»   » ಸ್ಯಾಂಡಲ್ ವುಡ್ ಹಾಸ್ಯ ನಟನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ

ಸ್ಯಾಂಡಲ್ ವುಡ್ ಹಾಸ್ಯ ನಟನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ

Posted By:
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯಗಳ ದೂರುಗಳು ಪದೇ ಪದೇ ಕೇಳಿಬರುತ್ತಿವೆ. ಮಜಾ ಟಾಕೀಸ್ ಹಾಗೂ ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿರುವ ನಟ ತರಂಗ ವಿಶ್ವ ಅವರ ಮೇಲೆ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

ಸಿಕೆ ಅಚ್ಚುಕಟ್ಟುವಿನಲ್ಲಿ ವಾಸವಿರುವ ಐಟಿ ಮಹಿಳಾ ಉದ್ಯೋಗಿಯೊಬ್ಬರು ಕನ್ನಡ ಚಿತ್ರರಂಗದ ಹಾಸ್ಯ ನಟ ತರಂಗ ವಿಶ್ವನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡುತ್ತಿದ್ದಾರೆ. ಮೊದಲಿಗೆ ನೊಂದ ಮಹಿಳೆ ಮೊದಲು ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಅಲ್ಲಿಯ ಪೊಲೀಸ್ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಯುವತಿ ನಗರ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

ದೂರಿನ ಪ್ರತಿಯಲ್ಲಿ ವಿಶ್ವನಾಥ್ ಎಂದು ಹೆಸರು ದಾಖಲು ಮಾಡಿದ್ದು ಎಲ್ಲಿಯೂ ಕಲಾವಿದ ಎಂದು ಸೂಚಿಸಿಲ್ಲ. ಸದ್ಯ ನಟ ತರಂಗ ವಿಶ್ವ ಅವರ ಮೇಲೆ ಈ ಆರೋಪ ಕೇಳಿ ಬರುತ್ತಿದೆ.

women filed sexual harassment case against kannada comedy actor Taranga Vishwa

ಇತ್ತ ವಿಶ್ವ ಅವರನ್ನ ಈ ಬಗ್ಗೆ ಕೇಳಿದ್ರೆ "ಪೊಲೀಸರೇ ಇದೊಂದು ಸುಳ್ಳು ಸುದ್ದಿ ಎಂದು ನನಗೆ ಸ್ಪಷ್ಟ ಪಡಿಸಿದ್ದಾರೆ. ನನಗೆ ಆ ಮಹಿಳೆಯ ಪರಿಚಯವೇ ಇಲ್ಲ. ಅದಷ್ಟೇ ಅಲ್ಲದೆ ಅಲ್ಲಿ ತರಂಗ ವಿಶ್ವ ಅನ್ನುವ ಹೆಸರಿನಲ್ಲಿ ದೂರನ್ನ ದಾಖಲು ಮಾಡಿದ್ದಾರೆ ಅಷ್ಟೇ ಅದೂ ನಾನಲ್ಲ".

"ನಾನು ಯಾವುದೇ ರೀತಿಯ ತಪ್ಪನ್ನ ಮಾಡಿಲ್ಲ. ನನ್ನ ವಿರುದ್ದ ಯಾರೋ ಶಡ್ಯಂತ್ರ ಮಾಡುತ್ತಿದ್ದಾರೆ ಅಷ್ಟೇ. ಇಷ್ಟು ಮಾತ್ರ ನಾನು ಹೇಳಬಲ್ಲೇ" ಎಂದಿದ್ದಾರೆ. ಸದ್ಯ ವಿಶ್ವ ಹೆಸರಿನಲ್ಲಿ ದೂರು ದಾಖಲು ಆಗಿದ್ದು ಅದು ನಟ ತರಂಗ ವಿಶ್ವ ಅವರಾ, ಅಥವಾ ಬೇರೆ ವಿಶ್ವನಾ ಅನ್ನುವುದು ಸಾಭೀತಾಗಬೇಕಿದೆ.

English summary
women filed sexual harassment case against Kannada Comedy Actor 'Taranga Vishwa'. The complaint was filed at the Commissioner's Office.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X