For Quick Alerts
  ALLOW NOTIFICATIONS  
  For Daily Alerts

  ಕಥೆ ಕೇಳದೆ 'ಚಂಬಲ್' ಸಿನಿಮಾ ಒಪ್ಪಿಕೊಂಡಿದ್ದು ಯಾಕೆ ಸೋನು.?

  |

  'ಇಂತಿ ನಿನ್ನ ಪ್ರೀತಿಯ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಚೆಂದುಳ್ಳಿ ಚೆಲುವೆ ಸೋನು ಗೌಡ. 'ಪರಮೇಶ ಪಾನ್ವಾಲಾ', 'ಗುಲಾಮ', 'ಕಿರಗೂರಿನ ಗಯ್ಯಾಳಿಗಳು', 'ಹ್ಯಾಪಿ ನ್ಯೂ ಇಯರ್', 'ಗುಳ್ಟು' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಸೋನು ಗೌಡ ಅಭಿನಯಿಸಿದ್ದಾರೆ.

  ಇದೀಗ ಸೋನು ಗೌಡ ಮುಖ್ಯ ಭೂಮಿಕೆಯಲ್ಲಿರುವ 'ಚಂಬಲ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಶುಕ್ರವಾರ... ಅಂದ್ರೆ ಫೆಬ್ರವರಿ 22 ರಂದು 'ಚಂಬಲ್' ರಾಜ್ಯಾದ್ಯಂತ ತೆರೆಗೆ ಬರಲಿದೆ.

  'ಚಂಬಲ್' ಚಿತ್ರದಲ್ಲಿ ಐಎಎಸ್ ಅಧಿಕಾರಿಯ ಪತ್ನಿ ಪಾತ್ರದಲ್ಲಿ ಸೋನು ಗೌಡ ಅಭಿನಯಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, 'ಚಂಬಲ್' ಚಿತ್ರದ ಕಥೆ ಕೇಳದೆ ಸೋನು ಗೌಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ತಮ್ಮ ಪಾತ್ರದ ಬಗ್ಗೆ ಚ್ಯೂಸಿ ಆಗಿರುವ ಸೋನು ಗೌಡ ಅದ್ಹೇಗೆ 'ಚಂಬಲ್' ಕಥೆ ಕೇಳದೆ ಒಪ್ಪಿಕೊಂಡರು ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ....

  'ಚಂಬಲ್' ಚಿತ್ರದಲ್ಲಿ ಸೋನು ಪಾತ್ರವೇನು.?

  'ಚಂಬಲ್' ಚಿತ್ರದಲ್ಲಿ ಸೋನು ಪಾತ್ರವೇನು.?

  'ಚಂಬಲ್' ಚಿತ್ರದಲ್ಲಿ ಸತೀಶ್ ನೀನಾಸಂ ಡಿಸಿ ಸುಭಾಷ್ ಆಗಿ ಕಾಣಿಸಿಕೊಂಡರೆ, ಆತನ ಪತ್ನಿ ಸುಮ ಪಾತ್ರದಲ್ಲಿ ಸೋನು ಗೌಡ ಮಿಂಚಲಿದ್ದಾರೆ. ಗಂಡನ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗಿ ನಿಲ್ಲುವಂತಹ ಪತ್ನಿಯ ಪಾತ್ರದಲ್ಲಿ ಸೋನು ಗೌಡ ಅಭಿನಯಿಸಿದ್ದಾರೆ.

  ಇದೇ ವಾರ ನಿಮ್ಮೆದುರಿಗೆ ಬರಲಿದೆ ನೀನಾಸಂ ಸತೀಶ್ ಅಭಿನಯದ 'ಚಂಬಲ್' ಇದೇ ವಾರ ನಿಮ್ಮೆದುರಿಗೆ ಬರಲಿದೆ ನೀನಾಸಂ ಸತೀಶ್ ಅಭಿನಯದ 'ಚಂಬಲ್'

  ಕಥೆ ಕೇಳಿರಲಿಲ್ಲ.!

