಕನ್ನಡದ ಹಿರಿಯ ನಾಯಕಿ ಪ್ರೇಮಾ ಅವರಿಂದ ಹಿಡಿದು ತೆಲುಗಿನಲ್ಲಿಯೇ ಬಿಡಾರ ಹೂಡಿರುವ ನಭಾ ನಟೇಶ್‌ವರೆಗೆ ಅನೇಕರ ಹೆಸರು ಈ ಬಾರಿಯ ಬಿಗ್ ಬಾಸ್ ಮನೆಯ ಸುತ್ತ ಮುತ್ತ ಕೇಳಿ ಬರುತ್ತಿವೆ. ಆ ಪೈಕಿ ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹ ಅವರ ಹೃದಯದ ಒಡತಿ ಹರಿಪ್ರಿಯಾ ಅವರ ಹೆಸರು ಕೂಡ ಒಂದು.

Will Haripriya participate in Kannada Bigg Boss Season 11 What did the actress say

ಹೌದು, ಅಸಲಿಗೆ ಮೊನ್ನೆ ಬಿಗ್ ಬಾಸ್ ತಂಡ ಹೊಸ ಪ್ರೋಮೋ ಹಂಚಿಕೊಂಡಿತ್ತು. ಸ್ಪಷ್ಟತೆ ಇಲ್ಲದ, ಅರ್ಧ ಮುಖಗಳನ್ನೊಂದಿರುವ ಫೋಟೋಗಳನ್ನು ತೋರಿಸುವ ಮೂಲಕ ಪ್ರೇಕ್ಷಕರ ತಲೆಗೆ ಹುಳ ಬಿಡುವ ಪ್ರಯತ್ನ ಮಾಡಿತ್ತು. ಇದರ ಪ್ರತಿಫಲವೆನ್ನುವಂತೆ ಅನೇಕರು ಬ್ಲರ್ ಆದ ಫೋಟೋಗಳನ್ನು ನೋಡುತ್ತಾ ಇವರು ಅವರಿರಬಹುದು, ಅವರೇ ಇವರಿರಬಹುದು ಎಂದು ಮಾತನಾಡಿಕೊಂಡರು. ಹರಿಪ್ರಿಯಾಗೆ ಸಾಮ್ಯತೆ ಇರುವ ಫೋಟೋವನ್ನು ನೋಡಿ, ಹರಿಪ್ರಿಯಾ ಕೂಡ ಬಿಗ್ ಬಾಸ್ ಮನೆಗೆ ಹೋಗ್ತಿದ್ದಾರೆ ಎಂದುಕೊಂಡರು. ಆದರೆ ಈಗ ಹರಿಪ್ರಿಯಾ ಖುದ್ದು ಈ ವಿಚಾರದಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ನನಗೆ ನಾನೇ ಬಾಸು ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಹರಿಪ್ರಿಯಾ, ಇಲ್ಲಪ್ಪಾ ಇಲ್ಲ ನನಗೆ ನಾನೇ ಬಾಸು, ನಾನು ನಮ್ಮ ಮನೆ ಬಿಟ್ಟು ಯಾವ ಮನೆಗೂ ಹೋಗ್ತಿಲ್ಲ ಎಂದಿದ್ದಾರೆ. ಈ ಮೂಲಕ ಹರಿಪ್ರಿಯಾ ಅವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಬಹುದು ಎಂದುಕೊಂಡ ತಮ್ಮ ಅಭಿಮಾನಿಗಳ ಆಸೆಗೆ ಹರಿಪ್ರಿಯಾ ತಣ್ಣೀರು ಸುರಿದಿದ್ದಾರೆ.

ಇನ್ನೂ ಹರಿಪ್ರಿಯಾ ನಾನು ಯಾವ ಮನೆಗೆ ಹೋಗುತ್ತಿಲ್ಲ ಎಂದು ಹೇಳಿದ ಬೆನ್ನಲ್ಲಿಯೇ ಹರಿಪ್ರಿಯಾ ಅವರನ್ನು ಹೋಲುತ್ತಿರುವ ಆ ಮುಖ ಯಾರದ್ದು ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ. ಯಾರಿರಬಹುದು ಎಂದು ಒಂದು ವರ್ಗ ಹುಡುಕಾಟವನ್ನೂ ಕೂಡ ನಡೆಸಿದೆ.

ಅಂದ್ಹಾಗೇ ಈ ಬಾರಿ ಬಿಗ್ ಬಾಸ್ ನಲ್ಲಿ ಬದಲಾವಣೆ ಮಾಡಲಾಗಿದೆ. ಸ್ವರ್ಗ ಮತ್ತು ನರಕ ಎಂದು ಎರಡು ತಂಡಗಳನ್ನಾಗಿ ವಿಗಂಡಿಸಿ ಮನೆಯೊಳಗೆ ಮೊದಲೇ ಕಳುಹಿಸಲಾಗುತ್ತಿದೆ. ಹೀಗಾಗಿ ಕಾರ್ಯಕ್ರಮ ಆರಂಭವಾಗುವ ಒಂದು ದಿನದ ಮುನ್ನವೇ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಫರ್ಧಿಗಳ ಹೆಸರನ್ನು ಬಹಿರಂಗ ಮಾಡಲು ಈ ಬಾರಿ ಬಿಗ್ ಬಾಸ್ ತಂಡ ನಿರ್ಧಾರ ಮಾಡಿದೆ. ಈ ಮೂಲಕ ಯಾರು ಸ್ವರ್ಗಕ್ಕೆ ಹೋಗಬೇಕು, ಯಾರು ನರಕಕ್ಕೆ ಹೋಗಬೇಕು ಎನ್ನುವುದನ್ನು ಮತದಾನದ ಮೂಲಕ ನೀವೇ ನಿರ್ಧಾರ ಮಾಡಿ ಎಂಬ ಆಯ್ಕೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಉಳಿದಂತೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಈ ಸೆಪ್ಟೆಂಬರ್ 29ರಿಂದ ಅದ್ದೂರಿಯಾಗಿ ಶುರುವಾಗಲಿದೆ. ಪ್ರತಿ ದಿನ ರಾತ್ರಿ 09-30ರಿಂದ ನೀವು ಈ ಕಾರ್ಯಕ್ರಮವನ್ನು ನೋಡಬಹುದು.

More from Filmibeat

Read more about: haripriya biggboss bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X