ನಾಯಕನಿಲ್ಲದ ಚಂದನವನದಲ್ಲಿ ಭುಗಿಲೆದ್ದ ಸ್ಟಾರ್ ವಾರ್.!

Recommended Video

ದರ್ಶನ್ ಸುದೀಪ್ ಅವರ ಸ್ಟಾರ್ ವಾರ್ ನಿಲ್ಲಿಸೋಕೆ ಅಂಬಿ ಇರಬೇಕಿತ್ತು | FILMIBEAT KANNADA

ದರ್ಶನ್ ಮತ್ತು ಸುದೀಪ್ ನಡುವೆ ಏನೇ ಮುನಿಸು, ಕೋಪ, ವಿವಾದ ಇದ್ದರೂ ಇಡೀ ಇಂಡಸ್ಟ್ರಿಗೆ ದೊಡ್ಡಣ್ಣನಂತಿದ್ದ ರೆಬೆಲ್ ಸ್ಟಾರ್ ಎಲ್ಲವನ್ನೂ ಬಗೆಹರಿಸುತ್ತಿದ್ದರು. ಈಗ ಆ ಕೊರತೆ ಎದ್ದು ಕಾಣುತ್ತಿದೆ.

ನಾಯಕನಿಲ್ಲದ ಮನೆಯಲ್ಲಿ ಸ್ಟಾರ್ ವಾರ್ ಮತ್ತೆ ಭುಗಿಲೆದ್ದಿದೆ. ಆದರೆ ಈ ಬಾರಿ ಸ್ಟಾರ್ ನಟರಿಗಾಗಲಿ ಅಥವಾ ಅವರ ಅಭಿಮಾನಿಗಳಿಗಾಗಲಿ ಕಿವಿಮಾತು ಹೇಳಲು ಆ ದೊಡ್ಡ ಧ್ವನಿ ಇಲ್ಲ.

ಬಹುಶಃ ಆ ನಾಯಕ ಇಲ್ಲದಿರವುದು ಕೂಡ ಈ ಫ್ಯಾನ್ಸ್ ವಾರ್ ಮತ್ತು ಸ್ಟಾರ್ ವಾರ್ ಗೆ ಒಂದು ರೀತಿ ಕಾರಣ ಆಗಿದೆ. ರೆಬೆಲ್ ಇದ್ದಿದ್ದರೆ ಇಂತಹ ಟ್ರಬಲ್ ಬಂದಾಗ ಸೂಕ್ಷ್ಮವಾಗಿ ಬಗೆಹರಿಸಿಬಿಡುತ್ತಿದ್ದರು ಎಂಬ ನಂಬಿಕೆ. ಈಗ ಈ ಸಮಸ್ಯೆ ಬಗೆಹರಿಸುವುದು ಯಾರು? ಕಲಾವಿದರ ಬಳಗಕ್ಕೆ ನಾಯಕ ಯಾರು?

ಫ್ಯಾನ್ಸ್ ವಾರ್ ಗೆ ದಾಸ ಎಂಟ್ರಿ

ಫ್ಯಾನ್ಸ್ ವಾರ್ ಗೆ ದಾಸ ಎಂಟ್ರಿ

ಕಿಚ್ಚ ಸುದೀಪ್ ಮತ್ತು ದರ್ಶನ್ ಅವರ ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಫ್ಯಾನ್ಸ ವಾರ್ ಗೆ ಈಗ ಅಧಿಕೃತವಾಗಿ ಡಿ ಬಾಸ್ ಎಂಟ್ರಿಯಾಗಿದ್ದಾರೆ. ''ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ'' ಎಂದು ಟ್ವೀಟ್ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ ದರ್ಶನ್.

ಯಾರು ಸಂಧಾನ ಮಾಡಲು ಸಾಧ್ಯ?

ಯಾರು ಸಂಧಾನ ಮಾಡಲು ಸಾಧ್ಯ?

ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಾತು ಅಂದ್ರೆ ಸುದೀಪ್ ಅವರಿಗಾಗಲಿ ಅಥವಾ ದರ್ಶನ್ ಅವರಿಗಾಗಲಿ ಇಬ್ಬರೂ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಅಂಬಿ ಹೇಳಿದ್ರೆ ಮುಗಿತು. ಅಂಬಿಗೆ ದರ್ಶನ್ ದೊಡ್ಡ ಮಗನಂತಿದ್ದರು. ಸುದೀಪ್ ಕೂಡ ಅಂಬಿ ಮನೆಯ ಮಗನಂತೆ ಇದ್ದರು. ಆದ್ರೀಗ, ಇಬ್ಬರು ಒಟ್ಟಗೂಡಿಸಲು ಅಂಬರೀಶ್ ಇಲ್ಲ. ಅಂಬಿ ಬಿಟ್ಟರೆ ಬೇರೆ ಯಾರು ಆ ಸ್ಥಾನವನ್ನ ತುಂಬ ಬಲ್ಲರು?

ಕಲಾವಿದರಿಗೆ ಒಬ್ಬರು ನಾಯಕ ಬೇಕು.!

ಕಲಾವಿದರಿಗೆ ಒಬ್ಬರು ನಾಯಕ ಬೇಕು.!

ಸದ್ಯಕ್ಕೆ ಕಲಾವಿದರ ಸಂಘದಲ್ಲಿ ಅಧ್ಯಕ್ಷ ಅಂತ ಯಾರೂ ಇಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅವರು ಉಪಾಧ್ಯಕ್ಷರಾಗಿದ್ದಾರೆ. ದೊಡ್ಡಣ್ಣ, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್, ಶ್ರೀನಿವಾಸ್ ಮೂರ್ತಿ, ಶ್ರೀನಾಥ್ ಅಂತಹ ಹಿರಿಯರಿದ್ದಾರೆ. ಆದರೆ, ಇದು ಅವರ ವೈಯಕ್ತಿಕ ವಿಚಾರವಾಗಿರುವುದರಿಂದ ಹಿರಿಯರು ಕೂಡ ಮಧ್ಯಸ್ಥಿಕೆ ವಹಿಸಲು ಮುಂದಾಗುವುದು ಅನುಮಾನ.

ಸುಮಲತಾ ಅಂಬರೀಶ್ ಮುಂದಾಗಬಹುದಾ?

ಸುಮಲತಾ ಅಂಬರೀಶ್ ಮುಂದಾಗಬಹುದಾ?

ಅಂಬರೀಶ್ ಅವರಷ್ಟೆ ಸುಮಲತಾ ಅವರನ್ನ ಗೌರವಿಸುತ್ತಾರೆ ಈ ಇಬ್ಬರು ನಟರು. ಈ ಹಿಂದೆಯೂ ಸುದೀಪ್-ದರ್ಶನ್ ವಿಚಾರದಲ್ಲಿ ಸುಮಲತಾ ಮಧ್ಯಸ್ಥಿಕೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತೆ. ಆದರೆ ಸುಮಲತಾ ಅವರು ಈಗ ಕೇವಲ ನಟಿ ಹಾಗೂ ಅಂಬರೀಶ್ ಪತ್ನಿ ಮಾತ್ರವಲ್ಲ. ಮಂಡ್ಯ ಸಂಸದೆ. ಸಿಕ್ಕಾಪಟ್ಟೆ ಕೆಲಸ ಇದೆ. ಆ ಕೆಲಸದ ನಡುವೆ ಏನಾದರೂ ಬಿಡುವು ಮಾಡಿಕೊಂಡು ಸಂಧಾನಕ್ಕೆ ಮುಂದಾಗ್ತಾರಾ?

More from Filmibeat

English summary
Without Ambarish who will handle Sudeep and Darshan friendship battle?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X