For Quick Alerts
  ALLOW NOTIFICATIONS  
  For Daily Alerts

  ವಿಂಗ್ ಕಮಾಂಡರ್ ಅಭಿನಂದನ್ ನಿಜವಾದ ಹೀರೋ, ನಾವು ಡಮ್ಮಿ: ದರ್ಶನ್

  |
  ಅವರಿಗೆ ನನ್ನ ಸಲ್ಯೂಟ್'' ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ | FILMIBEAT KANNADA

  ''ವಿಂಗ್ ಕಮಾಂಡರ್ ಅಭಿನಂದನ್ ನಿಜವಾದ ಹೀರೋ, ನಾವು ಅವರ ಮುಂದೆ ಡಮ್ಮಿ. ಅವರಿಗೆ ನನ್ನ ಸಲ್ಯೂಟ್'' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ ಹೇಳಿದ್ದಾರೆ.

  ವಿಶ್ವ ವನ್ಯಜೀವಿ ದಿನ ಹಿನ್ನೆಲೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೆಲ್ನಲ್ಲಿ ಮೂರು ದಿನಗಳ ಕಾಲ ನಟ ದರ್ಶನ್ ಸೆರೆ ಹಿಡಿದ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಮಾಡಲಾಗುತ್ತಿದ್ದು, ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ.

  ಅಭಿನಂದನ್ ಬಿಡುಗಡೆ ಬಳಿಕ ಭಾರತ ಮತ್ತೆ ದಾಳಿ ಮಾಡಿದ್ರೆ? ಪಾಕ್ ಅಳಲು

  ಬಳಿಕ ಮಾತನಾಡಿದ ದರ್ಶನ್ ''ಇನ್ನೊಬ್ಬರ ನೆಲದಲ್ಲಿ ನಿಂತು ಮಾತನಾಡಲೂ ಗಡ್ಸ್ ಬೇಕು. ನಾನು ಅವರ ಮಾತುಗಳನ್ನು ನೋಡಿದ್ದೇನೆ. ಅವರೇ ನಿಜವಾದ ಹೀರೋ. ಅಭಿನಂದನ್ ಸುರಕ್ಷಿತಾಗಿ ಬರುತ್ತಿರುವುದು ಸಂತೋಷವಾಗುತ್ತಿದೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ

  ಅಂದ್ಹಾಗೆ, ವಿಂಗ್ ಕಮಾಂಡರ್ ಅಭಿನಂದನ್ ಕಳೆದ ಎರಡು ದಿನದ ಹಿಂದೆ ಪಾಕಿಸ್ತಾನದ ಸೇನೆಯ ವಶಕ್ಕೆ ಸಿಕ್ಕಿದ್ದರು. ಇದೀಗ, ಇಂದು ಭಾರತ ವಶಕ್ಕೆ ಅಭಿನಂದನ್ ಅವರನ್ನ ನೀಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಿನ್ನೆ ಪಾಕಿಸ್ತಾನ ಸಂಸತ್ತಿನಲ್ಲಿ ಹೇಳಿದ್ದರು. ಭಾರತ ಮತ್ತು ಪಾಕ್ ಗಡಿ ಭಾಗದಲ್ಲಿ ಅಭಿನಂದನ್ ಅವರನ್ನ ಸ್ವಾಗತಿಸಲು, ಭಾರತೀಯ ಸೇನೆ ಮತ್ತು ಪೋಷಕರು ಕಾಯುತ್ತಿದ್ದಾರೆ.

  Read more about: darshan ದರ್ಶನ್
  English summary
  ''wing commander abhinandan is real hero, we are dummy'' said actor darshan in mysuru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X