ಜೈಲಿನಲ್ಲಿರುವ ದರ್ಶನ್‌ಗೆ ಇಂದು ಸಿಗುತ್ತಾ ಜಾಮೀನು ? ಬೇಲ್‌ಗೆ ವಕೀಲರು ನೀಡಿರುವ ಕಾರಣಗಳೇನು .?

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾಗಿರಲಿಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್ ಆಗಿತ್ತು. ಆದರೆ ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್‌ ಅವರಿಗೆ ಜನಪ್ರಿಯತೆಯ ಅಮಲು ಕೂಡ ಏರಿತ್ತು. ಹಣದ ಅಮಲು .. ಸುತ್ತಲು ಮೊಳಗುವ ಜೈಕಾರದ ನಶೆ .. ನಾನೇನೂ ಮಾಡಿದರು ಬಚಾವ್ ಆಗ್ಬಿಡ್ತೀನಿ ಎನ್ನುವ ಅಹಂಕಾರ.. ಇವೆಲ್ಲವೂ ಕೂಡ ನೆತ್ತಿಗೇರಿತ್ತು. ಖಾಸಗಿ ಬದುಕು ಕೂಡ ಗಲೀಜು ಆಗಿತ್ತು.

ಇಂಥಾ ದರ್ಶನ್ ಜೈಲಿನಲ್ಲಿ ಶತಕ ಬಾರಿಸಿದ್ದಾರೆ. ಕಳೆದ ನೂರಕ್ಕೂ ಅಧಿಕ ದಿನಗಳಿಂದ ಜೈಲಿನಲ್ಲಿದ್ದಾರೆ. ಇವತ್ತು ಹೊರ ಬರುತ್ತಾರಾ..? ಗೊತ್ತಿಲ್ಲ. ಆದರೆ ದರ್ಶನ್ ಅವರನ್ನು ಹೊರತರುವ ಪ್ರಯತ್ನವನ್ನು ಅವರ ಪರ ವಕೀಲರು ಮಾಡುತ್ತಿದ್ದಾರೆ. ದರ್ಶನ್‌ಗೆ ಜಾಮೀನು ಯಾಕೆ ಕೊಡಬೇಕು ಎಂಬ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

With these points the lawyer of jailed actor Darshan Thoogudeepa is demanding bail in court

ಹೌದು, ಇಂದು ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಎ2 ಆರೋಪಿಯಾದ ದರ್ಶನ್ ಮತ್ತು ಎ1 ಆರೋಪಿಯಾದ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆ ಅರ್ಜಿಯನ್ನು ಸಲ್ಲಿಸಿರುವ ದರ್ಶನ್ ಪರ ವಕೀಲರು ಕೆಲ ವಾದ ಮಾಡಿದ್ದಾರೆ. ದರ್ಶನ್ ಪರ ವಕೀಲರು ಮಾಡಿರುವ ಈ ವಾದವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದೇ ಆದಲ್ಲಿ ದರ್ಶನ್ ಅವರಿಗೆ ಜಾಮೀನು ಸಿಗುವುದು ಸುಲಭವೆನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.

