'ವರ್ಲ್ಡ್ ಫೇಮಸ್ ಲವರ್' ಆದ ವಿಜಯ್ ದೇವರಕೊಂಡ
'ಡಿಯರ್ ಕಾಮ್ರೆಡ್' ನಂತರ ನಟ ವಿಜಯ್ ದೇವರಕೊಂಡ ಹೊಸ ಸಿನಿಮಾದ ಮಾಡುತ್ತಿದ್ದಾರೆ. ಈ ಸಿನಿಮಾದ ಹೆಸರು 'ವರ್ಲ್ಡ್ ಫೇಮಸ್ ಲವರ್' ಆಗಿದ್ದು, ಇಂದು (ಸಪ್ಟೆಂಬರ್ 20) ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಚಿತ್ರದ ಫಸ್ಟ್ ಲುಕ್ ಅನ್ನು ನಟ ವಿಜಯ್ ದೇವರಕೊಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಕೂಡ 'ಅರ್ಜುನ್ ರೆಡ್ಡಿ' ಶೈಲಿಯಲ್ಲಿ ಇರಲಿದೆಯೇ ಎನ್ನುವ ಕುತೂಹಲ ಫಸ್ಟ್ ಲುಕ್ ಮೂಲಕ ಮೂಡಿದೆ.
ರಕ್ತ ಚೆಲ್ಲಿದ ಮುಖದಲ್ಲಿ, ಕೈನಲ್ಲಿ ಸಿಗರೇಟು ಎಸೆಯುತ್ತ ,ತಮ್ಮ ಆಕ್ರೋಶವನ್ನು ವಿಜಯ್ ದೇವರಕೊಂಡ ಹೊರ ಹಾಕಿದ್ದಾರೆ. ಫಸ್ಟ್ ಲುಕ್ ನಿಜಕ್ಕೂ ಬೆಂಕಿಯಂತೆ ಇದೆ. ಇಡೀ ಟಾಲಿವುಡ್ ಈ ಸಿನಿಮಾದ ಬಗ್ಗೆ ಮಾತನಾಡುವ ಹಾಗಿದೆ. ವಿಜಯ್ ದೇವರಕೊಂಡ ಹಳೆಯ ಸಿನಿಮಾಗಳ ಶೈಲಿಯಲ್ಲಿಯೇ ಈ ಸಿನಿಮಾ ಇರಲಿದೆ.

ಸಿನಿಮಾದಲ್ಲಿ ನಾಲ್ಕು ನಾಯಕಿಯರು ಇದ್ದು, ರಾಶಿ ಖನ್ನಾ, ಐಶ್ವರ್ಯ ರಾಜೇಶ್, ಕ್ಯಾಥರೀನ್, ಇಜಾಬೆಲ್ಲೆ ಲೈಟ್ ನಟಿಸುತ್ತಿದ್ದಾರೆ. ವಿಜಯ್ ನಾಲ್ಕು ಹುಡುಗಿಯರ ಜೊತೆಗೆ ಸುತ್ತಾಡುವ ಬ್ಯಾಡ್ ಬಾಯ್ ಪಾತ್ರ ಮಾಡುತ್ತಿದ್ದಾರೆ. ಐಶ್ವರ್ಯ ರಾಜೇಶ್ ಹಾಗೂ ಇಜಾಬೆಲ್ಲೆ ಈ ಚಿತ್ರದ ಮೂಲಕ ಟಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ.
ಕೆ ಎ ವಲ್ಲಭ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಕ್ರಂತ್ರಿ ಮಾದವ್ ಈ ಚಿತ್ರದ ನಿರ್ದೇಶನ ಇರಲಿದೆ.


Click it and Unblock the Notifications











