'ಪಂಚತಂತ್ರ' ಚಿತ್ರಕ್ಕೆ ಹಿಂದಿ ಮತ್ತು ತೆಲುಗಿನಿಂದ ಬೇಡಿಕೆ
ಯೋಗರಾಜ್ ಭಟ್ ನಿರ್ದೇಶನದ 'ಪಂಚತಂತ್ರ' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಸಿನಿಮಾ ನೋಡಿ ಬಹುಪಾಲು ಜನ ಹೊಗಳುತ್ತಿದ್ದಾರೆ.
ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಈ ಸಿನಿಮಾಗೆ ಈಗ ತೆಲುಗು ಹಾಗೂ ಹಿಂದಿಯಿಂದ ರಿಮೇಕ್ ಗೆ ಬೇಡಿಕೆ ಬರುತ್ತಿದೆಯಂತೆ. ಕಾರ್ ರೇಸ್ ಕಥೆ ಬೇರೆ ಭಾಷೆಯಲ್ಲಿಯೂ ಬರುವ ಸಾಧ್ಯತೆ ಇದೆ.
ಕನ್ನಡದಲ್ಲಿ ಈಗ ಸಾಕಷ್ಟು ಚಿತ್ರಗಳು ರಿಮೇಕ್ ಆಗುತ್ತಿದ್ದು, ಆ ಸಾಲಿಗೆ 'ಪಂಚತಂತ್ರ' ಕೂಡ ಸೇರಲಿದೆ ಎನ್ನಲಾಗುತ್ತಿದೆ. ಆದರೆ, ಈ ಚಿತ್ರದ ರಿಮೇಕ್ ವಿಷಯ ಇನ್ನೂ ಅಧಿಕೃತ ಆಗಿಲ್ಲ. ತೆಲುಗಿನಲ್ಲಿ ಆಂಧ್ರ ವರ್ಸಸ್ ತೆಲಂಗಾಣ ಎನ್ನುವ ಹೆಸರು ಇಡುವ ಸಾಧ್ಯತೆ ಇದೆ.

'ಪಂಚತಂತ್ರ' ಸಿನಿಮಾ ಹೇಗಿದೆ?
'ಪಂಚತಂತ್ರ' ಅಡ್ಡಿ ಇಲ್ಲದೆ ಒಂದು ಬಾರಿ ನೋಡಬಹುದಾದ ಸಿನಿಮಾ. ಚಿತ್ರದ ಕಥೆ ಹಾಗೂ ನಿರೂಪಣೆಗಳ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದೆ, ನೋಡಿದರೆ ಇಷ್ಟ ಆಗುತ್ತದೆ. ಕಾಮಿಡಿ ಹಾಗೂ ಡೈಲಾಗ್ ಗಳೇ ಇಲ್ಲಿ ಪ್ರಧಾನವಾಗಿವೆ. ಈ ಎರಡು ಕಾರಣಕ್ಕೆ ಸಿನಿಮಾವನ್ನು ಒಪ್ಪಿಕೊಳ್ಳಬಹದು, ಹೆಚ್ಚು ಇಷ್ಟ ಆದರೆ ಅಪ್ಪಿಕೊಳ್ಳಬಹುದು.


Click it and Unblock the Notifications











