'ಕೆಜಿಎಫ್- 2' ಫಸ್ಟ್ ಡೇ ಕಲೆಕ್ಷನ್ 134.50 ಕೋಟಿ; 'ವಿಕ್ರಾಂತ್‌ ರೋಣ'..?

ಪ್ರಪಂಚದಲ್ಲಿ ಮರಕ್ಕಿಂತ ಮರ ದೊಡ್ಡದಾಗಿರುತ್ತೆ. ಹಾಗೆ ಚಿತ್ರರಂಗದಲ್ಲಿ ಒಂದಕ್ಕಿಂತ ಒಂದು ದೊಡ್ಡ ಸಿನಿಮಾ ನಿರ್ಮಾಣವಾಗಿ ಬಾಕ್ಸಾಫೀಸ್‌ನಲ್ಲಿ ಹಳೇ ದಾಖಲೆಗಳನ್ನೆಲ್ಲಾ ಮುರಿದು ಹಾಕುತ್ತೆ. ಇದೀಗ 'ವಿಕ್ರಾಂತ್‌ ರೋಣ' ಸಿನಿಮಾ ಕನ್ನಡದ ಹೆಮ್ಮೆ 'ಕೆಜಿಎಫ್- 2' ದಾಖಲೆಗಳನ್ನು ಅಳಿಸಿ ಹಾಕುತ್ತಾ ಅನ್ನುವ ಲೆಕ್ಕಾಚಾರ ಶುರುವಾಗಿದೆ.

ಕನ್ನಡ ಮಣ್ಣಿನಲ್ಲಿ ನಿರ್ಮಾಣವಾದ 'ಚಾಪ್ಟರ್-2' ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1000 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿ ಹಾಲಿವುಡ್ ಪ್ರೇಕ್ಷಕರು ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತಾಯಿತು. ಪ್ರಶಾಂತ್ ನೀಲ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಪರ್ಫಾರ್ಮೆನ್ಸ್‌ ಎಲ್ಲಾ ಸೇರಿ ಸಿನಿಮಾ ಸಿಲ್ವರ್‌ ಸ್ಕ್ರೀನ್ ಶೇಕ್ ಮಾಡಿತ್ತು. ವಾರಗಳಗಟ್ಟಲೆ ಹೌಸ್‌ಫುಲ್ ಪ್ರದರ್ಶನ ಕಂಡ ಸಿನಿಮಾ ಬಾಕ್ಸಾಫೀಸ್‌ಗೆ ಚಳಿ ಜ್ವರ ತರಿಸಿ, ಹಣದ ಹೊಳೆ ಹರಿಸಿತ್ತು.

ಈಗ ಕನ್ನಡದಲ್ಲಿ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಬಂದರೂ 'ಕೆಜಿಎಫ್‌' ಜೊತೆಗೆ ಹೋಲಿಕೆ ಮಾಡುವ ಪರಿಪಾಠ ಶುರುವಾಗಿಬಿಟ್ಟಿದೆ. 'ವಿಕ್ರಾಂತ್‌ ರೋಣ' ಸಿನಿಮಾ ವಿಚಾರದಲ್ಲೂ ಹೀಗೆ ನಡೀತಿದೆ. ಅಭಿನಯ ಚಕ್ರವರ್ತಿ ಬಾದ್‌ಶಾ ಕಿಚ್ಚ ಸುದೀಪ್ ಸಿನಿಕರಿಯರ್‌ನಲ್ಲೇ ಬಹಳ ಅದ್ಧೂರಿ ಸಿನಿಮಾ ಇದು. ಅನೂಪ್ ಭಂಡಾರಿ ಬಹಳ ರೋಚಕವಾಗಿ ಈ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಭಾರತದಲ್ಲೇ 'ಕೆಜಿಎಫ್- 2' ಫಸ್ಟ್ ಡೇ ಕಲೆಕ್ಷನ್ 134.50 ಕೋಟಿ ರೂ. ದಾಟಿತ್ತು. ಈಗ 'ವಿಕ್ರಾಂತ್‌ ರೋಣ' ಕಲೆಕ್ಷನ್ ಲೆಕ್ಕಾಚಾರ ಶುರುವಾಗಿದೆ.

