ಮತ್ತೊಂದು ರಿಮೇಕ್ ಸಿನಿಮಾದಲ್ಲಿ ಶಿವರಾಜ್ ಕುಮಾರ್?

Recommended Video

Shivaraj Kumar wants to remake this Tamil movie in Kannada | Filmibeat Kannada

ಶಿವರಾಜ್ ಕುಮಾರ್ ರಿಮೇಕ್ ಸಿನಿಮಾ ಮಾಡುವುದು ಬಹಳ ಕಮ್ಮಿ. ಸುಮಾರು 16 ವರ್ಷಗಳಿಂದ ರಿಮೇಕ್ ಸಿನಿಮಾ ಮುಟ್ಟದ ಶಿವಣ್ಣ 'ಕವಚ' ಚಿತ್ರವನ್ನು ನಟಿಸಿದ್ದರು. ಈ ಸಿನಿಮಾ ಮಲೆಯಾಳಂನ 'ಓಪ್ಪಂ' ಸಿನಿಮಾದ ರಿಮೇಕ್ ಆಗಿತ್ತು.

ಇದೀಗ ಶಿವರಾಜ್ ಕುಮಾರ್ ಮತ್ತೊಂದು ರಿಮೇಕ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಇದೆ. ತಮಿಳಿನ ಸೂಪರ್ ಹಿಟ್ ಸಿನಿಮಾ 'ಕೈದಿ'ಯಲ್ಲಿ ಶಿವಣ್ಣ ನಟಿಸುತ್ತಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿದೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಈ ಸಿನಿಮಾಗೆ ದೊಡ್ಡ ಮಟ್ಟದ ಪ್ರಶಂಸೆ ಸಿಕ್ಕಿದೆ.

'ಕೈದಿ' ಸಿನಿಮಾ ಒಂದು ಪ್ರಯೋಗಾತ್ಮಕ ಮನರಂಜನಾ ಸಿನಿಮಾ. ಈ ಸಿನಿಮಾ ಮಾಡಿದ ನಿರ್ದೇಶಕರ ಧೈರ್ಯ ಮೆಚ್ಚುವಂತದ್ದು. ಇಡೀ ಸಿನಿಮಾ ಒಂದು ರಾತ್ರಿಯಲ್ಲಿ ನಡೆಯುತ್ತದೆ. ಇಲ್ಲಿ ನಾಯಕಿ ಇಲ್ಲ. ಒಬ್ಬ ಕೈದಿ ಜೈಲಿನಿಂದ ಹೊರ ಬಂದು, ತನ್ನ ಮಗಳನ್ನು ನೋಡಲು ಹೋಗುತ್ತಾನೆ. ಆ ವೇಳೆ ಆತನಿಗೆ ಎದುರಾಗುವ ಸನ್ನಿವೇಶಗಳನ್ನು ಸಿನಿಮಾದಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ.

Will Shiva Rajkumar Act In Kaithi Movie Remake?

ಸಿನಿಮಾದಲ್ಲಿ ಕೈದಿಯಾಗಿ ಕಾರ್ತಿ ತುಂಬ ಚೆನ್ನಾಗಿ ನಟಿಸಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ನೂರು ಕೋಟಿ ಹಣ ಮಾಡಿದೆ.

ಈ ಸಿನಿಮಾವನ್ನು ನಟ ಶಿವರಾಜ್ ಕುಮಾರ್ ನೋಡಿದ್ದು, ತುಂಬ ಉತ್ಸುಕರಾಗಿದ್ದಾರಂತೆ. ಇಂತಹ ಸಿನಿಮಾದಲ್ಲಿ ತಾನು ಅಭಿನಯಿಸಬೇಕು ಎನ್ನುವುದು ಅವರ ಆಸೆಯಾಗಿದೆ. ಆ ಕಥೆಯೂ ಅವರಿಗೆ ಹೋಲಿಕೆ ಆಗುತ್ತದೆ. ಆಗಾಗ ಪ್ರಯೋಗಗಳಿಗೆ ಕೈ ಹಾಕುವ ಶಿವಣ್ಣ ಈ ಸಿನಿಮಾ ಮಾಡುವ ಸಾಧ್ಯತೆ ಇದೆ.

Will Shiva Rajkumar Act In Kaithi Movie Remake?

ಒಳ್ಳೆಯ ವಿಷಯ, ಒಳ್ಳೆಯ ಸಿನಿಮಾ ಎಲ್ಲೇ ಬಂದರು ಮೆಚ್ಚಿಕೊಳ್ಳಬೇಕು. ಇಂತಹ ಒಳ್ಳೆಯ ಸಿನಿಮಾ ಕನ್ನಡಕ್ಕೆ ಬಂದರೆ, ಅದರಲ್ಲಿ ಶಿವರಾಜ್ ಕುಮಾರ್ ನಟಿಸಿದರೆ, ಅಭಿಮಾನಿಗಳು ಇಷ್ಟಪಟ್ಟು ನೋಡುತ್ತಾರೆ.

More from Filmibeat

English summary
Will Shiva Rajkumar act in 'Kaithi' movie kannada remake ?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X