'ವಿಕ್ರಾಂತ್ ರೋಣ' ಬಳಿಕ ಸುದೀಪ್ ಮುಂದಿನ ಸಿನಿಮಾ ಯಾವುದು? ಯಾವಾಗ ಆರಂಭವಾಗುತ್ತೆ? ಇಲ್ಲಿದೆ ಮಾಹಿತಿ

By ಫಿಲ್ಮ್ ಡೆಸ್ಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಚಿತ್ರದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಇನ್ನೇನು ಕೋಟಿಗೊಬ್ಬ-3 ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದ್ದು, ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರುತ್ತಿದೆ.

Recommended Video

ಸುದೀಪ್ ಅಭಿಮಾನಿಗಳಿಗೆ ನಿರಾಸೆ | Sudeep | Filmibeat Kannada

ಈ ಸಿನಿಮಾಗಳ ಜೊತೆಗೆ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲೂ ನಟಿಸಿದ್ದು, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ರಾಂತ್ ರೋಣ ಬಳಿಕ ಸುದೀಪ್ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಹೊಸ ಸಿನಿಮಾಗೆ ಸಹಿ ಮಾಡುವ ಮೊದಲು ಸುದೀಪ್ ಸಂಪೂರ್ಣ ಗಮನ ಬಿಗ್ ಬಾಸ್ ರಿಯಾಲಿಟಿ ಶೋ ಕಡೆ ಇರಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಗ್ ಬಾಸ್ 8ಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಪ್ರೋಮೋ ಕೂಡ ರಿಲೀಸ್ ಆಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಕಿಚ್ಚ ಸುದೀಪ್ ಬಿಗ್ ಬಾಸ್ ಮುಗಿಯುವವರೆಗೂ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುವುದು ಅನುಮಾನ ಎನ್ನಲಾಗುತ್ತಿದೆ. ಬಿಗ್ ಬಾಸ್ ಜೊತೆಗೆ ಸದ್ಯ ತನ್ನ ಕೈಯಲ್ಲಿರುವ ಸಿನಿಮಾಗಳನ್ನು ಪೂರ್ಣ ಮಾಡಲಿದ್ದಾರೆ.

Will Sudeeps next new film only be after Bigg Boss Kannada Season 8 shoot?

ಇನ್ನು ವಿಕ್ರಾಂತ್ ರೋಣ ಬಳಿಕ ಸುದೀಪ್ ಮತ್ತೆ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಲ್ಲದೆ ಹೊಸಬರ ಜೊತೆ ಸಿನಿಮಾ ಮಾಡುತ್ತಾರಾ ಅಥವಾ ತಾವೆ ನಿರ್ದೇಶನಕ್ಕೆ ಇಳಿಯುತ್ತಾರಾ ಎನ್ನುವ ಬಗ್ಗೆಯೂ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಈ ನಡುವೆ ಸುದೀಪ್ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಬಾರಿಗೆ ಮಲಯಾಳಂ ಸಿನಿಮಾ ಮಾಡುತ್ತಿರುವ ಬಗ್ಗೆ ಸುದೀಪ್ ಇತ್ತೀಚಿಗಷ್ಟೆ ಬಹಿರಂಗ ಪಡಿಸಿದ್ದಾರೆ. ಸದ್ಯ 25 ವರ್ಷದ ಪಯಣವನ್ನು ಅದ್ದೂರಿಯಾಗಿ ಆಚರಣೆ ಮಾಡಿರುವ ಕಿಚ್ಚ ಇದೀಗ 26ನೇ ವರ್ಷದ ಪಯಣವನ್ನು ಪ್ರಾರಂಭಿಸಿದ್ದಾರೆ. ಈ ಸಮಯದಲ್ಲಿ ಯಾವ ಸಿನಿಮಾವನ್ನು ಅನೌನ್ಸ್ ಮಾಡಲಿದ್ದಾರೆ, ಯಾರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವುದು ಕಾತರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈ ಬಗ್ಗೆ ಸದ್ಯದಲ್ಲೇ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

More from Filmibeat

English summary
Will Sudeep's next new film only be after Bigg Boss Kannada Season 8 shoot?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X