ಚಿತ್ರರಂಗ ತೊರೆದ ಸಂಗೀತ ಭಟ್ 'ಆದ್ಯ' ಚಿತ್ರವನ್ನು ಮುಗಿಸಿಕೊಡ್ತಾರಾ.?
ಇಡೀ ದೇಶದಲ್ಲಿ ಭಾರಿ ಸೌಂಡ್ ಮಾಡಿದ #ಮೀಟೂ ಅಭಿಯಾನ ಕನ್ನಡ ಚಿತ್ರರಂಗದಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ನಟಿ ಸಂಗೀತ ಭಟ್, ಶ್ರುತಿ ಹರಿಹರನ್ ಸೇರಿದಂತೆ ಕೆಲವರು ಕನ್ನಡ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಕೆಲವರಿಂದ ಲೈಂಗಿಕ ಕಿರುಕುಳ ಅನುಭವಿಸಿದ ಸಂಗೀತ ಭಟ್ ಕನ್ನಡ ಚಿತ್ರರಂಗದಿಂದ ದೂರ ಸರಿದಿರುವುದಾಗಿ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದರು. ಇದೀಗ 'ಆದ್ಯ' ಚಿತ್ರಕ್ಕೆ ಸಂಗೀತ ಭಟ್ ಮರಳಿ ಬಣ್ಣ ಹಚ್ಚುತ್ತಾರಾ ಎಂಬುದೇ ಕುತೂಹಲ.
'ಆದ್ಯ' ಚಿತ್ರಕ್ಕೆ ವರ್ಷದ ಹಿಂದೆಯೇ ಸಂಗೀತ ಭಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. 'ಆದ್ಯ' ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಕೂಡ ನಡೆದಿತ್ತು. ಬಳಿಕ ಕಾರಣಾಂತರಗಳಿಂದ ಚಿತ್ರ ನಿಂತು ಹೋಗಿತ್ತು.

ಲಾಂಗ್ ಗ್ಯಾಪ್ ಬಳಿಕ 'ಆದ್ಯ' ಚಿತ್ರಕ್ಕೆ ಮರುಜೀವ ನೀಡಲು ನಿರ್ದೇಶಕ ಕೆ.ಎಂ.ಚೈತನ್ಯ ಮನಸ್ಸು ಮಾಡಿದ್ದಾರೆ. ನಾಯಕ ನಟ ಚಿರಂಜೀವಿ ಸರ್ಜಾ ಕೂಡ ಮಾರ್ಚ್ ನಲ್ಲಿ 'ಆದ್ಯ' ಚಿತ್ರಕ್ಕಾಗಿ ಕಾಲ್ ಶೀಟ್ ನೀಡಿದ್ದಾರೆ. ಇನ್ನೂ ನಾಯಕಿ ಪಾತ್ರಧಾರಿ ಶ್ರುತಿ ಹರಿಹರನ್ ಕೂಡ ಡಬ್ಬಿಂಗ್ ಗೆ ಬರುವುದಾಗಿ ತಿಳಿಸಿದ್ದಾರೆ.
'ಆದ್ಯ' ಚಿತ್ರದ ಇನ್ನೋರ್ವ ನಾಯಕಿ ಪಾತ್ರಧಾರಿ ಸಂಗೀತ ಭಟ್ ನಿಲುವೇನು ಎಂಬುದು ಇದೀಗ ಎಲ್ಲರ ಪ್ರಶ್ನೆಯಾಗಿದೆ. ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿರುವುದಾಗಿ ಘೋಷಿಸಿದ್ದ ಸಂಗೀತ ಭಟ್, 'ಆದ್ಯ' ಚಿತ್ರಕ್ಕಾಗಿ ಮತ್ತೆ ಬಣ್ಣ ಹಚ್ಚುತ್ತಾರಾ.? ಚಿತ್ರವನ್ನ ಕಂಪ್ಲೀಟ್ ಮಾಡಿ ಕೊಡ್ತಾರಾ..? ಈ ಪ್ರಶ್ನೆಗೆ ಸ್ವತಃ ಸಂಗೀತ ಭಟ್ ಉತ್ತರ ಕೊಡಬೇಕು.


Click it and Unblock the Notifications











