ಯಾವಳೇ ನೀನು ; ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್.ಪೇಟೆ ವಿರುದ್ದ ದೂರು ..!

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಬದುಕು ಕಟ್ಟಿಕೊಂಡವರು ಶಿವರಾಜ್ ಕೆ.ಆರ್.ಪೇಟೆ. ಹತ್ತಾರು ಕಷ್ಟ .. ನೂರಾರು ಅವಮಾನಗಳನ್ನ ಎದುರಿಸಿ ಮುನ್ನುಗ್ಗಿದ ಶಿವರಾಜ್ ಕೆ.ಆರ್.ಪೇಟೆ ಒಂದ್ಕಾಲದಲ್ಲಿ ಗೊರೂರಿನಲ್ಲಿ ವಾತಾಪಿ ಯುವ ಜನ ವೃಂದ ಎಂಬ ಯುವಕರ ಸಂಘವನ್ನ ಮುನ್ನಡೆಸಿದವರು. ಹಾಸ್ಯ ಕಾರ್ಯಕ್ರಮಗಳ ಮೂಲಕ ಗೊರೂರಿನಲ್ಲಿ ಆ ಕಾಲದಲ್ಲಿಯೇ ಮನೆ ಮಾತಾದವರು. ಇಂಥ ಶಿವರಾಜ್ ಕೆ.ಆರ್.ಪೇಟೆ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಕೈ ತುಂಬಾ ಅವಕಾಶಗಳಿವೆ. ಒಂದಾದ ಮೇಲೊಂದು ಸಿನಿಮಾಗಳು ತೆರೆಗೆ ಬರುತ್ತಿವೆ. ಇಂಥಹ ಸಂದರ್ಭದಲ್ಲಿ ಶಿವರಾಜ್ ಕೆ.ಆರ್.ಪೇಟೆ ಅವರ ಮೇಲೆ ದೂರೊಂದು ದಾಖಲಾಗಿದೆ.

ಶಾರದಾ ಬಾಯಿ, ಶಿವರಾಜ್ ಕೆ.ಆರ್.ಪೇಟೆ ವಿರುದ್ಧ ಸುಬ್ರಮಣ್ಯನಗರ ಠಾಣೆಗೆ ದೂರು ನೀಡಿದ್ದಾರೆ. ಮಾರ್ಚ್ 30ರಂದು ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಶಿವರಾಜ್ ಕೆ.ಆರ್.ಪೇಟೆ ಅವಾಚ್ಯ ಶಬ್ದಗಳಿಂದ ನನ್ನ ನಿಂದಿಸಿದ್ದಾರೆ. ಅವಮಾನ ಮಾಡಿದ್ದಾರೆ. ಹಾಗಾಗಿ ಅವರನ್ನು ಠಾಣೆಗೆ ಕರೆದು, ಸೂಕ್ತ ಕ್ರಮ ತಗೆದುಕೊಳ್ಳುವಂತೆ ಮಹಿಳೆ ಕೋರಿದ್ದಾರೆ.

women filed case against comedy khiladi Shivaraj K R Pete

ಮಹಿಳೆ ಕೊಟ್ಟಿರುವ ದೂರಿನಲ್ಲಿ ಏನಿದೆ..?

ಎಂದಿನಂತೆ ನಾನು ಬೆಳ್ಳಿಗ್ಗೆ 09-30ಕ್ಕೆ ಕೆಲಸಕ್ಕೆ ಹೋಗುತ್ತಿದ್ದಾಗ, ರಾಜ್‌ಕುಮಾರ್‌ ರಸ್ತೆ 10ನೇ ಕ್ರಾಸ್‌ನ ಹಿಂಭಾಗದ ಪೆಟ್ರೋಲ್‌ ಬಂಕ್‌ ಹತ್ತಿರ ನನ್ನ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆಯಿತು. ಆ ನಂತರ ʻಯಾವಳೆ ನೀನು? ಅಲ್ಲಾಡಿಸಿಕೊಂಡು ಹೋಗ್ತಿಯಾ! ಎಂದು ಅವಾಚ್ಯ ಪದ ಬಳಸಿ ನಿಂದನೆ ಮಾಡಿದ್ದಾರೆʼ'. ಸ್ನೇಹಿತರ ಜೊತೆಗೆ ನಗಾಡುತ್ತಾ ಹೋಗಿದ್ದಾರೆ. ಈ ಕಾರಣಕ್ಕೆ ಶಿವರಾಜ್‌ ಕೆ ಆರ್‌ ಪೇಟೆ, ಕಾರಿನ ಮಾಲೀಕ ಮತ್ತು ಸ್ನೇಹಿತರನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರನ್ನ ಸಲ್ಲಿಸಿದ್ದಾರೆ ಶಾರದಾ ಬಾಯಿ

women filed case against comedy khiladi Shivaraj K R Pete

ಠಾಣೆಗೆ ಶಿವರಾಜ್ ಕೆ.ಆರ್.ಪೇಟೆ ಅವರನ್ನ ಕರೆಸಿಕೊಂಡ ಪೊಲೀಸರು..!

ಶಾರದಾ ಬಾರಿ ದೂರಿನ ಅನ್ವಯ ಎನ್ ಸಿಆರ್ ದಾಖಲಿಸಿಕೊಂಡ ಪೊಲೀಸರು ಶಿವರಾಜ್‌ ಕೆ.ಆರ್. ಪೇಟೆ ಅವರಿಗೆ ನೊಟೀಸ್ ನೀಡಿದ್ದರು. ಇಂದು ಬೆಳಗ್ಗೆ ಶಿವರಾಜ್ ಕೆ ಆರ್ ಪೇಟೆ ವಿಚಾರಣೆಗೆ ಹಾಜರಾಗಿದ್ದರು. ಇದೇ ವೇಳೆ ಮಹಿಳೆಯನ್ನೂ ಪೊಲೀಸ್‌ ಠಾಣೆಗೆ ಕರೆಸಿ ಈ ಪ್ರಕರಣವನ್ನು ಬಗೆಹರಿಸಿ ಕಳಿಸಿದ್ದಾರೆ ಅನ್ನುವುದು ಸದ್ಯದ ತಾಜಾ ಸಮಾಚಾರ

More from Filmibeat

English summary
In an recent development women women filed case against comedy khiladi Shivaraj K R Pete.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X