''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್​ ; 07 ದಿನದ ಗಡುವು..!

By ಫಿಲ್ಮಿಬೀಟ್ ಡೆಸ್ಕ್

ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ ಹೋಯಿತು.. ಎಂಬ ಮಾತನ್ನ ಹಿರಿಯರು, ಶ್ರುತಿ ಅವರನ್ನ ಗಮನದಲ್ಲಿಟ್ಟುಕೊಂಡೇ ಅವತ್ತು ಹೇಳಿದ್ದರು ಅನ್ನುವ ಅಭಿಪ್ರಾಯ ಸದ್ಯಕ್ಕೆ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ.. ಮೊನ್ನೆ ಶ್ರುತಿ ಮಾತನಾಡಿದ್ದ ಮಾತು.

ಹೌದು. ನಿಮಗೆ ಗೊತ್ತಿರಬೇಕು.. ಉಡುಪಿಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡುವ ಸಮಯದಲ್ಲಿ, ಶ್ರುತಿ.. ರಾಜ್ಯ ಸರ್ಕಾರದ ಮಹಿಳಾಪರ ಯೋಜನೆಗಳನ್ನು ಟೀಕಿಸಿದ್ದರು. ಗ್ಯಾರಂಟಿ ಯೋಜನೆ, ಪುರುಷರ ಚಿಂತೆ ಹೆಚ್ಚಿಸಿದೆ ಎಂದಿದ್ದರು. ಬಸ್ಸಿನ ಸೀಟಿಗೋಸ್ಕರ ಹೆಣ್ಮಕ್ಕಳು ಜುಟ್ಟು ಹಿಡಿದುಕೊಂಡು ಹೊಡೆದಾಡುವಂತೆ ಮಾಡಿದ್ದೀರಿ ನೀವು. ನನ್ನ ಹೆಂಡತಿ ಎಲ್ಲಿಗೆ ಹೋದಳೋ ಗೊತ್ತಿಲ್ಲ ಅಂತ ಎಷ್ಟೋ ಮನೆಯ ಗಂಡಸರು ಅಳುತ್ತಾ ಇದ್ದಾರೆ. ಎಷ್ಟೋ ಮನೆಯಲ್ಲಿ ಮಕ್ಕಳು ಉಪವಾಸ ಬಿದ್ದಿದ್ದಾರೆ ಎಂದು ಕೂಡ ಶ್ರುತಿ ಹೇಳಿದ್ದರು.

womens-commission-sends-notice-to-shruti-for-alleged-derogatory-remarks-against-shakti-scheme

ಇಷ್ಟೇ ಅಲ್ಲ ನೆರೆದ ಜನಸ್ತೋಮ ಕಂಡು ಮಾತನಾಡುವ ಭರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಶ್ರುತಿ, ಫ್ರೀ ಬಸ್​ ಕೊಟ್ಟರು ಅಂದ ತಕ್ಷಣ ಹೆಣ್ಮಳ್ಳಲು ಎಲ್ಲೆಲ್ಲೋ ಹೋಗುತ್ತಿದ್ದಾರೆ. ತೀರ್ಥಯಾತ್ರೆಗೆ ಹೋಗಬೇಕು ಎಂಬ ನೆಪದಲ್ಲಿ ಎಲ್ಲಿಗೆ ಹೋಗಬೇಕು ಎಂಬುದು ಕೂಡ ಗೊತ್ತಿಲ್ಲ. ಗೊತ್ತು-ಗುರಿ ಇಲ್ಲದಂತೆ ಮಾಡಿದ್ದಾರೆ ಎಂದು ಹೇಳಿದ್ದರು ಶ್ರುತಿ.

ಶ್ರುತಿ ಅವರಾಡಿದ ಈ ಮಾತು ಅನೇಕರನ್ನ ಕೆರಳಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಅಲೆ ಎದ್ದಿತ್ತು. ಇದೀಗ ಅಸಹನೆ..ಅಸಮಾಧಾನದ ಪ್ರತಿಫಲ ಎನ್ನುವಂತೆ ಸಾಮಾಜಿಕ ಕಾರ್ಯಕರ್ತ ಮನೋಹರ್ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ಹಿನ್ನೆಲೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಶ್ರುತಿಗೆ ನೋಟೀಸ್ ನೀಡಿದ್ದಾರೆ. 7 ದಿನಗಳ ಒಳಗೆ ಅವರು ಉತ್ತರಿಸಿ, ಅದರ ಬಗ್ಗೆ ವಿವರಣೆಯನ್ನು ಕೊಡಬೇಕು ಎಂದು ಅಧ್ಯೆಕ್ಷೆ ಹೇಳಿದ್ದಾರೆ.

womens-commission-sends-notice-to-shruti-for-alleged-derogatory-remarks-against-shakti-scheme

ನೋಟಿಸ್ ನಲ್ಲಿ ಏನಿದೆ?

