twitter
    For Quick Alerts
    ALLOW NOTIFICATIONS  
    For Daily Alerts

    ಮಂಡ್ಯ ರಾಜಕೀಯ: ಸಿನಿಮಾರಂಗದಲ್ಲೇ ಎರಡು ಬಣ ಸಾಧ್ಯತೆ.?

    |

    Recommended Video

    Lok Sabha Elections 2019 : ಸ್ಯಾಂಡಲ್ ವುಡ್ ಗೆ ಮಂಡ್ಯ ರಾಜಕೀಯದಿಂದ ಎಫೆಕ್ಟ್ ಆಗುತ್ತಾ?

    ಮಂಡ್ಯ ಲೋಕಸಭೆ ಕ್ಷೇತ್ರದಿಂದ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕೆ ಇಳಿಯುವುದು ಸದ್ಯದ ಮಟ್ಟಿಗೆ ಬಹುತೇಕ ಖಚಿತ. ಸುಮಲತಾ ಅವರಿಗೆ ಬಿಜೆಪಿ ಸಪೋರ್ಟ್ ಮಾಡುತ್ತಾ ಅಥವಾ ಬಿಜೆಪಿಯಿಂದಲೇ ಸ್ಪರ್ಧಿಸಿ ಎಂದು ಆಫರ್ ನೀಡುತ್ತಾ ಕಾದುನೋಡಬೇಕಿದೆ.

    ಆದ್ರೆ, ನಿಖಿಲ್ ಕುಮಾರ್ ವರ್ಸಸ್ ಸುಮಲತಾ ಅಂಬರೀಶ್ ಎನ್ನುವುದು ಮಾತ್ರ ನಿಜ. ಇದರಿಂದ ಕೇವಲ ಕುಮಾರಸ್ವಾಮಿ ಮತ್ತು ಅಂಬರೀಶ್ ಕುಟುಂಬದ ನಡುವೆ ಮಾತ್ರವಲ್ಲ, ಸ್ಯಾಂಡಲ್ ವುಡ್ ಅಂಗಳದಲ್ಲೂ ಎರಡು ಬಣ ಆಗುವ ಸಾಧ್ಯತೆ ಹೆಚ್ಚಿದೆ.

    ಸುಮಲತಾ ಜೊತೆ ದರ್ಶನ್ ಒಬ್ಬರಿದ್ದಾರೆ ಸಾಕು, ಬೇರೆ ಯಾರೂ ಅಗತ್ಯವಿಲ್ಲ: ಸುದೀಪ್ ಸುಮಲತಾ ಜೊತೆ ದರ್ಶನ್ ಒಬ್ಬರಿದ್ದಾರೆ ಸಾಕು, ಬೇರೆ ಯಾರೂ ಅಗತ್ಯವಿಲ್ಲ: ಸುದೀಪ್

    ದರ್ಶನ್, ಯಶ್ ಸುಮಲತಾ ಪರ ಪ್ರಚಾರ ಮಾಡೋದು ಪಕ್ಕಾ ಆಗಿದೆ. ಈ ಕಡೆ ಸುಮಲತಾ ಅವರಿಗೆ ಚಿತ್ರರಂಗದಿಂದ ದೊಡ್ಡ ಮಟ್ಟದ ಬೆಂಬಲ ಸಿಗುವ ಎಲ್ಲ ಲಕ್ಷಣಗಳಿವೆ. ಹಾಗಂತ, ನಿಖಿಲ್ ಕುಮಾರ್ ಗೆ ಇಂಡಸ್ಟ್ರಿ ಬೆಂಬಲ ಸಿಗಲ್ಲ ಅಂತಿಲ್ಲ. ಎಚ್.ಡಿ. ಕುಮಾರಸ್ವಾಮಿ ಕೂಡ ಚಿತ್ರರಂಗಕ್ಕೆ ಸಂಬಂಧಪಟ್ಟವರಾಗಿವುದರಿಂದ ಬಹುಶಃ ಕೆಲವು ಸ್ಟಾರ್ ಗಳು ನಿಖಿಲ್ ಪರ ಪ್ರಚಾರಕ್ಕೆ ಧುಮುಕಬಹುದು.? ಸದ್ಯಕ್ಕೆ ಯಾರು ಯಾವ ಬಣ? ಮುಂದೆ ಓದಿ....

    ಮುನಿರತ್ನ ನಿಲುವೇನು?

