ಕೆಜಿಎಫ್ ಆಯ್ತು, ಈಗ ಪೊಗರು: ಏನ್ ಹೇಳುತ್ತೆ ಆರೋಗ್ಯ ಇಲಾಖೆ?
ಸಿನಿಮಾ ಎಂದಾಕ್ಷಣ ಎಲ್ಲವೂ ಮನರಂಜನೆ ಎಂದು ತೆಗೆದುಕೊಳ್ಳುವುದು ತಪ್ಪಾಗುತ್ತದೆ. ಏಕಂದ್ರೆ, ಸಿನಿಮಾ ಕೇವಲ ಮನರಂಜನೆ ಮಾತ್ರವಲ್ಲ. ಅದೊಂದು ಮಾಧ್ಯಮ. ಸಾಮಾಜಿಕ ಜವಾಬ್ದಾರಿಯೂ ಹೌದು. ಸರಿ ಮತ್ತು ತಪ್ಪುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಕರ್ತವ್ಯವಾಗಿದೆ. ಸಿನಿಮಾವನ್ನು ಸ್ಫೂರ್ತಿಯಾಗಿಸಿಕೊಂಡಿರುವ ಅನೇಕ ಉದಾಹರಣೆಗಳು ಕಣ್ಣ ಮುಂದಿದೆ.
Recommended Video
ಅಣ್ಣಾವ್ರ 'ಬಂಗಾರದ ಮನುಷ್ಯ' ನೋಡಿ ಹಲವರು ನಗರ ಬಿಟ್ಟು ಹಳ್ಳಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಂಡರು. ವಿಷ್ಣು ಅವರ ಯಜಮಾನ ಸಿನಿಮಾ ನೋಡಿ ಅಣ್ಣ-ತಮ್ಮಂದಿರು ಒಟ್ಟಾಗಿರುವ ಕುಟುಂಬಗಳಿವೆ. ಶಂಕರ್ ನಾಗ್ ಅವರ ಸಾಂಗ್ಲಿಯಾನ ಸಿನಿಮಾ ನೋಡಿ ಪೊಲೀಸ್ ಅಂದ್ರೆ ಹೀಗಿರಬೇಕು ಎಂದು ಕಾರ್ಯನಿರ್ವಹಿಸುವ ಪೊಲೀಸರಿದ್ದಾರೆ. ಆದರೂ, ಮನರಂಜನೆಯನ್ನೇ ಮುಖ್ಯ ವಿಷಯವನ್ನಾಗಿಸಿ ಸಮಾಜಕ್ಕೆ ಬೇಡವಾದ ವಿಷಯಗಳನ್ನು ಕೆಲವು ಸಿನಿಮಾಗಳು ನೀಡುತ್ತಾ ಬಂದಿದೆ. ಮುಂದೆ ಓದಿ...

ಕೆಜಿಎಫ್ ದೃಶ್ಯಕ್ಕೆ ಆಕ್ಷೇಪ
ಕೆಜಿಎಫ್ ಚಾಪ್ಟರ್ 2 ಟ್ರೈಲರ್ ರಿಲೀಸ್ ಆದ ಸಂದರ್ಭದಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ದೃಶ್ಯವೊಂದನ್ನು ಖಂಡಿಸಿತ್ತು. ಯಶ್ ಅವರು ಸಿಗರೇಟ್ ಹಚ್ಚುವ ಸೀನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಚಿತ್ರನಟರಿಗೆ ಸುಧಾಕರ್ ಮನವಿ
ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ಡಾ ಸುಧಾಕರ್ ''ಯಶ್ ಮಾತ್ರವಲ್ಲ ಎಲ್ಲಾ ನಟರಿಗೂ ಮನವಿ ಮಾಡುತ್ತೇವೆ. ಸಾವಿರಾರು ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಾರೆ. ಹಾಗಾಗಿ ಇಂತಹ ದೃಶ್ಯಗಳನ್ನು ತೋರಿಸಬಾರದು. ನಟರು ಈ ಬಗ್ಗೆ ಜಾಗೃತಿ ಮೂಡಿಸಬೇಕು'' ಎಂದು ಸಿಗರೇಟ್ ದೃಶ್ಯದ ಬಗ್ಗೆ ಹೇಳಿದ್ದರು.

ಪೊಗರು ಚಿತ್ರದಲ್ಲೂ ಅಂತಹದ್ದೇ ದೃಶ್ಯ
ಆದ್ರೀಗ, ಪೊಗರು ಹಾಡಿನಲ್ಲೂ ಇಂತಹದೊಂದು ದೃಶ್ಯ ಈಗ ವೈರಲ್ ಆಗಿದೆ. ವ್ಯಕ್ತಿಯೊಬ್ಬನ ಕೈಗೆ ಬೆಂಕಿ ಹಚ್ಚಿ, ಆ ಬೆಂಕಿಯಿಂದ ಧ್ರುವ ಸರ್ಜಾ ಸಿಗರೇಟ್ ಹಚ್ಚು ದೃಶ್ಯವಿದೆ. ಈ ದೃಶ್ಯಕ್ಕೆ ''ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ'' ಎಂದು ಹಾಕಲಾಗಿದೆ. ಆದರೂ ಈ ದೃಶ್ಯವನ್ನು ತೋರಿಸುವುದು ಬೇಡವಾಗಿತ್ತು ಎನ್ನುವ ಮಾತಿದೆ.

ಮನವಿನಾ ಅಥವಾ ನಿಯಮ ಜಾರಿನಾ?
ಕೆಜಿಎಫ್ ಟ್ರೈಲರ್ ಸಮಯದಲ್ಲಿ ಆರೋಗ್ಯ ಇಲಾಖೆ ಮನವಿ ಮಾಡಿದ್ದರು ಆ ಬಗ್ಗೆ ನಿರ್ದೇಶಕರು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಅದಕ್ಕೆ ಪೊಗರು ಸಾಂಗ್ ತಾಜಾ ಉದಾಹರಣೆ. ಪದ್ದತಿಯಂತೆ ಈ ಸಲವೂ ಆರೋಗ್ಯ ಇಲಾಖೆ ಮನವಿ ಮಾಡಿ ಸುಮ್ಮನಾಗುತ್ತಾ ಅಥವಾ ಭವಿಷ್ಯದ ದೃಷ್ಟಿಯಿಂದ ಹೊಸ ನಿಯಮ ಜಾರಿ ಮಾಡುವ ಬಗ್ಗೆ ಚಿಂತಿಸುತ್ತಾ?


Click it and Unblock the Notifications











