'ವಿಂಡೋ ಸೀಟ್‌'ನಲ್ಲಿ ಸಂಜನಾ - ಅಮೃತಾ ಮೋಡಿ!

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಭಿನ್ನ ಎನಿಸಿಕೊಳ್ಳುವ ಪ್ರಯೋಗಾತ್ಮಕ ಮತ್ತು ಸದಭಿರುಚಿ ಸಿನಿಮಾಗಳು ತೆರೆಗೆ ಬರುತ್ತಿದೆ. ಇತ್ತೀಚೆಗೆ ಬಂದ ರತ್ನನ್‌ ಪ್ರಪಂಚ ಸಿನಿಮಾ ಕೂಡ ಅದೇ ಕಾರಣಕ್ಕೆ ಸಿನಿ ಪ್ರೇಕ್ಷಕರನ್ನು ಸೆಳೆದಿದೆ. ಈಗ ಇಂತಹ ವಿಭಿನ್ನ ಸೊಗಡಿನೊಂದಿಗೆ, ಭಿನ್ನ ಕಥಾ ಹಂದರದೊಂದಿಗೆ ಮತ್ತೊಂದು ಸಿನಿಮಾ ಬರುತ್ತಿದೆ. ಅದುವೇ 'ವಿಂಡೋ ಸೀಟ್'. ವಿಂಡೋ ಸೀಟ್ ಚಿತ್ರ ಈಗಾಗಲೇ ಸಾಕಷ್ಟು ವಿಚಾರಗಳಿಗೆ ಸದ್ದು ಮಾಡುತ್ತಾ ಇದೆ. ರಿಲೀಸ್‌ ಆಗಿರೋ ಚಿತ್ರದ ತುಣುಕುಗಳು ಸಿನಿಮಾ ಮೇಲೆ ಪ್ರೇಕ್ಷಕರಿಗೆ ವಿಶೇಷ ಆಸಕ್ತಿ ಮೂಡಿಸಿದೆ.

ಮನಮೋಕಹ ಲುಕ್‌ನಲ್ಲಿ ಕಾಣಿಸಿಕೊಂಡ ಸಂಜನಾ ಆನಂದ್- ಅಮೃತಾ ಅಯ್ಯಂಗಾರ್!

ವಿಂಡೋ ಸೀಟ್‌ ಚಿತ್ರದ ಹೊಸದೊಂದು ಹಾಡು ರಿಲೀಸ್‌ ಆಗಿದೆ. ಈ ಲಿರಿಕಲ್‌ ವಿಡಿಯೋ ತನ್ನ ಶೈಲಿಯಿಂದಲೇ ಗಮನ ಸೆಳೆದಿದೆ. ಈ ಹಾಡು 'ಜಾಝ್' ಶೈಲಿಯಲ್ಲಿ ಮೂಡಿ ಬಂದಿದೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಈ ಹಾಡಿನ ಮೂಲಕ ಜಾಝ್ ಶೈಲಿಯನ್ನು ಕನ್ನಡ ಪ್ರೇಕ್ಷಕರಿಗೆ ನೀಡಿದ್ದಾರೆ. ಇದೇ ಕಾರಣಕ್ಕೆ ಈ ಹಾಡು ವಿಭಿನ್ನ ಎನಿಸಿಕೊಂಡಿದೆ. ಚಿತ್ರದ ನಾಯಕಿಯರಾದ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್‌ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ‌ ಇಬ್ಬರು ಗ್ಲಾಮರಸ್‌ ಗೊಂಬೆಗಳಂತೆ ಹಾಡಿನಲ್ಲಿ ಮಿಂಚಿದ್ದಾರೆ. ಇಡೀ ಹಾಡಿನಲ್ಲಿ ಈ ಇಬ್ಬರೆ ನಾಯಕಿಯರು ಹಾಡಿನ ಲಿರಿಕ್ಸ್‌ ಗುನುಗುತ್ತಾರೆ. ಈ ಹಾಡು ಇಂಗ್ಲೀಷ್‌ ಸಾಹಿತ್ಯದಲ್ಲಿ ಮೂಡಿ ಬಂದಿದೆ. ಈ ಹಾಡಿನ ಮೇಕಿಂಗ್ ಅನ್ನು ಕೂಡ ವಿಭಿನ್ನವಾಗಿ ಮಾಡಲಾಗಿದೆ. ಇಬ್ಬರು ನಾಯಕಿಯರು ಕೂಡ ಪ್ರೀತಿಯ ಬಗ್ಗೆ ಹಾಡುತ್ತಾರೆ. ಈ ಹಾಡು ಕೂಡ ಸಿನಿಮಾದ ಭಾಗ. ಆದ್ರೆ ಚಿತ್ರದಲ್ಲಿ ಯಾವ ಸಂದರ್ಭದಲ್ಲಿ ಮೂಡಿ ಬರುತ್ತೆ ಅನ್ನೋದನ್ನು ಚಿತ್ರತಂಡ ರಿವೀಲ್‌ ಮಾಡಿಲ್ಲ.