 ವಿಶ್ವದಾದ್ಯಂತ ತೆರೆಗಪ್ಪಳಿಸಿದ 'ವಿಕ್ರಾಂತ್‌ ರೋಣ'

ವಿಶ್ವದಾದ್ಯಂತ ತೆರೆಗಪ್ಪಳಿಸಿದ 'ವಿಕ್ರಾಂತ್‌ ರೋಣ'

ಹೌದು, ಪ್ರಪಂಚದಾದ್ಯಂತ ಆರು ಭಾಷೆಗಳಲ್ಲಿ 'ವಿಕ್ರಾಂತ್‌ ರೋಣ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ವಿದೇಶಗಳಲ್ಲಿ ರಾತ್ರಿಯಿಂದಲೇ ಪ್ರೀಮಿಯರ್‌ ಶೋಗಳು ಶುರುವಾಗಿದ್ದು, ಈಗಾಗಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸುದೀಪ್‌ ಅಂಡ್ ಟೀಂ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

 ರಾಕಿ ದಾಖಲೆ 'ರೋಣ' ಅಳಿಸಿ ಹಾಕ್ತಾನಾ?

ರಾಕಿ ದಾಖಲೆ 'ರೋಣ' ಅಳಿಸಿ ಹಾಕ್ತಾನಾ?

ಬಿಗ್‌ ಬಜೆಟ್ ಸಿನಿಮಾಗಳ ವಿಚಾರದಲ್ಲಿ ಫಸ್ಟ್ ಡೇ ಕಲೆಕ್ಷನ್ ಬಹಳ ಮುಖ್ಯ. ಬರೀ ಇಂಡಿಯನ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್- 2' ಸಿನಿಮಾ ಮೊದಲ ದಿನ 134.50 ಕೋಟಿ ದೋಚಿತ್ತು. ಇದನ್ನು 'ವಿಕ್ರಾಂತ್‌ ರೋಣ' ಮೆಟ್ಟಿ ನಿಲ್ಲುವುದು ಅಷ್ಟು ಸುಲಭನಾ ? ಅನ್ನುವ ಚರ್ಚೆ ನಡೀತಿದೆ.

 ಒಟ್ಟು ಸ್ಕ್ರೀನ್‌ಗಳು & ಶೋಗಳ ಸಂಖ್ಯೆ ಎಷ್ಟು?

ಒಟ್ಟು ಸ್ಕ್ರೀನ್‌ಗಳು & ಶೋಗಳ ಸಂಖ್ಯೆ ಎಷ್ಟು?

ಮೊದಲ ದಿನ ಅಂದಾಜು 2500 ಸ್ಕ್ರೀನ್‌ಗಳಲ್ಲಿ 9500ಕ್ಕೂ ಅಧಿಕ ಶೋಗಳು ಕನ್ಫರ್ಮ್ ಆಗಿದೆ. ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ನಟನೆಯ ಸಿನಿಮಾ ಇಷ್ಟು ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಆನ್‌ಲೈನ್‌ ಬುಕ್ಕಿಂಗ್ ಕೂಡ ಒಂದು ರೇಂಜಿಗಿದೆ.