  ಕಥೆ ಕೇಳಿರಲಿಲ್ಲ.!

  'ಚಂಬಲ್'ಗೆ ಓಕೆ ಎನ್ನುವ ಮೊದಲು ಸೋನು ಕಥೆಯೇ ಕೇಳಿರಲಿಲ್ಲವಂತೆ. ನಿರ್ದೇಶಕ ಜೇಕಬ್ ವರ್ಗೀಸ್ ರವರ ಹಿಂದಿನ ಸಿನಿಮಾಗಳನ್ನು ನೋಡಿದ್ದ ಸೋನು ಗೌಡ, ಅವರ ಮೇಲೆ ನಂಬಿಕೆ ಇಟ್ಟು 'ಚಂಬಲ್'ಗೆ ಗ್ರೀನ್ ಸಿಗ್ನಲ್ ಕೊಟ್ಟರಂತೆ.

  'ಚಂಬಲ್' ಚಿತ್ರದ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಡಿ.ಕೆ.ರವಿ ತಾಯಿ.!'ಚಂಬಲ್' ಚಿತ್ರದ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಡಿ.ಕೆ.ರವಿ ತಾಯಿ.!

  ಪಾತ್ರದ ಬಗ್ಗೆಯೂ ಗೊತ್ತಿರಲಿಲ್ಲ.!

  ಪಾತ್ರದ ಬಗ್ಗೆಯೂ ಗೊತ್ತಿರಲಿಲ್ಲ.!

  ಇನ್ನೂ ತಮ್ಮ ಪಾತ್ರದ ಬಗ್ಗೆಯೂ ಸೋನು ಗೌಡ ವಿಚಾರಿಸಿರಲಿಲ್ಲ. 'ಚಂಬಲ್' ಚಿತ್ರಕ್ಕೆ ತಾವೇ ನಾಯಕಿ ಅನ್ನೋದು ಸೋನು ಗೌಡಗೆ ಶೂಟಿಂಗ್ ಸ್ಪಾಟ್ ಗೆ ಹೋದ್ಮೇಲೆ ಗೊತ್ತಾಗಿದೆ. ಹೀಗಾಗಿ, ಯಾವುದೇ ಹೋಮ್ ವರ್ಕ್ ಇಲ್ಲದೆ ನ್ಯಾಚುರಲ್ ಆಗಿ 'ಚಂಬಲ್' ಚಿತ್ರದಲ್ಲಿ ಸೋನು ನಟಿಸಿದ್ದಾರೆ.

  'ಚಂಬಲ್' ಚಿತ್ರತಂಡದ ಕುರಿತು...

  'ಚಂಬಲ್' ಚಿತ್ರತಂಡದ ಕುರಿತು...

  ಜೇಕಬ್ ವರ್ಗೀಸ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಶಶಿಕುಮಾರ್ ಛಾಯಾಗ್ರಹಣ ಹಾಗೂ ಭುವನ್ ಅವರ ಸಂಕಲನವಿರುವ ಈ ಚಿತ್ರಕ್ಕೆ ನಂದೀಶ್ ಚಿತ್ರಕಥೆ ಬರೆದಿದ್ದಾರೆ. ಬಿ.ಎ.ಮಧು ಹಾಗೂ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ನೀನಾಸಂ ಸತೀಶ್, ಸೋನುಗೌಡ, ಕಿಶೋರ್, ರೋಜರ್ ನಾರಾಯಣ್, ಅಚ್ಯುತಕುಮಾರ್, ಸರ್ದಾರ್ ಸತ್ಯ, ಮಹಂತೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇದೇ ಶುಕ್ರವಾರ 'ಚಂಬಲ್' ನಿಮ್ಮ ಮುಂದೆ ಬರಲಿದೆ.

  English summary
  Without listening to the story Kannada Actress Sonu Gowda agreed to act in Kannada Movie 'Chambal'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X