'ಕಾಟೇರ' ಬರೆದ ಆ ದಾಖಲೆ 'ಮ್ಯಾಕ್ಸ್' ಮುರಿಯೋಕೆ ಸಾಧ್ಯಾನಾ ?

ಚಿತ್ರಮಂದಿರಗಳಲ್ಲಿ 'ಮ್ಯಾಕ್ಸ್' ಕಾರುಬಾರು ಮುಂದುವರೆದಿದೆ. ಕಿಚ್ಚ ಸುದೀಪ್ ನಟನೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ 3ನೇ ವಾರಕ್ಕೆ ಕಾಲಿಡುತ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಡಿಸೆಂಬರ್ 25ಕ್ಕೆ 'ಮ್ಯಾಕ್ಸ್' ಸಿನಿಮಾ ತೆರೆಗೆ ಬಂದಿತ್ತು. ಕಳೆದ ತೆರೆಕಂಡ ಸಿನಿಮಾಗಳಲ್ಲೇ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಎನ್ನುವ ದಾಖಲೆ 'ಮ್ಯಾಕ್ಸ್' ಪಾಲಾಗಿದೆ.

ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಚಿತ್ರಕ್ಕೆ ಭಾರೀ ಪೈಪೋಟಿ ಕೊಟ್ಟು 'ಮ್ಯಾಕ್ಸ್' ಗೆದ್ದಿದ್ದಾನೆ. ವಿಜಯ್ ಕಾರ್ತಿಕೇಯನ್ ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ರೋಚಕವಾಗಿ ಕಟ್ಟಿಕೊಟ್ಟು ಜಾದೂ ಮಾಡಿದ್ದಾರೆ. ಕಿಚ್ಚನ ಮಾಸ್ ಮ್ಯಾಜಿಕ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಈಗಾಲೇ 13 ದಿನಗಳ ಪೂರೈಸಿ 14ನೇ ದಿನಕ್ಕೆ ಸಿನಿಮಾ ಕಾಲಿಟ್ಟಿದೆ.

Will Sudeep s Max break Darshan s Kaatera record in BMS ticket bookings

ರೆಗ್ಯುಲರ್ ಕಮರ್ಷಿಯಲ್ ಅಂಶಗಳು ಬಿಟ್ಟು ಬರೀ ಒಂದು ರಾತ್ರಿಯಲ್ಲಿ ನಡೆಯುವ ಪೊಲೀಸ್ ಡ್ರಾಮಾ ಕಥೆಯನ್ನು 'ಮ್ಯಾಕ್ಸ್' ಚಿತ್ರದಲ್ಲಿ ನೋಡಬಹುದು. ನಾಯಲಿ, ಡುಯೆಟ್ ಯಾವುದು ಚಿತ್ರದಲ್ಲಿಲ್ಲ. ಆಕ್ಷನ್ ಡೋಸ್ ಕೊಂಡ ಜಾಸ್ತಿ ಇದ್ದರೂ ಸಿನಿಮಾ ರಸಿಕರು ಎಂಜಾಯ್ ಮಾಡುತ್ತಿದ್ದಾರೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಈಗಾಗಲೇ ಚಿತ್ರದ ಗ್ರಾಸ್ ಕಲೆಕ್ಷನ್ 40 ಕೋಟಿ ರೂ. ದಾಟಿರುವ ಅಂದಾಜಿದೆ.

ಬುಕ್‌ಮೈ ಶೋನಲ್ಲಿ ಕೂಡ ಟಿಕೆಟ್ ಬುಕ್ಕಿಂಗ್ ಬಗ್ಗೆ ಮಾಹಿತಿ ಸಿಗುತ್ತಿದೆ. 'ಮ್ಯಾಕ್ಸ್' ಸಿನಿಮಾ ನೋಡಬೇಕು ಎಂಬ ಬಯಕೆ ಪ್ರೇಕ್ಷಕರಿಗೆ ಕಮ್ಮಿ ಆಗಿಲ್ಲ ಎನ್ನುವುದು ಅದರಲ್ಲೇ ಗೊತ್ತಾಗುತ್ತಿದೆ. ಇನ್ನು 'ಮ್ಯಾಕ್ಸ್' ರಿಲೀಸ್ ಬಳಿಕ 'ಯುಐ' ಸಿನಿಮಾ ಡಲ್ ಆಗಿತ್ತು. ಕಳೆದ ವಾರವೂ ದೊಡ್ಡ ಸಿನಿಮಾಗಳು ಬರದೇ ಕಿಚ್ಚನ ದರ್ಬಾರ್‌ಗೆ ಹೆಚ್ಚು ಅವಕಾಶ ಸಿಗುವಂತಾಗಿದೆ.

