For Quick Alerts
  ALLOW NOTIFICATIONS  
  For Daily Alerts

  ಮುಖ್ಯಮಂತ್ರಿ ಪುತ್ರ ನಿಖಿಲ್ ಬಗ್ಗೆ 'ಹೀಗೊಂದು' ಸುದ್ದಿ.!

  By Harshitha
  |
  ನಿಖಿಲ್ ಬಗ್ಗೆ ಚೆನ್ನಿಗಪ್ಪ ಹೇಳಿದ್ದು ಎಷ್ಟು ನಿಜ..? | Oneindia Kannada

  ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. 'ಜಾಗ್ವಾರ್' ಸಕ್ಸಸ್ ಆದ್ಮೇಲೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ 'ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿನಯಿಸಿದ ನಿಖಿಲ್ ಸದ್ಯ 'ಸೀತಾ ರಾಮ ಕಲ್ಯಾಣ' ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

  ಹೀಗಿರುವಾಗಲೇ, ನಿಖಿಲ್ ಕುಮಾರ್ ಬಗ್ಗೆ ಒಂದು ಸುದ್ದಿ ರಾಜಕೀಯ ವಲಯದಲ್ಲಿ ಗಿರಕಿ ಹೊಡೆಯುತ್ತಿದೆ. ಅದೇನಪ್ಪಾ ಅಂದ್ರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಕಣಕ್ಕೆ ಇಳಿಯಲಿದ್ದಾರಂತೆ.

  ಈ ಅಂತೆ-ಕಂತೆ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿರುವುದು ಚೆನ್ನಿಗಪ್ಪ ರವರ ಹೇಳಿಕೆ. ''ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ ನೀಡುತ್ತೇವೆ'' ಎಂದು ಚೆನ್ನಿಗಪ್ಪ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ.

  ರಾಮನಗರ ಬೈ ಎಲೆಕ್ಷನ್: ನಿಖಿಲ್ ಕುಮಾರ್ ಜೆಡಿಎಸ್ ಅಭ್ಯರ್ಥಿ.!ರಾಮನಗರ ಬೈ ಎಲೆಕ್ಷನ್: ನಿಖಿಲ್ ಕುಮಾರ್ ಜೆಡಿಎಸ್ ಅಭ್ಯರ್ಥಿ.!

  ''ಭವಾನಿ ಆದರೂ ಓಕೆ, ನಿಖಿಲ್ ಆದರೂ ಓಕೆ. ಯಾರನ್ನೇ ಕಣಕ್ಕೆ ಇಳಿಸಿದರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು'' ಎಂದು ಚೆನ್ನಿಗಪ್ಪ ಹೇಳಿದ್ದಾರೆ.

  ಈಗಾಗಲೇ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಪಕ್ಷದ ಪರವಾಗಿ ನಿಖಿಲ್ ಕುಮಾರ್ ಪ್ರಚಾರ ಮಾಡಿದ್ದರು. ರಾಜಕೀಯಕ್ಕಿಂತ ಸಿನಿಮಾ ನನಗೆ ಅಚ್ಚುಮೆಚ್ಚು ಅಂತ ಅನೇಕ ಬಾರಿ ನಿಖಿಲ್ ಕುಮಾರ್ ಹೇಳಿದ್ದಾರೆ. ಇದೀಗ ಪಕ್ಷದವರ ಒತ್ತಾಯಕ್ಕೆ ಮಣಿದು ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸುತ್ತಾರಾ.? ಇದಕ್ಕೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡ ಗ್ರೀನ್ ಸಿಗ್ನಲ್ ಕೊಡ್ತಾರಾ ಅನ್ನೋದೇ ಮುಂದಿನ ಪ್ರಶ್ನೆ.

  English summary
  Will Kannada Actor, Karnataka CM HD Kumaraswamy son Nikhil Kumar contest in upcoming Loksabha elections.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X