    ಮುನಿರತ್ನ ನಿಲುವೇನು?

    ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಅಂಬರೀಶ್ ಅವರಿಗೆ ಆತ್ಮೀಯರಾಗಿದ್ದರು. ಜೊತೆಗೆ ಕಾಂಗ್ರೆಸ್ ಶಾಸಕರು ಕೂಡ ಹೌದು. ಈಗ ಸುಮಲತಾ ಪರ ಪ್ರಚಾರ ಮಾಡ್ಬೇಕಾ ಅಥವಾ ಮೈತ್ರಿ ಸರ್ಕಾರದ ಪರವಾಗಿ ಹೋಗ್ಬೇಕಾ ಎಂಬ ಗೊಂದಲ ಮುನಿರತ್ನ ಅವರಿಗಿದೆ. ಹಾಗಾಗಿ ಕಾಂಗ್ರೆಸ್ ಶಾಸಕ ಮುನಿರತ್ನ ಅವರ ನಿಲುವೇನು?

    ಮಂಡ್ಯದಲ್ಲಿ ಸುಮಲತಾ-ನಿಖಿಲ್ ಸ್ಪರ್ಧೆ: ದರ್ಶನ್, ಸುದೀಪ್, ಯಶ್ ನಿಲುವೇನು? ಮಂಡ್ಯದಲ್ಲಿ ಸುಮಲತಾ-ನಿಖಿಲ್ ಸ್ಪರ್ಧೆ: ದರ್ಶನ್, ಸುದೀಪ್, ಯಶ್ ನಿಲುವೇನು?

    ಸಿಎಂ ಮತ್ತು ಮುನಿರತ್ನ

    ಸಿಎಂ ಮತ್ತು ಮುನಿರತ್ನ

    ಎಚ್ ಡಿ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಶಾಸಕನಾಗಿರುವ ಮುನಿರತ್ನ ಅವರು, ವೈಯಕ್ತಿಕವಾಗಿ ಎಚ್.ಡಿ.ಕೆ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದಕ್ಕೂ ಮಿಗಿಲಾಗಿ ಕುಮಾರಸ್ವಾಮಿ ಅವರ ಮಗನ ಜೊತೆ ಕುರುಕ್ಷೇತ್ರ ಸಿನಿಮಾ ಮಾಡಿದ್ದಾರೆ. ಹೀಗಾಗಿ, ಮುನಿರತ್ನ ಅವರ ಪ್ರಚಾರ ಕಾಂಗ್ರೆಸ್ ಪರ ಅಂದ್ರೆ ಮೈತ್ರಿ ಅಭ್ಯರ್ಥಿ ಪರವಾಗಿಯೇ ಇರಬಹುದು ಎಂಬ ಲೆಕ್ಕಾಚಾರ.

    ಮುನಿರತ್ನ ವರ್ಸಸ್ ರಾಕ್ ಲೈನ್

    ಮುನಿರತ್ನ ವರ್ಸಸ್ ರಾಕ್ ಲೈನ್

    ಹಾಗ್ನೋಡಿದ್ರೆ, ಮುನಿರತ್ನ ಮತ್ತು ರಾಕ್ ಲೈನ್ ವೆಂಕಟೇಶ್ ಸಂಬಂಧದಲ್ಲಿ ಬೀಗರು. ಪರಸ್ಪರ ಸಿನಿಮಾ ನಿರ್ಮಾಣದಲ್ಲಿ, ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಇರೋರು. ಈಗ ಮಂಡ್ಯ ಚುನಾವಣೆಯಲ್ಲಿ ರಾಕ್ ಲೈನ್ ವೆಂಕಟೇಶ್ ಸುಮಲತಾ ಪರ ಪ್ರಚಾರ ಮಾಡೋದು ಮತ್ತು ಸುಮಲತಾ ಅವರ ಜೊತೆಯಲ್ಲೇ ನಿಲ್ಲುವುದು ಖಚಿತ. ಇಲ್ಲಿ ರಾಕ್ ಲೈನ್ ಮತ್ತು ಮುನಿರತ್ನ ನಡುವೆ ರಾಜಕೀಯ ಬಿಕ್ಕಟ್ಟು ಮೂಡಬಹುದು.

