ಪುನೀತ್ ಸಾವಿಗೆ ಕಂಬನಿ ಮಿಡಿದ ವಿದೇಶಿದಲ್ಲಿರುವ ಕನ್ನಡಿಗರು

ದೊಡ್ಮನೆಯ ರಾಜರತ್ನ ಪುನೀತ್‌ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿದ್ದಾರೆ. ಯಾರು ಊಹಿಸಿರಲಿಲ್ಲ ಇಂತಹ ಒಂದು ದಿನ ಬರುತ್ತೆ, ಪುನೀತ್‌ರನ್ನು ನಾವೆಲ್ಲಾ ಕಳೆದುಕೊಳ್ಳುತ್ತೇವೆ ಎಂದು . ಆದರೆ ಆ ವಿಧಿಯಾಟ ಯಾರು ಬಲ್ಲರು. ಒಂದು ಸಣ್ಣ ಸುಳಿವನ್ನು ನೀಡದೇ ಪ್ರೀತಿ ಪಾತ್ರರಾಗಿದ್ದ ಪುನೀತ್‌ರನ್ನು ಕರೆದುಕೊಂಡು ಬಿಟ್ಟಿದೆ. ಒಳ್ಳೆ ಮನಸ್ಸಿನವರಿಗೆ ಉಳಿಗಾಲ ಇಲ್ಲ ಅನ್ನೋದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಪುನೀತ್ ಸಾವಿಗೆ ಅದೆಷ್ಟೋ ಮಂದಿಯ ಕಣ್ಣೀರು ಇನ್ನೂ ನಿಂತಿಲ್ಲ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಕಂಬನಿ ಮಿಡಿದಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಇಡೀ ಚಿತ್ರರಂಗವೇ ದುಖಃದಲ್ಲಿದೆ. ಈಗಲೂ ಪುನೀತ್ ನಮ್ಮೊಂದಿಗೆ ಇಲ್ಲ ಅನ್ನೋದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಟು ಸತ್ಯದ ಜೊತೆಗೆ ಬದುಕು ಸಾಗಿಸಲೇ ಬೇಕಿದೆ. ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. ಕನ್ನಡದ ರತ್ನನನ್ನು ಕಳೆದುಕೊಂಡಿರೊ ನೋವು ಎಲ್ಲೆಡೆ ಆವರಿಸಿದೆ. ಇಂದು ಮಣ್ಣಲ್ಲಿ ಮಣ್ಣಾಗಿರುವ ಪುನೀತ್‌ಗೆ ದೇಶ ವಿದೇಶಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.

ಪುನೀತ್‌ಗೆ ಕೇವಲ ಕರ್ನಾಟಕ ಮಾತ್ರವಲ್ಲ ದೇಶ ವಿದೇಶಗಳಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಪ್ಪು ಸಿನಿಮಾಗಳು ರಿಲೀಸ್‌ ಆದರೆ ವಿದೇಶದಲ್ಲಿರುವ ಕನ್ನಡಿಗರು ಆ ಸಿನಿಮಾವನ್ನು ನೋಡಿ ಖುಷಿ ಪಡುತ್ತಿದ್ದರು. ಪುನೀತ್ ಅಂದರೆ ಸಾಕಷ್ಟು ವಿದೇಶಿಗರು ಇಷ್ಟ ಪಡುತ್ತಿದ್ದರು. ಈಗ ಅವರನ್ನು ಕಳೆದುಕೊಂಡಿರುವ ಸುದ್ದಿ ಅವರಿಗೂ ಬೇಸರ ತಂದಿದ್ದು, ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿದೇಶದಲ್ಲಿರುವ ಕನ್ನಡಿಗರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

World fans pays last respect to Puneeth Rajkumar

ಜರ್ಮನಿಯಲ್ಲಿ ನೆಲೆಸಿರುವ ಕನ್ನಡಿಗರು ಹಾಗೇ ಪುನೀತ್ ಅಭಿಮಾನಿಗಳು ಪುನೀತ್‌ಗೆ ಗೌರವಪೂರ್ಣ ನಮನ ಸಲ್ಲಿಸಿದ್ದಾರೆ. ಜರ್ಮನಿಯ ಮ್ಯೂನಿಚ್ ನಗರದಲ್ಲಿ ಸೇರಿದ್ದ ಕನ್ನಡಿಗರು ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಕೈನಲ್ಲಿ ಕನ್ನಡದ ಬಾವುಟ ಮತ್ತು ಪುನೀತ್ ಅವರ ಭಾವಚಿತ್ರವನ್ನು ಹಿಡಿದು ಅಪ್ಪು ಅಗಲಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಜರ್ಮನಿಯಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶದಲ್ಲಿ ಪುನೀತ್ ಸಾವಿಗೆ ಸಂತಾಪ ಸೂಚಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುನೀತ್ ಸಾವಿನ ವಿಚಾರ ಸುದ್ದಿಯಾಗುತ್ತಿದೆ. ಸಿಎನ್ಎನ್, ಬಿಸಿಸಿ ಹಾಗೂ ಕೊರಿಯಾ ಸುದ್ದಿವಾಹಿನಿಗಳು ಪುನೀತ್ ಸಾವಿನ ಸುದ್ದಿಯನ್ನು ಪ್ರಸಾರ ಮಾಡಿವೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯ ಕಲಾವಿದರೂ ಕೂಡ ಪುನೀತ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಪುನೀತ್‌ರನ್ನು ಕಳೆದುಕೊಂಡು ಅವರ ಅಭಿಮಾನಿಗಳು ದುಖಿಃಸುತ್ತಿದ್ದಾರೆ. ವಿದೇಶದಲ್ಲಿರುವ ಸಾವಿರಾರು ಕನ್ನಡಿಗರು ಪುನೀತ್ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

More from Filmibeat

English summary
World wide Puneeth fans paid tribute to the legend Actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X