For Quick Alerts
  ALLOW NOTIFICATIONS  
  For Daily Alerts

  'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟಿಸಿರುವ ದಬಾಂಗ್ 3 ಸಿನಿಮಾ ಇದೇ ಡಿಸೆಂಬರ್ 20 ರಂದು ಜಗತ್ತಿನಾದ್ಯಂತ ತೆರೆಕಾಣುತ್ತಿದೆ. ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ದಬಾಂಗ್ ರಿಲೀಸ್ ಆಗುತ್ತಿದೆ.

  ಸಲ್ಮಾನ್ ಖಾನ್ ಎದುರಲ್ಲಿ ಕನ್ನಡದ ಕಿಚ್ಚ ಸುದೀಪ್ ಖಳನಾಯಕನಾಗಿ ನಟಿಸಿರುವುದು ಈ ಚಿತ್ರದ ಅತಿ ದೊಡ್ಡ ವಿಶೇಷ. ಬಲಿ ಸಿಂಗ್ ಪಾತ್ರದಲ್ಲಿ ಸುದೀಪ್ ನಟಿಸಿದ್ದು, ಈಗಾಗಲೇ ಟ್ರೈಲರ್ ನಲ್ಲಿ ಸುದೀಪ್ ಅಬ್ಬರಿಸಿದ್ದಾರೆ.

  'ದಬಾಂಗ್' ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಸುದೀಪ್, ಎಷ್ಟು?'ದಬಾಂಗ್' ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಸುದೀಪ್, ಎಷ್ಟು?

  ಸ್ವತಃ ಸಲ್ಮಾನ್ ಖಾನ್ ಅವರೇ ಸುದೀಪ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ''ಸುದೀಪ್ ವಿಲನ್ ಅಲ್ಲ, ಹೀರೋ'' ಎಂದು ಶ್ಲಾಘಿಸಿದ್ದಾರೆ. ಇಷ್ಟೆಲ್ಲಾ ಹೈಪ್ ಕ್ರಿಯೆಟ್ ಮಾಡಿರುವ ದಬಾಂಗ್ ಸಿನಿಮಾ ಸಕ್ಸಸ್ ಆದರೆ, ಸುದೀಪ್ ಪಾಲಿಗೆ ಅದು ಎಷ್ಟು ಮಹತ್ವವಾಗಲಿದೆ ಎಂಬುದು ಈಗ ಕುತೂಹಲ. ದಬಾಂಗ್ ಹಿಟ್ ಆದರೆ ಸುದೀಪ್ ವಿಷ್ಯದಲ್ಲಿ ಏನೆಲ್ಲಾ ಆಗಬಹುದು ಎಂಬುದರ ವಿವರ ಇಲ್ಲಿದೆ. ಮುಂದೆ ಓದಿ....

  ಕಿಚ್ಚನ ಖ್ಯಾತಿ ಹೆಚ್ಚಬಹುದು

  ಕಿಚ್ಚನ ಖ್ಯಾತಿ ಹೆಚ್ಚಬಹುದು

  ಸುದೀಪ್ ಈಗಾಗಲೇ ಎಲ್ಲ ಇಂಡಸ್ಟ್ರಿಗೂ ಚಿರಪರಿಚಿತ. ತೆಲುಗು, ತಮಿಳು, ಆ ಕಡೆ ಹಿಂದಿಯಲ್ಲು ಸಿನಿಮಾಗಳನ್ನು ಮಾಡಿರುವ ಸುದೀಪ್ ಯಾರೆಂದು ಅಲ್ಲಿನ ಪ್ರೇಕ್ಷಕರಿಗೆ ಗೊತ್ತಿದೆ. ದಬಾಂಗ್ ಸಿನಿಮಾದ ಹವಾ ನೋಡಿದ್ರೆ ಈ ಚಿತ್ರದ ಬಳಿಕ ಸುದೀಪ್ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಅಥವಾ ನ್ಯಾಷನಲ್ ಸ್ಟಾರ್ ಕಾನ್ಸೆಪ್ಟ್ ನಲ್ಲಿ ಸುದೀಪ್ ಸ್ಟಾರ್ ಗಿರಿ ಎತ್ತರಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

  ಸುದೀಪ್ ಮತ್ತು ಸಲ್ಮಾನ್ ಖಾನ್ 'ಈ ಒಂದು' ದೃಶ್ಯಕ್ಕಾಗಿ 25 ದಿನಗಳು ಹೊಡೆದಾಡಿದ್ದಾರೆಸುದೀಪ್ ಮತ್ತು ಸಲ್ಮಾನ್ ಖಾನ್ 'ಈ ಒಂದು' ದೃಶ್ಯಕ್ಕಾಗಿ 25 ದಿನಗಳು ಹೊಡೆದಾಡಿದ್ದಾರೆ