    ಅಭಿಷೇಕ್ ಮತ್ತು ನಿಖಿಲ್

    ಅಭಿಷೇಕ್ ಮತ್ತು ನಿಖಿಲ್

    ಅಂಬರೀಶ್ ಪುತ್ರ ಅಭಿಷೇಕ್ ಮತ್ತು ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಇಬ್ಬರು ಸ್ನೇಹಿತರು. ಆದ್ರೀಗ ಮಂಡ್ಯ ಕಣದಲ್ಲಿ ಶತ್ರುಗಳಂತೆ ಕಾದಾಡಬೇಕಿದೆ. ಅಮ್ಮನ ಪರ ಅಭಿ ಪ್ರಚಾರ ಮಾಡಿದ್ರೆ, ತನ್ನನ್ನು ತಾನು ಗೆಲ್ಲಿಸಿಕೊಳ್ಳಲು ಸ್ನೇಹಿತನ ಎದುರು ನಿಲ್ಲಬೇಕಾಗಿದೆ.

    ಸ್ನೇಹಿತರ ಸವಾಲ್: ನಿಖಿಲ್ ಮತ್ತು ಅಭಿ ಇಬ್ಬರಲ್ಲಿ ಮಂಡ್ಯ ಉತ್ತರಾಧಿಕಾರಿ ಯಾರು? ಸ್ನೇಹಿತರ ಸವಾಲ್: ನಿಖಿಲ್ ಮತ್ತು ಅಭಿ ಇಬ್ಬರಲ್ಲಿ ಮಂಡ್ಯ ಉತ್ತರಾಧಿಕಾರಿ ಯಾರು?

    ದರ್ಶನ್, ಯಶ್

    ದರ್ಶನ್, ಯಶ್

    ಇನ್ನು ಮಂಡ್ಯ ಕ್ಷೇತ್ರದಲ್ಲಿ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿರುವ ದರ್ಶನ್, ಯಶ್ ಸುಮಲತಾ ಪರ ಪ್ರಚಾರ ಮಾಡಲಿದ್ದಾರೆ. ದರ್ಶನ್, ಯಶ್ ಬಂದ್ಮೇಲೆ ಇವರ ಜೊತೆ ಮತ್ತಷ್ಟು ಕಲಾವಿದರು ಬರುವ ಸಾಧ್ಯತೆ ಹೆಚ್ಚಿದೆ. ಬಟ್, ಯಾರ್ ಯಾರು ಬರ್ತಾರೆ ಎನ್ನುವುದು ಕಾದುನೋಡಬೇಕಿದೆ.

    ದರ್ಶನ್ ನನ್ನ ದೊಡ್ಡ ಮಗ, ಯಶ್ ಮನೆ ಮಗ: ಸುಮಲತಾ ದರ್ಶನ್ ನನ್ನ ದೊಡ್ಡ ಮಗ, ಯಶ್ ಮನೆ ಮಗ: ಸುಮಲತಾ

    ಶಿವಣ್ಣ ಅಖಾಡಕ್ಕೆ ಇಳಿಯಬಹುದಾ?

    ಶಿವಣ್ಣ ಅಖಾಡಕ್ಕೆ ಇಳಿಯಬಹುದಾ?

    ಮತ್ತೊಂದೆಡೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಏನಾದರೂ ಮಂಡ್ಯ ಲೋಕಸಭೆಯಲ್ಲಿ ಪ್ರಚಾರಕ್ಕೆ ಬರಬಹುದಾ ಎಂಬ ಪ್ರಶ್ನೆ ಕಾಡುವುದು ಸಹಜ. ಯಾಕಂದ್ರೆ, ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಶಿವಣ್ಣ ಸೇರಿದಂತೆ ಅನೇಕ ಸ್ಟಾರ್ ಗಳು ಪ್ರಚಾರ ಮಾಡಿದ್ರು. ಒಂದು ವೇಳೆ ಶಿವಣ್ಣ ಮಂಡ್ಯಗೆ ಎಂಟ್ರಿ ಕೊಟ್ಟರೂ, ನಿಖಿಲ್ ಅಥವಾ ಸಮಲತಾ ಇಬ್ಬರಲ್ಲಿ ಯಾರ ಪರ ಎಂಬುದು ಗೊಂದಲವಾಗಬಹುದು.

    English summary
    Will Mandya election effect on sandalwood? Who will support to nikhil kumar and who will support to sumalatha ambarish in MP Election 2019.
    Tuesday, March 12, 2019, 11:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X