twitter
    For Quick Alerts
    ALLOW NOTIFICATIONS  
    For Daily Alerts

    ''ನಾವು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ'': ಸುದೀಪ್ ಟ್ವೀಟ್ ವಿರುದ್ಧ ಮಹಿಳೆಯರು ಆಕ್ರೋಶ

    |

    Recommended Video

    ಟ್ವೀಟ್ ಮಾಡಿ ಯಡವಟ್ಟು ಮಾಡಿಕೊಂಡ ಸುದೀಪ್. | Sudeep

    'ನಾವೇನು ಕೈಗೆ ಬಳೆ ಹಾಕಿಲ್ಲ....' ಈ ವಾಕ್ಯದ ನಿಜವಾದ ತಾತ್ಪರ್ಯ ಅನೇಕರಿಗೆ ಗೊತ್ತಿಲ್ಲ. ಇದೊಂದು ರೀತಿ ಸವಾಲು ಹಾಕುವ ವಾಕ್ಯವಾಗಿ ಬಳಕೆಯಾಗಿದೆ. ಅದನ್ನ ಮತ್ತೆ ಮತ್ತೆ ಸಿನಿಮಾಗಳಲ್ಲಿ, ರಾಜಕೀಯ ನಾಯಕರು, ನಾಟಕಗಳಲ್ಲಿ, ಪ್ರತಿಭಟನೆಗಳಲ್ಲಿ ಬಳಸುವುದರ ಮೂಲಕ ಅದೊಂದು ಡೈಲಾಗ್ ಎಂಬಂತೆ ಬಿಂಬಿತವಾಗಿದೆ.

    ಇದೀಗ, ಕಿಚ್ಚ ಸುದೀಪ್ ಅವರು ಎದುರಾಳಿಗೆ ಎಚ್ಚರಿಕೆ ನೀಡಿರುವ ಟ್ವೀಟ್ ನಲ್ಲಿ ''ನಾವು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ'' ಎಂದು ಬಳಸಿದ್ದಾರೆ. ಈ ವಾಕ್ಯ ಬಳಕೆಯ ವಿರುದ್ಧ ಮಹಿಳೆಯರು ಆಕ್ರೋಶಗೊಂಡಿದ್ದಾರೆ.

    ''ನಾನು ಕೈಗೆ ಬಳೆ ಹಾಕಿಲ್ಲ'' : ಸಂಚಲನ ಮೂಡಿಸಿದ ಸುದೀಪ್ ಟ್ವೀಟ್''ನಾನು ಕೈಗೆ ಬಳೆ ಹಾಕಿಲ್ಲ'' : ಸಂಚಲನ ಮೂಡಿಸಿದ ಸುದೀಪ್ ಟ್ವೀಟ್

    ಈ ಪದ ಬಳಸುವುದು ಮಹಿಳೆಗೆ ಅಗೌರವ ತೋರಿದಂತೆ, ಮಹಿಳೆಯನ್ನ ಅಶಕ್ತಗಳು ಎಂದು ಬಿಂಬಿಸಿದಂತೆ ಎಂದು ಕಿಡಿಕಾರುತ್ತಿದ್ದಾರೆ. ಈ ಬಗ್ಗೆ ಹಲವು ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾರು ಏನಂದ್ರು? ಮುಂದೆ ಓದಿ...