  ಬಾಲಿವುಡ್ನಲ್ಲಿ ಆಫರ್ ಹೆಚ್ಚಾಗುತ್ತೆ

  ಬಾಲಿವುಡ್ನಲ್ಲಿ ಆಫರ್ ಹೆಚ್ಚಾಗುತ್ತೆ

  ಫೋಂಕ್, ರಣ್, ಫೋಂಕ್ 2, ಚಿತ್ರಗಳ ಬಳಿಕ ಈಗ ದಬಾಂಗ್ ಸಿನಿಮಾ ಮಾಡಿದ್ದಾರೆ. ಸಲ್ಲು ಭಾಯ್ ಜೊತೆಗಿನ ಕಾಂಬಿನೇಷನ್ ವರ್ಕೌಟ್ ಆದ್ಮೇಲೆ ಬಾಲಿವುಡ್ ಮಂದಿ ಸುದೀಪ್ ಬೆನ್ನ ಹಿಂದೆ ಬಿದ್ದರೂ ಅಚ್ಚರಿ ಇಲ್ಲ. ಹಿಂದಿಯಲ್ಲಿ ಸೋಲು ಸಿನಿಮಾಗಳ ಬೇಡಿಕೆ ಹೆಚ್ಚಬಹುದು. ಅಥವಾ ಮತ್ತಷ್ಟು ಸಿನಿಮಾಗಳು ಕಿಚ್ಚನಿಗಾಗಿ ಬರಬಹುದು.

  ವಿಲನ್ ಗೆ ಡಿಮ್ಯಾಂಡ್ ಹೆಚ್ಚಬಹುದು

  ವಿಲನ್ ಗೆ ಡಿಮ್ಯಾಂಡ್ ಹೆಚ್ಚಬಹುದು

  ದಬಾಂಗ್ ಚಿತ್ರದಲ್ಲಿ ಸುದೀಪ್ ವಿಲನ್ ಪಾತ್ರ ಮಾಡಿರುವುದರಿಂದ, ಮುಂದಿನ ಸ್ಟಾರ್ ನಟರ ಚಿತ್ರಗಳಲ್ಲಿ ವಿಲನ್ ಆಗಿ ಎಂದು ಕೇಳಬಹುದು. ಸುದೀಪ್ ವಿಲನ್ ಮಾಡಿದ್ರೆ ಚಿತ್ರಕ್ಕೆ ಧಮ್ ಹೆಚ್ಚುತ್ತೆ ಎಂಬ ಉದ್ದೇಶದಿಂದ ಖಳನಾಯಕ್ ಪಾತ್ರಕ್ಕೆ ಬೇಡಿಕೆ ಹೆಚ್ಚಾಗಬಹುದು.

  ಸುದೀಪ್ ತಮ್ಮ ಹೆಸರಿನ ಮುಂದೆ 'ಸ್ಟಾರ್' ಬಿರುದು ಸೇರಿಸಿಲ್ಲ ಯಾಕೆ ಗೊತ್ತಾಸುದೀಪ್ ತಮ್ಮ ಹೆಸರಿನ ಮುಂದೆ 'ಸ್ಟಾರ್' ಬಿರುದು ಸೇರಿಸಿಲ್ಲ ಯಾಕೆ ಗೊತ್ತಾ

  ಕನ್ನಡದಲ್ಲಿ ನೆಗಿಟೀವ್ ಪಾತ್ರ ಬರಬಹುದು

  ಕನ್ನಡದಲ್ಲಿ ನೆಗಿಟೀವ್ ಪಾತ್ರ ಬರಬಹುದು

  ಕನ್ನಡದ ಟಾಪ್ ನಟ ಆಗಿರುವ ಸುದೀಪ್ ಅವರು, ಕನ್ನಡದಲ್ಲೂ ಅಂತಹ ಪಾತ್ರಗಳನ್ನು ಪ್ರಯತ್ನಿಸಬಹುದು. ಬೇರೆ ನಟರ ಚಿತ್ರಗಳಲ್ಲಿ ವಿಲನ್ ಅಥವಾ ತಮ್ಮದೇ ಚಿತ್ರಗಳಲ್ಲಿ ನೆಗಿಟೀವ್ ಶೇಡ್ ಪಾತ್ರದ ಮೊರೆ ಹೋಗಬಹುದು. ನಿರ್ಮಾಪಕ, ನಿರ್ದೇಶಕರು ಸುದೀಪ್ ಗಾಗಿ ಅಂತಹ ಪಾತ್ರ ನಿರ್ಮಿಸಲೂಬಹುದು. ಇದೆಲ್ಲ ಆಗುತ್ತೋ ಇಲ್ವೋ.....ದಬಾಂಗ್ ಚಿತ್ರದಲ್ಲಿ ಸುದೀಪ್ ಅವರ ಪಾತ್ರದ ಬಗ್ಗೆ ಕೇಳುತ್ತಿದ್ದರೆ, ಇಷ್ಟೆಲ್ಲಾ ಊಹೆಗಳು ಅಭಿಮಾನಿಗಳನ್ನು ಕಾಡುತ್ತಿದೆ.

  English summary
  Salman Khan and Kiccha Sudeep starrer Dabangg 3 movie set to release on december 20th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X