ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡ್ತೀರಾ? ಅಂದ್ರೆ ಪುನೀತ್ ನಕ್ಕರು

ನಿರ್ದೇಶಕ ಪ್ರಶಾಂತ್ ನೀಲ್ 'ಕೆ ಜಿ ಎಫ್' ಸಿನಿಮಾದ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲ ಸಿನಿಮಾ 'ಉಗ್ರಂ' ಮೂಲಕ ದೊಡ್ಡ ಹಿಟ್ ನೀಡಿದ್ದ ಈ ನಿರ್ದೇಶಕ ಈಗ ಅದಕ್ಕೂ ಮೀರಿದ ಗುರಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ.

ಮೊದಲು ಶ್ರೀ ಮುರಳಿ, ಬಳಿಕ ಯಶ್ ಗೆ ಆಕ್ಷನ್ ಕಟ್ ಹೇಳಿರುವ ಈ ನಿರ್ದೇಶಕ ಮುಂದೆ ಕನ್ನಡದ ಯಾವ ಸ್ಟಾರ್ ಜೊತೆಗೆ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲವಿದೆ. ಅಲ್ಲದೆ, ಪುನೀತ್ ರಾಜ್ ಕುಮಾರ್ ಜೊತೆಗೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.

ಈ ಹಿಂದೆಯಿಂದ ಪುನೀತ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್ ಸಿನಿಮಾ ಬಗ್ಗೆ ಸುದ್ದಿಯಾಗಿತ್ತೇ ಹೊರತು ಆ ಬಗ್ಗೆ ಪುನೀತ್ ಆಗಲಿ ಅಥವಾ ಪ್ರಶಾಂತ್ ಆಗಲಿ ಎಲ್ಲೂ ಮಾತನಾಡಿರಲಿಲ್ಲ. ಆದರೆ, ಈಗ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡ್ತೀರಾ? ಎಂಬ ಪ್ರಶ್ನೆಗೆ ಸ್ವತಃ ಪುನೀತ್ ಉತ್ತರ ನೀಡಿದ್ದಾರೆ. ಮುಂದೆ ಓದಿ...

ಪುನೀತ್ ಗೆ ಬಂದ ಪ್ರಶ್ನೆ

ಪುನೀತ್ ಗೆ ಬಂದ ಪ್ರಶ್ನೆ

ಪುನೀತ್ ರಾಜ್ ಕುಮಾರ್ ಇತ್ತೀಚಿಗಷ್ಟೆ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡುವ ವೇಳೆ 'ಪ್ರಶಾಂತ್ ನೀಲ್ ಅವರ ಜೊತೆಗೆ ಯಾವ ಪ್ರಾಜೆಕ್ಟ್ ಮಾಡುತ್ತೀರಾ? ಎಂಬ ಪ್ರಶ್ನೆ ಕೂಡ ಅವರಿಗೆ ಎದುರಾಯಿತು.

ನಕ್ಕು ಬಿಟ್ಟರು ಪುನೀತ್

ನಕ್ಕು ಬಿಟ್ಟರು ಪುನೀತ್

'ಪ್ರಶಾಂತ್ ನೀಲ್ ಅವರ ಜೊತೆಗೆ ಯಾವ ಪ್ರಾಜೆಕ್ಟ್ ಮಾಡುತ್ತೀರಾ?' ಎಂಬ ಪ್ರಶ್ನೆಗೆ ಉತ್ತರ ನೀಡಿದ ಪುನೀತ್, ''ಯಾರ್ ಹೇಳಿದ್ದು.. ?'' ಎಂದು ನಕ್ಕು ಬಿಟ್ಟರು. ಬಳಿಕ ''ಇಲ್ಲ.. ಆ ರೀತಿ ಇನ್ನೂ ಏನು ಆಗಿಲ್ಲ. ಆದಾಗ ಖಂಡಿತ ಹೇಳುತ್ತೇನೆ'' ಎಂದು ನಗುತ್ತಾ ಉತ್ತರ ನೀಡಿದರು.

'ಆಹ್ವಾನ' ಸಿನಿಮಾದ ಸುದ್ದಿ

'ಆಹ್ವಾನ' ಸಿನಿಮಾದ ಸುದ್ದಿ

ಈ ಹಿಂದೆಯೇ ಅಂದರೆ 'ಕೆ ಜಿ ಎಫ್' ಸಿನಿಮಾ ಶುರುವಾಗುವುದಕ್ಕೆ ಮುಂಚೆಯೇ ಪುನೀತ್ ರಾಜ್ ಕುಮಾರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾದ ಸುದ್ದಿ ಹರಿದಾಡಿತ್ತು. 'ಆಹ್ವಾನ' ಎಂಬ ಟೈಟಲ್ ನಲ್ಲಿ ಅಪ್ಪುಗೆ ಪ್ರಶಾಂತ್ ಸಿನಿಮಾ ಮಾಡುತ್ತಾರೆ ಎಂಬ ಗಾಸಿಪ್ ಇತ್ತು. ಆದರೆ, ಆ ಸುದ್ದಿ ಹಾಗೆಯೇ ತಣ್ಣಗಾಯ್ತು.

ಪ್ರಶಾಂತ್ ಜೊತೆ ಅಪ್ಪು ಸಿನಿಮಾ ಮಾಡ್ತಾರಾ, ಇಲ್ವಾ?

ಪ್ರಶಾಂತ್ ಜೊತೆ ಅಪ್ಪು ಸಿನಿಮಾ ಮಾಡ್ತಾರಾ, ಇಲ್ವಾ?

ಈಗಾಗಲೇ, ಪ್ರಶಾಂತ್ ನೀಲ್ ಅವರ ಕೆಲಸವನ್ನು ಪುನೀತ್ ರಾಜ್ ಕುಮಾರ್ ಹೊಗಳಿದ್ದಾರೆ. ಅವರು ಕೂಡ ಪ್ರಶಾಂತ್ ಜೊತೆಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಆದರೆ, ಅವರಿಬ್ಬರ ಸಿನಿಮಾ ಬರುತ್ತದೆಯೇ ಎನ್ನುವುದು ಮಾತ್ರ ಸದ್ಯದ ಕುತೂಹಲ.

More from Filmibeat

English summary
Will 'KGF' director Prashanth Neel directing a movie to Actor Punneth Rajkumar ?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X