ಜೂನ್ 6 ರಂದು ರಿಲೀಸ್ ಆಗಲಿದೆ ವಿಂಡೋಸೀಟ್ ಟ್ರೈಲರ್

ಸ್ಯಾಂಡಲ್ ವುಡ್ ನಲ್ಲಿ ವಿನೂತನ ಪ್ರಯೋಗಗಳ ಮೂಲಕ ಸಿನೆಮಾಗಳು ಬರ್ತಿರೋದು ಹೊಸತೇನಲ್ಲ. ಅದರಲ್ಲೂ ಹೊಸತನವೊಂದನ್ನು ಹೊತ್ತು ಹೊಸ ಪ್ರಯೋಗಕ್ಕೆ ಮುಂದಾಗಿರುವ 'ವಿಂಡೋಸೀಟ್' ಚಿತ್ರತಂಡ ಟೈಟಲ್ ಟೀಸರ್, ಫಸ್ಟ್ ಲುಕ್, ಹಾಡಿನ ಮೂಲಕ ಮೂಲಕ ಅಭಿಮಾನಿಗಳಲ್ಲಿ ಒಂಥರ ಥ್ರಿಲ್ ಮೂಡಿಸಿದೆ.

ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಲೇ ಬಂದ ಸಿನೆಮಾ 'ವಿಂಡೋಸೀಟ್' ಟೈಟಲ್ ಇಷ್ಟೊಂದು ವಿಭಿನ್ನವಾಗಿರುವಾಗ ಸಿನಿಮಾ ಹೇಗಿರಬೇಡ ಎಂಬುದು ಎಲ್ಲರ ಕುತೂಹಲ. ಪಯಣಿಗರ ನೆನಪಿನಲ್ಲಿ ಸದಾ ಉಳಿಯುವ ವಿಂಡೋಸೀಟ್ ಪ್ರಯಾಣ ಸಾಕಷ್ಟು ನೆನಪಿನ ಬುತ್ತಿಯನ್ನು ಹೊತ್ತಿರುತ್ತೆ. ಎಲ್ಲರ ಜೀವನದಲ್ಲೂ ಆಗಿರೋ ಈ ಅನುಭವ, ಇಷ್ಟವಾಗೋ 'ವಿಂಡೋಸೀಟ್' ಒಂದು ಸಿನೆಮಾ ಶೀರ್ಷಿಕೆಯಾದ್ರೆ ಕುತೂಹಲ ದುಪ್ಪಟ್ಟು.

Window Seat Kannada Movie Trailer Releasing On June 06

ಈ ಕುತೂಹಲ ಇನ್ನಷ್ಟು ಇಮ್ಮಡಿಗೊಳಿಸಲೆಂದೇ ಚಿತ್ರತಂಡ ಚಿತ್ರದ ರೀವೀವರ್ ಟ್ರೈಲರ್ ಪ್ರೋಮೋ ವನ್ನು ರಿಲೀಸ್ ಮಾಡೋ ಮೂಲಕ ಟ್ರೈಲರ್ ರಿಲೀಸ್ ದಿನವನ್ನೂ ಬಹಿರಂಗ ಪಡಿಸಿದೆ. ಇದು ಚಿತ್ರದ ಬಗೆಗಿನ ಕ್ಯೂರಿಯಾಸಿಟಿಯನ್ನು ಸಿನಿಪ್ರಿಯರಲ್ಲಿ ದುಪ್ಪಟ್ಟಾಗಿಸಿದೆ.

Window Seat Kannada Movie Trailer Releasing On June 06

ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರೋ ಸುಮಾರು ಒಂದೂವರೆ ನಿಮಿಷದ ಟ್ರೈಲರ್ ಪ್ರೋಮೋದಲ್ಲಿ ನಾಯಕನ ಊರಿನ ಪರಿಚಯದೊಂದಿಗೆ, ಟ್ರೈನ್ ನ ವಿಂಡೋಸೀಟ್ ನಲ್ಲಿ ಕುಳಿತು ತನಗಾದ ಅನುಭವಗಳನ್ನ ನೆನಪಿಸಿಕೊಳ್ತಾನೆ ಅನ್ನೋ ಸುಳಿವು ಬಿಟ್ಟುಕೊಟ್ಟಂತಿದೆ.

