'ಕಲಿ'ಯಲ್ಲಿ ಕಿಚ್ಚ-ಶಿವಣ್ಣ ಜೊತೆ ಕಮಲ್ ಹಾಸನ್ ನಟಿಸ್ತಾರಾ?
'ಜೋಗಿ' ನಿರ್ದೇಶಕ ಪ್ರೇಮ್ ಅವರ ನಿರ್ದೇಶನದಲ್ಲಿ ಸ್ಟಾರ್ ನಟರು ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ವಿಷ್ಯಾ ಈಗಾಗಲೇ ಎಲ್ಲೆಡೆ ಜಗಜ್ಜಾಹೀರಾಗಿದೆ. ಆದರೆ ಇದೀಗ ಈ ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ಶಿವಣ್ಣ ಅವರ ಜೊತೆ ತಮಿಳಿನ ಉಳಗನಾಯಗನ್ ಕಮಲ್ ಹಾಸನ್ ಅವರು ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಹೊಸ ವಿಷ್ಯ.
ಹೌದು ಈ ಸ್ಟಾರ್ ನಟರೊಂದಿಗೆ ದಕ್ಷಿಣ ಭಾಗದ ನಟ ಕಮಲ್ ಹಾಸನ್ ಅವರು ಕೂಡ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗುತ್ತಿದೆ. ನಟ ಕಮಲ್ ಹಾಸನ್ ಅವರಿಗೆ 'ಕಲಿ' ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಇದೆಯಂತೆ.[ಚಂದನವನದಲ್ಲಿ ಕ್ರೇಜ್ ಹುಟ್ಟಿಸಲಿರುವ ಶಿವಣ್ಣ-ದೀಪಣ್ಣ 'ಕಲಿ']

ಈಗಾಗಲೇ ನಿರ್ದೇಶಕ ಪ್ರೇಮ್ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೂಲಕ ಕಮಲ್ ಹಾಸನ್ ಅವರನ್ನು ಭೇಟಿಯಾಗುವ ಪ್ರಯತ್ನ ಮಾಡಿದ್ದಾರಂತೆ. ಒ೦ದು ವೇಳೆ ನಟ ಕಮಲ್ ಹಾಸನ್ ಅವರು ಒಪ್ಪಿಕೊಂಡರೆ, ಅವರನ್ನು ಭೇಟಿ ಮಾಡಿ ಪ್ರೇಮ್ ಕಥೆ ಹೇಳಿ, ಅವರ ಡೇಟ್ ಮತ್ತು ಸಂಭಾವನೆ ವಿಚಾರದಲ್ಲೂ ಹೊಂದಿಕೆಯಾದರೆ ಕಮಲ್ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಲಿದ್ದಾರೆ.
ಇನ್ನು ಬರೀ ಕಮಲ್ ಹಾಸನ್ ಮಾತ್ರವಲ್ಲದೇ, ಭಾರತೀಯ ಚಿತ್ರರಂಗದ ಇನ್ನಷ್ಟು ಜನಪ್ರಿಯ ಕಲಾವಿದರು ಕೂಡ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆ ಹೆಚ್ಚಾಗಿದೆ.[ವಾವ್.! ಶಿವಣ್ಣ-ದೀಪಣ್ಣ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಯ್ತಾ?]

ಅಂದಹಾಗೆ ನಿರ್ದೇಶಕ ಪ್ರೇಮ್ ಅವರು 'ಕಲಿ' ಚಿತ್ರವನ್ನು ಬರೀ ಕನ್ನಡದಲ್ಲಿ ಮಾತ್ರವಲ್ಲದೇ, ಇನ್ನಿತರೇ ಭಾಷೆಗಳಲ್ಲೂ ನಿರ್ದೇಶಿಸುವ ಯೋಜನೆ ಹಾಕಿಕೊಂಡಿದ್ದಾರೆ. ಆದ್ದರಿಂದ ಆಯಾ ಭಾಷೆಯ ಜನಪ್ರಿಯ ಕಲಾವಿದರು 'ಕಲಿ'ಯ ಬೇರೆ ಬೇರೆ ಅವತರಣಿಕೆಯಲ್ಲಿ ನಟಿಸುವ ಸಂಭವ ತುಸು ಹೆಚ್ಚೇ ಇದೆ.


Click it and Unblock the Notifications