Will Sudeep s Max break Darshan s Kaatera record in BMS ticket bookings

ಬುಕ್‌ಮೈಶೋನಲ್ಲಿ ಟಿಕೆಟ್ ಬುಕ್ಕಿಂಗ್ ಬಗ್ಗೆ ಮಾಹಿತಿ ಸಿಗುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಈ ಬಗ್ಗೆ ಎಲ್ಲರಿಗೂ ಲೆಕ್ಕ ಸಿಗುವಂತಾಗಿದೆ. ಬಿಎಂಎಸ್ ಟ್ರೆಂಟ್ ಶುರುವಾದ ಬಳಿಕ 'ಕಾಟೇರ' ಸಿನಿಮಾ ಅತಿಹೆಚ್ಚು ಟಿಕೆಟ್ ಬುಕ್ ಆಗಿದ್ದ ಕನ್ನಡ ಸಿನಿಮಾ ಎನ್ನುವ ದಾಖಲೆ ಬರೆದಿತ್ತು. ಆದರೆ ದಾಖಲೆ ಮುರಿಯಲು 'ಮ್ಯಾಕ್ಸ್' ಹೊರಟ್ಟಿದ್ದಾನೆ. ಮೇಲ್ನೋಟಕ್ಕೆ 'ಕಾಟೇರ'ನ ದಾಖಲೆ ಹಿಂದಿಕ್ಕುವುದು ಕಷ್ಟ ಎನ್ನುವಂತಾಗಿದೆ. ಫಸ್ಟ್‌ ವೀಕೆಂಡ್‌ನಲ್ಲೇ 'ಮ್ಯಾಕ್ಸ್' ಸೋತಿತ್ತು.

ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಬುಕ್‌ಮೈ ಶೋನಲ್ಲಿ 10 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಲ್ ಆಗಿತ್ತು. 38 ದಿನಕ್ಕೆ ಬುಕ್‌ಮೈಶೋನಲ್ಲಿ ಒಂದು ಮಿಲಿಯನ್ ಟಿಕೆಟ್ ಬುಕ್ ಆಗಿದ್ದಾಗಿ ಚಿತ್ರತಂಡವೇ ಘೋಷಿಸಿತ್ತು. ಇದೀಗ 'ಮ್ಯಾಕ್ಸ್' ಸಿನಿಮಾ 8 ಲಕ್ಷ ಸಮೀಪದಲ್ಲಿದೆ. 'ಕಾಟೇರ'ನ ಈ ದಾಖಲೆ ಮುರಿಯುವುದು ಕಷ್ಟ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆದರೂ 14 ದಿನವೂ ಸಿನಿಮಾ ಭರ್ಜರಿ ಪ್ರದರ್ಶನ ಕಂಡು ಒಳ್ಳೆ ಕಲೆಕ್ಷನ್ ಮಾಡುತ್ತಿದೆ.

ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ 'ಮ್ಯಾಕ್ಸ್' ರೀತಿಯಲ್ಲೇ ವರ್ಷದ ಕೊನೆಗೆ ಬಂದಿತು. ಬಳಿಕ ಹೊಸ ವರ್ಷದ ಆರಂಭದಲ್ಲೂ ಭರ್ಜರಿ ಪ್ರದರ್ಶನ ಕಂಡಿತ್ತು. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ರಾಕ್‌ಲೈನ್ ವೆಂಕಟೇಶ್ ಚಿತ್ರಕ್ಕೆ ಹಣ ಹೂಡಿದ್ದರು. 60-70ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿತ್ತು. ಆದರೆ ಚಿತ್ರದ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿಲ್ಲ.

ಬುಕ್‌ಮೈನಲ್ಲಿ 10 ಲಕ್ಷ ಟಿಕೆಟ್ ಬುಕ್ ಆಗಿದ್ದು ಮಾತ್ರವಲ್ಲ 'ಕಾಟೇರ' ಚಿತ್ರದ 1 ಕೋಟಿ ಟಿಕೆಟ್ ಸೋಲ್ಡ್‌ಔಟ್ ಆಗಿದ್ದಾಗಿ ಚಿತ್ರತಂಡ ಹೇಳಿತ್ತು. ಕೇವಲ 20 ದಿನಗಳಲ್ಲಿ ದರ್ಶನ್ ಸಿನಿಮಾ ಇಂತಾದೊಂದು ದಾಖಲೆ ಬರೆದಿತ್ತು. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳಿಗೂ 'ಮ್ಯಾಕ್ಸ್' ಸಿನಿಮಾ ಡಬ್ ಆಗಿ ಬಿಡುಗಡೆ ಆಗಿತ್ತು. ಆದರೆ 'ಕಾಟೇರ' ಕನ್ನಡದಲ್ಲಿ ಮಾತ್ರ ಪ್ರೇಕ್ಷಕರ ಮುಂದೆ ಬಂದಿತ್ತು.

More from Filmibeat

English summary
Max vs Kaatera; Can Sudeep's Max surpass Darshan's Kaatera record in bookmyshow ticket bookings?
Read more about: filmibeat original max kaatera
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X