For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ರಮೇಶ್ ಮನೆಗೆ ಆಗಮಿಸಿದ ವಿಶೇಷ ಅತಿಥಿ

  By ಮೈಸೂರು ಪ್ರತಿನಿಧಿ
  |

  ಚಿತ್ರೀಕರಣ, ನಾಟಕ, ರಂಗ ಚಟುವಟಿಕೆ, ನಾಟಕ ತರಬೇತಿ ಹೀಗೆ ಸದಾ ಚಟುವಟಿಕೆಯಿಂದಿರುತ್ತಿದ್ದ ನಟ ಮಂಡ್ಯ ರಮೇಶ್ ಕೊರೊನಾ ಲಾಕ್‌ಡೌನ್ ಕಾರಣದಿಂದ ಮನೆಯಲ್ಲಿದ್ದಾರೆ.

  ಮೊದಲು ಭಯಪಟ್ಟು ನಂತರ ಹಾವನ್ನು ಅಂಗಯ್ಯಲ್ಲಿ ಹಿಡಿದ Mandya Ramesh | Filmibeat Kannada

  ಮನೆಯಲ್ಲಿ ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಿರುವ ಮಂಡ್ಯ ರಮೇಶ್ ಅವರ ನಿವಾಸಕ್ಕೆ ವಿಶೇಷ ಅತಿಥಿ ಆಗಿಮಿಸಿ ಮನೆಯವರಿಗೆಲ್ಲ ಆಶ್ಚರ್ಯ, ಭಯ ತಂದಿದ್ದಾರೆ!

  ಮೈಸೂರಿನ ದಟ್ಟಗಹಳ್ಳಿಯಲ್ಲಿ ಮಂಡ್ಯ ರಮೇಶ್ ನಿವಾಸವಿದ್ದು ಆ ಮನೆಗೆ ಇಂದು ಪುಟ್ಟ ಹಾವೊಂದು ಬಂದಿದೆ. ಹಾವನ್ನು ಕಂಡ ಮಂಡ್ಯ ರಮೇಶ್ ಹಾಗೂ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಉರಗ ರಕ್ಷಕರನ್ನು ಮನೆಗೆ ಕರೆಸಿದ್ದಾರೆ.

  ಮಂಡ್ಯ ರಮೇಶ್ ಮನೆಗೆ ಬಂದ ಉರಗ ರಕ್ಷಕ ಸೂರ್ಯಕೀರ್ತಿ ಹಾವಿನ ಮರಿಯನ್ನು ಹಿಡಿದುಕೊಂಡಿದ್ದಾರೆ. ಅದೊಂದು ವಿಷರಹಿತ ತೋಳದ ಹಾವೆಂದು (ಕಾಮನ್ ವುಲ್ ಸ್ನೇಕ್) ಕುಟುಂಬದವರಿಗೆ ಮಾಹಿತಿ ನೀಡಿದ್ದಲ್ಲದೆ. ಮಂಡ್ಯ ರಮೇಶ್‌ ಸಹ ಹಾವನ್ನು ಹಿಡಿದುಕೊಳ್ಳುವಂತೆ ಮಾಡಿ ಅವರಲ್ಲೂ ಧೈರ್ಯ ತುಂಬಿದ್ದಾರೆ.

  ಹಾವು ಹಿಡಿಯಲು ಮೊದಲಿಗೆ ಭಯಪಟ್ಟ ರಮೇಶ್, ಐದು ಸಾವಿರ ಪ್ರೇಕ್ಷಕರ ಮುಂದೆ ಪ್ರದರ್ಶನ ಕೊಡಬಲ್ಲೆ ಆದರೆ ಹಾವು ಎಂದರೆ ಬಹಳ ಭಯ ಆಗುವುದೇ ಇಲ್ಲ ಎಂದಿದ್ದಾರೆ. ಆದರೆ ಹಾವಿನ ಬಗ್ಗೆ ಮಾಹಿತಿ ನೀಡಿದ ಸೂರ್ಯ ಕೀರ್ತಿ ಮಂಡ್ಯ ರಮೇಶ್ ಕೈಗೆ ಹಾವನ್ನು ಕೊಟ್ಟಿದ್ದಾರೆ. ಕೊನೆಗೆ ಅಂತೂ-ಇಂತೂ ತುಸು ಧೈರ್ಯ ಮಾಡಿ ಸ್ವಲ್ಪ ಹೊತ್ತು ಹಾವು ಹಿಡಿದುಕೊಂಡಿದ್ದಾರೆ ಮಂಡ್ಯ ರಮೇಶ್.

  English summary
  Wolf snake entered Mandya Ramesh's Mysuru house. Snake rescuer Sooryakeerthi rescued the snake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X