ಪ್ರಾರಂಭದಲ್ಲೇ ನಿಂತ ಪ್ರಶಾಂತ್ ನೀಲ್-ಪುನೀತ್ ಸಿನಿಮಾ: ಕಾರಣ ಬಹಿರಂಗ ಪಡಿಸಿದ ಅಪ್ಪು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಮತ್ತು 'ಜೇಮ್ಸ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಕೊಳ್ಳುತ್ತಿರುವ ಅಪ್ಪು ಹೊಸ ಸಿನಿಮಾ ಅನೌನ್ಸ್ ಮಾಡಬಹುದ ಎನ್ನುವ ಕುತೂಹಲ ಅಭಿಮಾನಿಗಲ್ಲಿದೆ. ಈ ನಡುವೆ ಈಗ ಪುನೀತ್ ಕಡೆಯಿಂದ ಒಂದು ಅಚ್ಚರಿಯ ಸುದ್ದಿ ಹೊರಬಿದ್ದಿದೆ.

Recommended Video

ಪುನೀತ್ ರಾಜ್ ಕುಮಾರ್ ಗೆ ದರ್ಶನ್ ಮಾಡಿದ ವಿಷ್ ಹೇಗಿತ್ತು ನೀವೇ ನೋಡಿ | Darshan Wish for Puneeth

ಅಪ್ಪು 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪವರ್ ಸ್ಟಾರ್ ಕೆಜಿಎಫ್ ನಿರ್ದೇಶಕರ ಜೊತೆ ಈಗಾಗಲೆ ಸಿನಿಮಾ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ನಿಂತು ಹೋಗಿದೆ ಎಂದು ಹೇಳಿದ್ದಾರೆ. ಮುಂದೆ ಓದಿ...

ಕುತೂಹಲ ಮೂಡಿಸಿದೆ ಪ್ರಶಾಂತ್ ನೀಲ್ ಮುಂದಿನ

ಕುತೂಹಲ ಮೂಡಿಸಿದೆ ಪ್ರಶಾಂತ್ ನೀಲ್ ಮುಂದಿನ

ಪ್ರಶಾಂತ್ ನೀಲ್ ಸದ್ಯ ಭಾರತದ ಬಹುಬೇಡಿಕೆಯ ನಿರ್ದೇಶಕ. ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಲು ಅನೇಕ ಸ್ಟಾರ್ ನಾಯಕರು ಕಾಯುತ್ತಿದ್ದಾರೆ. ಸದ್ಯ ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಪ್ರಶಾಂತ್ ನೀಲ್ ತೆಲುಗು ಸ್ಟಾರ್ಸ್ ಗೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು. ಆದರೀಗ ಪುನೀತ್ ಗೆ ಆಕ್ಷನ್ ಕಟ್ ಹೇಳುತ್ತಾರಾ ಎನ್ನುವ ಮಾತು ಕೇಳಿ ಬರುತ್ತಿದೆ.

ಪುನೀತ್ ಗೆ ಪ್ರಶಾಂತ್ ನೀಲ್ ನಿರ್ದೇಶನ

ಪುನೀತ್ ಗೆ ಪ್ರಶಾಂತ್ ನೀಲ್ ನಿರ್ದೇಶನ

ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಪುನೀತ್ ಜೊತೆ ಮಾಡುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಯಾಕಂದರೆ ಪುನೀತ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ ನಲ್ಲಿ ಈಗಾಗಲೆ ಒಂದು ಸಿನಿಮಾ ಬರಬೇಕಿತ್ತು. ಈ ಬಗ್ಗೆ ತುಂಬಾ ಹಿಂದೆಯೆ ಮಾತುಕತೆ ಕೂಡ ನಡೆದಿತ್ತು ಎಂದು ಸ್ವತಃ ಪುನೀತ್ ಅವರೇ ಹೇಳಿದ್ದಾರೆ. ಹಾಗಾಗಿ ಕೆಜಿಎಫ್-2 ನಂತರ ಪ್ರಾಶಾಂತ್ ನೀಲ್ ಮತ್ತು ಪುನೀತ್ ಸಿನಿಮಾ ಪ್ರಾರಂಭವಾಗಬಹುದಾ? ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

'ಆಹ್ವಾನ' ಟೈಟಲ್ ಫಿಕ್ಸ್ ಆಗಿತ್ತು

'ಆಹ್ವಾನ' ಟೈಟಲ್ ಫಿಕ್ಸ್ ಆಗಿತ್ತು

ಪುನೀತ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ ನಲ್ಲಿ ಸಿನಿಮಾ ಮಾತುಕತೆಯಾಗಿದ್ದಷ್ಟೆಯಲ್ಲದೆ, ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿತ್ತು. 'ಆಹ್ವಾನ' ಎನ್ನುವ ಶೀರ್ಷಿಕೆ ಇಟ್ಟಿದ್ದರು. ಆದರೆ ಆಹ್ವಾನ ಸಿನಿಮಾ ಪ್ರಾರಂಭದಲ್ಲೇ ನಿಂತು ಹೋಗಿದೆ. ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ. ಈ ಬಗ್ಗೆ ಪುನೀತ್ ಈಗ ಬಹಿರಂಗ ಪಡಿಸಿದ್ದಾರೆ.

ಪುನೀತ್ ಹೇಳಿದ್ದೇನು?

ಪುನೀತ್ ಹೇಳಿದ್ದೇನು?

ಆಂಗ್ಲ ಪತ್ರಿಕೆಯ ಸಂದರ್ಶನದಲ್ಲಿ ಅಪ್ಪು "ಯಾವ ನಟ ಈಗ ಅವರ ಜೊತೆ ಕೆಲಸ ಮಾಡಲು ಬಯಸುವುದಿಲ್ಲ? ತುಂಬಾ ಸಮಯದ ಹಿಂದೆಯೆ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾತುಕತೆಯಾಗಿತ್ತು. ಚಿತ್ರಕ್ಕೆ ಆಹ್ವಾನ ಎನ್ನುವ ಟೈಟಲ್ ಸಹ ಫಿಕ್ಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಪ್ರಾರಂಭವಾಗಲಿಲ್ಲ. ಮುಂದಿನ ದಿನಗಳಲ್ಲಿ ಯಾವಾಗ ಕಾಲಕೂಡಿಬರುತ್ತೊ ಆಗ ಸಿನಿಮಾ ಮಾಡುತ್ತೇವೆ" ಎಂದು ಅಪ್ಪು ಹೇಳಿದ್ದಾರೆ. ಹಾಗಾಗಿ ಕೆಜಿಎಫ್-2 ನಂತರ ಪ್ರಶಾಂತ್ ನೀಲ್, ಪುನೀತ್ ಗೆ ನಿರ್ದೇಶನ ಮಾಡುತ್ತಾರಾ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

More from Filmibeat

English summary
Kannada Actor Puneeth Rajkumar revealed working with KGF director Prashanth Neel. Puneeth also revealed why Aahvana movie didn't take off.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X