ಆ ಪ್ರಕಾರ ನೋಡುವುದಾದರೆ ರೇಣುಕಾ ಸ್ವಾಮಿ ಮೇಲೆ ಮಾಡಲಾದ ಹಲ್ಲೆ ದರ್ಶನ್ ಅವರಿಗೆ ಮೊದಲೇ ತಿಳಿದಿತ್ತೆಂಬಂತೆ ಬಿಂಬಿಸಲಾಗಿದೆ ಆದರೆ ದರ್ಶನ್ ಹೇಳಿಕೆ ಆಧರಿಸಿ ಸಾಕ್ಷ್ಯಗಳನ್ನು ಗಮನಿಸಿದರೆ ಪ್ರಾಸಿಕ್ಯೂಷನ್ ಆರೋಪಗಳು ಸುಳ್ಳು ಎಂದು ಮೇಲ್ನೋಟಕ್ಕೆ ಅನಸುತ್ತೆ, ಸಾಕ್ಷ್ಯಾಧಾರಗಳನ್ನು ಸೃಷ್ಟಿಸುವ ಕೆಲಸ ನಡೆದಿರುವುದು ಕಂಡು ಬರುತ್ತೆ ಎಂದು ದರ್ಶನ್ ಪರ ವಕೀಲರು ವಾದವನ್ನು ಮೊನ್ನೆ ಮಾಡಿದ್ದಾರೆ. ಇನ್ನೂ ಕೃತ್ಯದ ನಾಲ್ಕು ದಿನದ ಬಳಿಕ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಈ ವಿಳಂಬಕ್ಕೆ ತನಿಖಾಧಿಕಾರಿ ಯಾವುದೇ ವಿವರಣೆ ನೀಡಿಲ್ಲ. ಇದಲ್ಲದೇ ಮೃತದೇಹದ ಹಲವು ಕಡೆ ಗಾಯದ ಗುರುತುಗಳಿವೆ. ರೇಣುಕಾ ಸ್ವಾಮಿ ತಲೆಯ ಮೇಲೆ 2.5‍‍ X 1 ಸೆಂಟಿಮೀಟರ್‌ನಷ್ಟು ಗಾಯ ಇದೆ, ಆದರೆ ಶವ ಪರೀಕ್ಷೆ ನಡೆಸಿದ ವೈದ್ಯರ ವರದಿಯಲ್ಲಿ ಮತ್ತು ಸಾವಿನ ಸಮಯದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದು ದರ್ಶನ್ ಪರ ವಕೀಲರು ಹೇಳುತ್ತಿದ್ದಾರೆ ಎಂದು ಟಿವಿ9 ಕನ್ನಡ ವರದಿಯನ್ನು ಮಾಡಿದೆ.

ಇನ್ನೂ ಸಿಸಿಟಿವಿ ದೃಶ್ಯಾವಳಿ ಸತ್ಯವೆಂದು ನಂಬಿದರೂ ಕೂಡ ಅಲ್ಲಿ ಎಲ್ಲಿಯೂ ದರ್ಶನ್ ಹಾಜರಾತಿ ಕಂಡಿ ಬಂದಿಲ್ಲ ಎಂದಿರುವ ದರ್ಶನ್ ಪರ ವಕೀಲರು, ಉಳಿದ ಆರೋಪಿಗಳ ಮೊಬೈಲ್ ಸಂದೇಶಕ್ಕೂ ದರ್ಶನ್‌ಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಸಿಆರ್‌ಪಿಸಿ 164 ಹೇಳಿಕೆಗೂ ವೈದ್ಯಕೀಯ ವರದಿಗೂ ವ್ಯತ್ಯಾಸಗಳಿವೆ ಎಂದಿರುವ ದರ್ಶನ್ ಪರ ವಕೀಲರು ವೈಜ್ಞಾನಿಕ ಸಾಕ್ಷಿಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗೂ ಸಾಮ್ಯತೆ ಇಲ್ಲ ಎಂದಿದ್ದಾರೆ. ದರ್ಶನ್ ಮುಗ್ದನಾಗಿದ್ದರು ಕೂಡ ಅವರನ್ನು ಈ ಪ್ರಕರಣದಲ್ಲಿ ಎಳೆತರಲಾಗಿದೆ ಎಂಬ ವಾದವನ್ನು ಮಾಡುತ್ತಿದ್ದಾರೆ.

ಮುಂದುವರೆದು ಕಂಡು ಬಂದ ವ್ಯತ್ಯಾಸದ ಕುರಿತು ತನಿಖಾಧಿಕಾರಿಯೇ ಕಾರಣ ನೀಡಬೇಕೆಂದಿರುವ ದರ್ಶನ್ ಪರ ವಕೀಲರು, ದರ್ಶನ್ ಸ್ಥಾನ ಮಾನ ಗಮನಿಸಿದರೆ ದರ್ಶನ್ ತಪ್ಪಿಸಿಕೊಳ್ಳುವ ವ್ಯಕ್ತಿಯಲ್ಲ ಈ ಕಾರಣಕ್ಕೆ ದರ್ಶನ್ ಅವರಿಗೆ ಜಾಮೀನು ನೀಡಬೇಕೆಂದು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿಯನ್ನೂ ಮಾಡಿದ್ದಾರೆ. ಪರ ಪರ ವಕೀಲರು ಮಾಡಿಕೊಂಡಿರುವ ಈ ಮನವಿಗೆ ಇಂದು ಮನ್ನಣೆ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರ ಕೆಲವೇ ಘಂಟೆಗಳಲ್ಲಿ ಸಿಗಲಿದೆ.

More from Filmibeat

Read more about: darshan jail sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X