    ಸೆಲೆಬ್ರಿಟಿಗಳು ಜವಾಬ್ದಾರಿಯಿಂದ ಮಾತಾನಾಡಬೇಕು

    ಸೆಲೆಬ್ರಿಟಿಗಳು ಜವಾಬ್ದಾರಿಯಿಂದ ಮಾತಾನಾಡಬೇಕು

    ''ನಟರು ಆಫ್ಟರಾಲ್ ನಟರು ಅವರಿಗೆ gender sensitivity ಇರ್ಬೇಕು ಅಂತ ನಾವು ನಿರೀಕ್ಷಿಸಬಾರದು ಅಲ್ವಾ? ಬಳೆ ಹಾಕ್ಕೊಂಡಿದಾರೆ ಅಂದ್ರೆ ಏನಂತೆ ಪ್ರಾಬ್ಲಮ್ಮು? ಬಳೆ ತೊಡೋರು ಹೆಣ್ಮಕ್ಳು, ಹೆಣ್ಮಕ್ಳು ವೀಕು ಅಂತಾನಾ? ಈ ಸಮಾಜ ಇಂಥಾ ಸ್ಟೀರಿಯೋಟೈಪ್ ಗಳಿಂದ ಹೊರಗೆ ಬರೋದು ಇನ್ನೂ ಯಾವಾಗ? ಕೊನೆಪಕ್ಷ ಸೆಲೆಬ್ರಿಟಿಗಳು ಜವಾಬ್ದಾರಿಯಿಂದ ಮಾತಾಡಲು ಕಲಿಯೋದು ಯಾವಾಗ? ಸಿನೆಮಾ ಡೈಲಾಗ್ ಆಗಿದ್ದಿದ್ರೆ ಪಾತ್ರದ ಅಗತ್ಯ ಅನ್ಬೋದಿತ್ತು. ಇದು ಸ್ವಂತದ ಸ್ಟೇಟ್ಮೆಂಟ್!! ಸೀರಿಯಸ್ಲಿ ಇವರಿಗೆಲ್ಲ ಲಿಂಗಸಂವೇದನೆ ಮತ್ತು ಭಾಷೆ ಬಗ್ಗೆ ಒಂದು ವರ್ಕ್ ಶಾಪ್ ಮಾಡೋ ಅಗತ್ಯ ಇದೆ'' ಎಂದು ಗಾಯಿತ್ರಿ ಎಂಬುವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಳೆ ಅಲ್ಲ ಅಂದರೆ ಏನು ಸುದೀಪ ಸರ್

    ಬಳೆ ಅಲ್ಲ ಅಂದರೆ ಏನು ಸುದೀಪ ಸರ್

    ''ಬಳೆ ಅಲ್ಲ ಅಂದರೆ ಏನು ಸುದೀಪ ಸರ್ ಯಾರೋ ಮಾಡು ಕುತಂತ್ರಕ್ಕೆ ನಿಮ್ಮ ಮಧ್ಯದಲ್ಲಿ ಹೆಣ್ಣಿನ ವಿಷಯ ಬೇಡ...ಕಡಗ ಬಳೆ ಎರಡು ಸಮಾನತೆ ಸಂಕೇತ. ಸಾರಿದ ಶರಣರು 12ನೇ ಶತಮಾನದಲ್ಲಿ ನೆನಪಿರಲಿ..'' ಎಂದು ಯುವತಿಯೊಬ್ಬರು ಸುದೀಪ್ ಅವರನ್ನ ಪ್ರಶ್ನಿಸಿದ್ದಾರೆ.

    ಪುರುಷರು ಟೀಕಿಸುತ್ತಿದ್ದಾರೆ

    ಪುರುಷರು ಟೀಕಿಸುತ್ತಿದ್ದಾರೆ

    ''ಡಿಯರ್ ಸುದೀಪ್, ಕಡಗ-ಬಳೆ ತೊಟ್ಟೋರೆಲ್ಲ ಅಶಕ್ತರು, ದುರ್ಬಲರೇನಲ್ಲ. ಹಾಗೆಯೇ ತೊಡದವರೆಲ್ಲ ವೀರಾಧಿವೀರರು, ಮಹಾಬಲಶಾಲಿಗಳೂ ಆಗಿರುವುದಿಲ್ಲ. ಅಂದಹಾಗೆ ಬಳೆ ತೊಡುವ ಹೆಣ್ಣುಮಕ್ಕಳು ಎಷ್ಟೋ ವಿಷಯಗಳಲ್ಲಿ ಗಂಡಸರಿಗಿಂತ ಬಲಶಾಲಿಗಳಾಗಿರುತ್ತಾರೆ ಅನ್ನೋ ಕಾಮನ್ ಸೆನ್ಸ್ ನಿಮಗಿದೆ ಎಂದು ಆಶಿಸುತ್ತೇನೆ'' ಎಂದು ಪುರುಷರೊಬ್ಬರು ಟೀಕಿಸಿದ್ದಾರೆ.