ಈ ಚಿತ್ರದಲ್ಲಿ ಟ್ರಯಾಂಗಲ್ ಲವ್ ಸ್ಟೋರಿ ಇದೆ ಅಂತ ಹೇಳಲಾಗುತ್ತಿದೆ. ರಂಗೀತರಂಗ ಚಿತ್ರ ಖ್ಯಾತಿಯ ನಟ ನಿರೂಪ್‌ ಭಂಡಾರಿ, ಸಂಜನಾ ಆನಂದ್ ಅಮೃತ ಅಯ್ಯಂಗಾರ್ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಇನ್ನೂ ಇತ್ತೀಚೆಗೆ ನಿರೂಪ್‌ ಸಾರಥ್ಯದ ಹಾಡೊಂದು ರಿಲೀಸ್‌ ಆಗಿತ್ತು. ಆ ಹಾಡು ಕೂಡ ಮೆಲೋಡಿ ಸಾಹಿತ್ಯದ ಮೂಲಕ ಪ್ರೇಕ್ಷಕರ ಮನ ಸೂರೆಗೊಂಡಿತ್ತು. ಈಗ ಜಾಝ್ ಸಂಗೀತದೊಂದಿಗೆ ಬಂದ ಈ ಹಾಡು ಕೂಡ ಕಮಾಲ್‌ ಮಾಡುತ್ತಿದೆ.

Window Seat Movie New Song Released

ವಿಂಡೋಸೀಟ್‌ ಸುದ್ದಿ ವಾಹಿನಿಯ ನಿರೂಪಕಿ ಆಗಿದ್ದ ಶೀತಲ್‌ ಶೆಟ್ಟಿ ನಿರ್ದೇಶನದ ಸಿನಿಮಾ. ಇದು ಶೀತಲ್‌ ಶೆಟ್ಟಿಯ ಪ್ರಪಥಮ ನಿರ್ದೇಶನ. ಮೊದಲ ನಿರ್ದೇಶನದ ಮೂಲಕವೇ ಶೀತಲ್ ಶೆಟ್ಟಿ ನಿರೀಕ್ಷೆಯನ್ನ ಹುಟ್ಟು ಹಾಕಿದ್ದಾರೆ. ಇನ್ನೂ ವಿಂಡೋಸೀಟ್‌ಗೆ ಬಂಡವಾಳ ಹೂಡಿದ್ದಾರೆ ಜಾಕ್‌ ಮಂಜು.

ಇನ್ನೂ ನಾಯಕಿಯರ ವಿಚಾರಕ್ಕೆ ಬರುವುದಾದರೆ ಅಮೃತ ಅಯ್ಯಂಗಾರ್ ಮತ್ತು ಸಂಜನಾ ಇಬ್ಬರೂ ಕೂಡ ಕನ್ನಡ ಸಿನಿಮಾ ರಂಗದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಇಬ್ಬರಿಗೂ ಸಾಲು ಸಾಲು ಅವಕಾಶಗಳು ಬರುತ್ತಿವೆ. ಇಬ್ಬರೂ ಕೂಡ ತಮ್ಮದೇ ಸಿನಿಮಾಗಳ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಂಜನಾ ಆನಂದ್ ಇತ್ತೀಚಿಗೆ ಸಲಗ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಜೊತೆಗೆ ತೆರೆ ಹಂಚಿಕೊಂಡಿರುವ ಸಂಜನಾ ಪಾತ್ರ ಸಿನಿ ರಸಿಕರಿಗೆ ಇಷ್ಟವಾಗಿದೆ. ಜೊತೆಗೆ ಸಂಜನಾ ತೆಲುಗು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುತ್ತಿದ್ದಾರೆ. ಅಮೃತ ಅಯ್ಯಂಗಾರ್ ಬಡವ ರಾಸ್ಕಲ್, ಫ್ಯಾಮಿಲಿ ಫ್ಯಾಕ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅಮೃತಾರ ಉಡುಪಿ ಹೋಟೆಲು ಹಾಡು ಹಿಟ್‌ ಲಿಸ್ಟ್‌ ಸೇರಿದೆ. ಈ ಇಬ್ಬರೂ ನವ ನಾಯಕಿರು ವಿಂಡೋ ಸೀಟ್‌ನಲ್ಲಿ ಜೊತೆಯಾಘಿ ಕೂಡ ಪ್ರಯಾಣ ಬೆಳೆಸಿದ್ದಾರೆ. ಚಿತ್ರದ ಒಂದೇ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಈ ಹಾಡು ಅರ್ಜುನ್ ಜನ್ಯ ಹೊಸ ಮ್ಯೂಜಿಕ್‌ ಮಂತ್ರ ಸಿನಿಪ್ರಿಯರಿಗೆ ಇಷ್ಟವಾಗೋ ಸೂಚನೆ ಕೊಟ್ಟಿದೆ.

Window Seat Movie New Song Released

ವಿಂಡೋ ಸೀಟ್ ಒಂದು ಪತ್ತೆ ದಾರಿ ಕಥೆ ಅನಿಸುವಂಹತ ಅಂಶಗಳನ್ನ ಚಿತ್ರತಂಡ ಹೊರ ಬಿಟ್ಟಿದೆ. ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ ಗಿಟಾರ್‌ ವಾದಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನ ಬಿಟ್ಟರೆ ನಟ ನಿರೂಪ್‌ ಭಂಡಾರಿ ವಿಕ್ರಾಂತ್‌ ರೋಣ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಚಿತ್ರದಲ್ಲಿ ನಿರೂಪ್‌ ಭಂಡಾರಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Window Seat Movie New Song Gets Jazz Music Touch,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X