ಉಡುಪಿ ಜಿಲ್ಲೆಯ ಬಂದೂರಿನಲ್ಲಿ ನಡೆದ ಚುನಾವಣಾ ಭಾಷಣದ ವೇಳೆ ಫ್ರೀ ಬಸ್ ಯೋಜನೆಯಿಂದ ​ತೀರ್ಥಯಾತ್ರೆಗೆಂದು ಹೋಗುತ್ತೇವೆ ಎಂದು ಹೇಳಿ ಹೆಣ್ಣು ಮಕ್ಕಳು ಎಲ್ಲೆಲ್ಲೂ ಹೋಗುತ್ತಿರುತ್ತಾರೆ ಎಂದು ನಟಿ ಶ್ರುತಿ ಹೇಳಿದ್ದಾರೆ.ಶ್ರುತಿಗೆ ಕೊಟ್ಟ ನೋಟಿಸ್ ನಲ್ಲಿ ಈ ರೀತಿ ಬಹಿರಂಗವಾಗಿ ಹೆಣ್ಣು ಮಕ್ಕಳನ್ನು ಅವಮಾನಿಸಿರೋದು ಖಂಡನೀಯ. ರಾಜ್ಯ ಮಹಿಳಾ ಆಯೋಗದ ಅಧಿನಿಯಮ 1995 ಪರಿಚಯ 10(ಎ) ಮೇರೆಗೆ ನೋಟಿಸ್ ಜಾರಿ ಮಾಡಿದೆ. 7 ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ.

ಆಕ್ರೋಶ ವ್ಯಕ್ತಪಡಿಸಿರುವ ನಾಗಲಕ್ಷ್ಮಿ ಚೌಧರಿ..!

ರಾಜಕೀಯ ಸಭೆಯಲ್ಲಿ ಮಹಿಳೆಯರು ಬಸ್​ ಹತ್ತಿ ಎಲ್ಲಿಗಂದ್ರೆ ಅಲ್ಲಿಗೆ ಹೋಗ್ತಾರೆ. ಮನೆಯವರು, ಮಕ್ಕಳು ಉಪಾವಾಸ ಬೀಳ್ತಾರೆ ಎಂದು ಒಬ್ಬ ಮಹಿಳೆಯಾಗಿ ಇನ್ನೊಂದು ಮಹಿಳೆ ಬಗ್ಗೆ ಲಘುವಾಗಿ ಮಾತಾಡುವುದನ್ನ ತೀವ್ರವಾಗಿ ಖಂಡಿಸುತ್ತೇನೆ. ಗಂಡಸರ ವಿರುದ್ಧ ನಾವು ಹೋರಾಡುತ್ತಿದ್ದರೆ, ಹೆಣ್ಣು ಸಹ ಹೆಣ್ಣಿಗೆ ಶತ್ರುವಾಗಿ ಹೋಗುತ್ತಿರುವುದು ಇದೊಂದು ದುರದೃಷ್ಟಕರ. ಇದನ್ನು ಯಾರು ಕೂಡ ಈ ತರ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಮಹಿಳಾ ಸಬಲೀಕರಣದ ಯೋಜನೆಗಳ ಬಗ್ಗೆ ಇಷ್ಟು ದಿನ ಪುರುಷರು ಮಾತನಾಡುತ್ತಿದ್ದರು ಆಗ ಈ ಬಗ್ಗೆ ನಾವು ಹೋರಾಟ ಮಾಡ್ತಿದ್ದೇವು. ಆದರೆ, ಈಗ ಹೆಣ್ಣೇ ಹೆಣ್ಣಿನ ಬಗ್ಗೆ ಕೇವಲವಾಗಿ ಮಾತಾನಾಡುತ್ತಾ ಇರುವುದು ದುರದುಷ್ಟಕರ. ಯಾರು ಹೆಣ್ಣಿನ ಬಗ್ಗೆ ಈ ರೀತಿ ಮಾತನಾಡಬಾರದು" ಎಂದು ಕೂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.

More from Filmibeat

English summary
In An Recent Development Sandalwood Actress Shruti Receives Notice from Women's Commission Over Alleged Derogatory Comments Against Shakti Scheme
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X