 1600 2ಡಿ & 900 3ಡಿ ಸ್ಕ್ರೀನ್‌ಗಳಲ್ಲಿ ಚಿತ್ರ ರಿಲೀಸ್

1600 2ಡಿ & 900 3ಡಿ ಸ್ಕ್ರೀನ್‌ಗಳಲ್ಲಿ ಚಿತ್ರ ರಿಲೀಸ್

'ವಿಕ್ರಾಂತ್‌ ರೋಣ' ಸಿನಿಮಾ 2ಡಿ ಜೊತೆಗೆ 3ಡಿ ಮಾದರಿಯಲ್ಲೂ ಬಿಡುಗಡೆಯಾಗುತ್ತಿದ್ದು, ನಿರೀಕ್ಷೆ ದುಪ್ಪಟ್ಟಾಗಿಸಿದೆ. ಪ್ರಪಂಚದಾದ್ಯಂತ 1600 2ಡಿ & 900 3ಡಿ ಸ್ಕ್ರೀನ್‌ಗಳಲ್ಲಿ ಬಾದ್‌ ಶಾ ಸುದೀಪ್ ಆರ್ಭಟ ಶುರುವಾಗಲಿದೆ. ಅಡ್ವಾನ್ಸ್‌ ಟಿಕೆಟ್‌ ಬುಕಿಂಗ್‌ನಲ್ಲೂ 2ಡಿಗಿಂತ 3ಡಿಗೆ ರೆಸ್ಪಾನ್ಸ್‌ ಜೋರಾಗಿದೆ.

 'ಕೆಜಿಎಫ್- 2'ಗೂ 'ರೋಣ'ನಿಗೂ ಹೋಲಿಕೆ ಬೇಡ!

'ಕೆಜಿಎಫ್- 2'ಗೂ 'ರೋಣ'ನಿಗೂ ಹೋಲಿಕೆ ಬೇಡ!

ಭಾರತದಲ್ಲೇ 'ಕೆಜಿಎಫ್- 2' ಫಸ್ಟ್ ಡೇ ಕಲೆಕ್ಷನ್ 134.50 ಕೋಟಿ ಕೊಳ್ಳೆ ಹೊಡೆದಿತ್ತು. ಆದರೆ 'ವಿಕ್ರಾಂತ್‌ ರೋಣ'ನ ವಿಚಾರದಲ್ಲಿ ಅದು ದೂರದ ಮಾತು. ಸ್ಕ್ರೀನ್‌ಗಳ ಸಂಖ್ಯೆ ಹಾಗೂ ಅಡ್ವಾನ್ಸ್ ಬುಕಿಂಗ್‌ ನೋಡುತ್ತಿದ್ದರೆ ಸಿನಿಮಾ ಫಸ್ಟ್ ಡೇ 40 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

Recommended Video

ಕಿಚ್ಚನ ಕೋಟೆಯಲ್ಲಿ Vikrant Rona Celebration | Filmibeat Kannada
 ಚಾಪ್ಟರ್‌-1 ದಾಖಲೆ ಸರಿಗಟ್ಟುತ್ತಾನಾ 'ರೋಣ'?

ಚಾಪ್ಟರ್‌-1 ದಾಖಲೆ ಸರಿಗಟ್ಟುತ್ತಾನಾ 'ರೋಣ'?

'ಕೆಜಿಎಫ್' ಫಸ್ಟ್ ಚಾಪ್ಟರ್ 2018ರಲ್ಲಿ ರಿಲೀಸ್ ಆಗಿ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು. 'ವಿಕ್ರಾಂತ್‌ ರೋಣ' ಸಿನಿಮಾ ಈ ದಾಖಲೆಯನ್ನು ಅಳಿಸುವ ಸಾಧ್ಯತೆಯಿದೆ. ಒಂದು ವೇಳೆ 'ವಿಕ್ರಾಂತ್‌ ರೋಣ' ಬ್ರ್ಯಾಂಡ್ ಹುಟ್ಟಾಕಿ ಸೆಕೆಂಡ್ ಪಾರ್ಟ್ ಬಂದರೆ 'ಕೆಜಿಎಫ್- 2' ಬಾಕ್ಸಾಫೀಸ್ ದಾಖಲೆ ಬಗ್ಗೆ ಯೋಚಿಸಬಹುದು.

More from Filmibeat

English summary
Will Vikrant Rona Break Kgf chapter- 2 First Day Collection Record. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X