    ನಿನ್ನ ಬೆಳೆಸಿರುವುದು ಬಳೆ ಹಾಕಿದ್ದ ಕೈಗಳೇ

    ನಿನ್ನ ಬೆಳೆಸಿರುವುದು ಬಳೆ ಹಾಕಿದ್ದ ಕೈಗಳೇ

    'ಬಳೆ ಹಾಕಿದ ಕೈ ಬಳ್ಳೆ ಹಾಕಿ ನಿನ್ನ ಬೆಳೆಸಿರುವುದು ಪೈಲ್ವಾನ' ಎಂದು ಮತ್ತೋರ್ವ ಮಹಿಳೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಒಬ್ಬ ವ್ಯಕ್ತಿ ''ಈ ಕನ್ನಡ ಚಲನಚಿತ್ರಗಳು ಒಂದೆಡೆ ತಾಯಿ... ತಾಯಿ ಎಂದು ಕಣ್ಣೀರು ಸುರಿಸಿ, ಅದರ ಜೊತೆಯಲ್ಲೇ ಪುರುಷ ಪ್ರಧಾನ ಪಾತ್ರಗಳನ್ನು ವೈಭವೀಕರಿಸುವುದು ದ್ವಂದ್ವ ನೀತಿಯ ರೋಗವೇ ಸರಿ.'' ಎಂದಿದ್ದಾರೆ.

    ಶೋಭ ಕಾರಂದ್ಲೆಜೆ ಎಡವಟ್ಟು ಮಾಡಿದ್ದರು

    ಶೋಭ ಕಾರಂದ್ಲೆಜೆ ಎಡವಟ್ಟು ಮಾಡಿದ್ದರು

    ಹಿಂದೆಯೊಮ್ಮೆ ಸಂಸದೆ ಶೋಭ ಕಾರಂದ್ಲೆಜೆ ಅವರು ರಾಜಕೀಯ ನಾಯಕರೊಬ್ಬರನ್ನ ಟೀಕಿಸುವ ಭರದಲ್ಲಿ ''ನಿಮ್ಮಿಂದ ಕೆಲಸ ಮಾಡಲು ಆಗಿಲ್ಲ ಅಂದ್ರೆ ಬಳೆ ತೊಟ್ಟುಕೊಳ್ಳಿ'' ಎಂದಿದ್ದರು. ಅದಕ್ಕೆ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದರು. ''ಕುಮಾರಿ ಶೋಭ ಅವರೇ ನೀವೊಬ್ಬ ಮಹಿಳೆಯಾಗಿ ಮಹಿಳಾ ಸಂಕುಲವೇ ಅಸಮರ್ಥರು ಎಂಬಂತೆ ಕೀಳು ಹೇಳಿಕೆ ನೀಡಿರುವುದು ಸರಿಯಲ್ಲ. ನೆನಪಿರಲಿ ಚೆನ್ನಮ್ಮ, ಓಬವ್ವ, ಇಂದಿರಾಗಾಂಧಿ ಇವರೆಲ್ಲ ಬಳೆ ತೊಟ್ಟೆ ಸಾಧನೆಯ ಉತ್ತುಂಗಕ್ಕೇರಿದವರು'' ಎಂದಿದ್ದರು.

    ಸುದೀಪ್ ಮಾಡಿದ ಟ್ವೀಟ್ ಏನು?

    ಸುದೀಪ್ ಮಾಡಿದ ಟ್ವೀಟ್ ಏನು?

    ಪೈಲ್ವಾನ್ ಚಿತ್ರದ ಪೈರಸಿ ಕುರಿತು ಟ್ವೀಟ್ ಮಾಡಿರುವ ಸುದೀಪ್ ''ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ.'' ಎಂದಿದ್ದರು.

    English summary
    ''We had put bracelets, not bangles''...Sudeep made Statement about pailwan piracy. But, Women outrage against kannada actor kiccha sudeep statement.
    Saturday, September 21, 2019, 14:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X