ಪ್ರತೀ ಸಲ ವಿಂಡೋಸೀಟಿನಲ್ಲಿ ಕೂತು ನಾಯಕ ಪ್ರಯಾಣಿಸುವಾಗ ಅನುಭವಿಸಿದ ನಗು, ದುಖಃ, ಹೋರಾಟ, ಪ್ರೀತಿ ಎಲ್ಲಕ್ಕೂ ಈ ವಿಂಡೋಸೀಟ್ ಸಾಕ್ಷಿ ಅನ್ನೋ ಸಂಗತಿಯನ್ನು ನಿರ್ದೇಶಕಿ ಶೀತಲ್ ಶೆಟ್ಟಿ ಚಂದವಾಗಿ ಈ ಪ್ರೋಮೋ ಮೂಲಕ ಹೇಳಿದ್ದಾರೆ ಇದೇ ಜೂನ್ 6 ರಂದು ಸಾಗರದ ರಘು ತಾಳಗುಪ್ಪ (ನಾಯಕ ನಿರೂಪ್ ಭಂಡಾರಿ) ಕಥೆ ಹೇಳೋ ಟ್ರೈಲರ್ ರಿಲೀಸ್ ಮಾಡ್ತೀವಿ ಅನ್ನೂ ಸೂಪರ್ ಸುದ್ದಿಯೊಂದನ್ನ ಕೊಟ್ಟಿದ್ದಾರೆ.

Window Seat Kannada Movie Trailer Releasing On June 06

ಶೀತಲ್ ಶೆಟ್ಟಿ ಸಾರಥ್ಯದ ಈ ರೋಮ್ಯಾಂಟಿಕ್ ಥ್ರಿಲ್ಲರ್ ಕಥಾ ಹಂದರದ ಈ ಚಿತ್ರಕ್ಕೆ ನಿರೂಪ್ ಭಂಡಾರಿ ನಾಯಕ. ಹಾಗು ಸಂಜನಾ ಆನಂದ್, ಅಮೃತಾ ಐಯ್ಯಂಗಾರ್ ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ಇನ್ನುಳಿದಂತೆ ತಾರಾಗಣದಲ್ಲಿ ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಒಳಗೊಂಡಂತೆ ಒಂದೊಳ್ಳೆ ಕಲಾವಿದರ ತಂಡ 'ವಿಂಡೋಸೀಟ್' ಚಿತ್ರಬಳಗದಲ್ಲಿದೆ.

ಕೆಎಸ್‌ಕೆ ಶೋ ರೀಲ್ ಬ್ಯಾನರ್‌ನಡಿ ನಿರ್ಮಾಣವಾದ ಈ ಚಿತ್ರಕ್ಕೆ ಜಾಕ್ ಮಂಜು ನಿರ್ಮಾಪಕರಾಗಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಸಾರಥ್ಯ ವಹಿಸಿದ್ದಾರೆ. 'ವಿಂಡೋಸೀಟ್' ಅದ್ಭುತವಾಗಿ ಮೂಡಿ ಬರಲು ವಿಘ್ನೇಶ್ ರಾಜ್ ಕ್ಯಾಮೆರಾ ಕೈಚಳಕ , ಹಾಗು ರಿತ್ವಿಕ್ ಅವರ ಸಂಕಲನ ವರ್ಕ್ ಇದೆ. ಹಂತ ಹಂತವಾಗಿ ಸಿನಿಮಾ ಅಪ್ ಡೇಟ್ ಕೊಡುವ ಮೂಲಕ ಸಿನೆಮಾದ ಮೇಲೆ ಇಂಟ್ರೆಸ್ಟ್ ಹಾಗೂ ರಿಲೀಸ್ ಆಗಲಿರೋ ಟ್ರೈಲರ್ ನ ಮೇಲೆ ಭರವಸೆ ಹೆಚ್ಚಾಗಿದೆ.

More from Filmibeat

English summary
Window Seat Kannada movie trailer releasing on June 06. Movie is directed by Sheetal Shetty. Nirup Bhandari acted as hero. '
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X