twitter
    For Quick Alerts
    ALLOW NOTIFICATIONS  
    For Daily Alerts

    'ಶ್ರೀಮಂತುಡು' ಚಿತ್ರ ವೀಕ್ಷಿಸುತ್ತಾರಾ ನರೇಂದ್ರ ಮೋದಿ?

    By ಸೋನು
    |

    ಟಾಲಿವುಡ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ಚಿತ್ರ 'ಶ್ರೀಮಂತುಡು' ಆಗಸ್ಟ್ 7 ರಂದು ತೆರೆಗೆ ಬರಲಿದೆ. ಇದೀಗ 'ಶ್ರೀಮಂತುಡು' ಚಿತ್ರದ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, ಚಿತ್ರದ ಸ್ಪೆಷಲ್ ಪ್ರೀಮಿಯರ್ ಶೋ ಒಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ತೆಲುಗು ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಚಿತ್ರ ತಂಡ ನಿರ್ಧರಿಸಿದೆ.

    ಪಕ್ಕಾ ಫ್ಯಾಮಿಲಿ ಕಥೆಯೊಂದಿಗೆ, ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಉತ್ತಮ ಸಾಮಾಜಿಕ ಸಂದೇಶ ಸಾರುವ 'ಶ್ರೀಮಂತುಡು' ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. [ಪ್ರಿನ್ಸ್ ಮಹೇಶ್ ಬಾಬು ಕ್ಷಮೆ ಕೇಳಿದ್ದು ಯಾಕೆ?]

    Will Prime Minister Narendra Modi watch telugu movie Srimanthudu?

    ಸದ್ಯಕ್ಕೆ ಆದರ್ಶ ಗ್ರಾಮ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿಯ ಬಗ್ಗೆ ಕನಸು ಕಾಣುವ ಪ್ರಧಾನಿ ಮೋದಿಗೆ 'ಶ್ರೀಮಂತುಡು' ಇಷ್ಟವಾಗಬಹುದು ಎನ್ನುವ ಭರವಸೆಯಿಂದ ಮೋದಿ ಆಹ್ವಾನಕ್ಕೆ ಚಿತ್ರತಂಡ ನಿರ್ಧರಿಸಿದೆ. ಅದಕ್ಕೆ ಮೋದಿ ಅವರ ಪ್ರತಿಕ್ರಿಯೆ ಏನಾಗಿರುತ್ತೋ ಕಾದು ನೋಡ್ಬೇಕು. [ಅಪ್ಪನಿಗೆ ಪ್ರಿನ್ಸ್ ಮಹೇಶ್ ನೀಡಿದ 'ಶ್ರೀಮಂತ' ಉಡುಗೊರೆ]

    ಕೊರಟಾಲ ಶಿವ ಆಕ್ಷನ್-ಕಟ್ ಹೇಳಿರುವ 'ಶ್ರೀಮಂತುಡು' ಚಿತ್ರದಲ್ಲಿ ಮಹೇಶ್ ಬಾಬು, ಶೃತಿ ಹಾಸನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಮ್ಯೂಸಿಕ್ ಕಂಪೊಸ್ ಮಾಡಿದ್ದು, ಜಗಪತಿ ಬಾಬು, ರಾಜೇಂದ್ರ ಪ್ರಸಾದ್, ಬ್ರಹ್ಮಾನಂದಮ್, ಸುಕನ್ಯಾ ಮುಂತಾದ ತಾರಾ ಬಳಗ ಚಿತ್ರದಲ್ಲಿದೆ. [ಮಹೇಶ್ ಬಾಬು ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

    English summary
    Telugu Movie 'Srimanthudu' team has decided to invite Prime Minister Narendra Modi for 'Srimanthudu' premiere. Telugu actor Mahesh Babu, Actress Shruthi Haasan have played lead in 'Srimanthudu'. The movie is directed by Koratala Siva.
    Tuesday, July 21, 2015, 18:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X