ಪ್ರಪಂಚದ ಮೊದಲ AI ಸಿನಿಮಾ ಕನ್ನಡದಲ್ಲಿ ನಿರ್ಮಾಣ; 'ಲವ್‌ ಯು' ಟೀಸರ್

ಎಲ್ಲೆಲ್ಲೂ ಈಗ AI ಸದ್ದು ಜೋರಾಗಿದೆ. ಇನ್ನು 10 ವರ್ಷಗಳಲ್ಲಿ ಬಹುತೇಕ ಪ್ರಪಂಚ AI ತೆಕ್ಕೆಗೆ ಸಿಲುಕುವ ಸುಳಿವು ಸಿಕ್ಕಿದೆ. ಇನ್ನು ಸಿನಿಮಾ, ಮನರಂಜನಾ ಕ್ಷೇತ್ರದಲ್ಲಿ ಕೂಡ ಹೊಸ ಕ್ರಾಂತಿಗೆ ಇದು ನಾಂದಿ ಹಾಡಲಿದೆ. ಈಗಾಗಲೇ AI ಫೋಟೊ, ವೀಡಿಯೋಗಳು ಸದ್ದು ಮಾಡುತ್ತಿವೆ.

ನಮ್ಮನ್ನಗಲಿರುವ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ರೀತಿಯ ದಿಗ್ಗಜ ಕಲಾವಿದರ AI ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತದೆ. AI ತಂತ್ರಜ್ಞಾನ ಬಳಸಿ ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೆ ತೆರೆಮೇಲೆ ತರಬಹುದಾ? ಎಂದು ಕೆಲವರು ಕೇಳುತ್ತಿರುತ್ತಾರೆ. ಇದೆಲ್ಲದರ ನಡುವೆ ಸಂಪೂರ್ಣವಾಗಿ AIನಲ್ಲೇ ಮೂಡಿ ಬಂದಿರುವ ಕನ್ನಡ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ.

Worlds First AI Feature Film Love you completes censor formalities

ಪ್ರಪಂಚದ ಮೊದಲ AI ಸಿನಿಮಾ ಇದು ಎನ್ನಲಾಗ್ತಿದೆ. ನಿರ್ದೇಶಕ, ನಿರ್ಮಾಪಕ, AI ಇನ್‌ಸ್ಟ್ರಕ್ಟರ್ ಹಾಗೂ ಪಿಆರ್‌ಓ ಬಿಟ್ಟು ಬೇರೆ ನಿಜ ವ್ಯಕ್ತಿಗಳು ಈ ಚಿತ್ರಕ್ಕೆ ಕೆಲಸ ಮಾಡಿಲ್ಲ. ಎಲ್ಲಾ AIಮಯ. ಸಂಗೀತ, ಹಾಡುಗಳು, ಲೋಕೇಶನ್ಸ್ ಕೂಡ AIನಲ್ಲೇ ಮಾಡಲಾಗಿದೆ. 95 ನಿಮಿಷಗಳ ಈ ಸಿನಿಮಾ ಸೆನ್ಸಾರ್ ಮುಗಿಸಿ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಅಂದಹಾಗೆ ಸಿನಿಮಾ ಹೆಸರು 'ಲವ್‌ಯು'.

ಟೈಟಲ್‌ ಹೇಳುವಂತೆ ಇದೊಂದು ರೊಮ್ಯಾಂಟಿಕ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಜೊತೆ ಆಕ್ಷನ್ ಸನ್ನಿವೇಶಗಳು ಇವೆ. ಕೆಲ ಫ್ರೇಮ್‌ಗಳಲ್ಲಿ ಇದು ನಿಜವಾದ ಕಲಾವಿದರು ನಟಿಸಿರುವ ಸಿನಿಮಾ ಎನಿಸಲುಬಹುದು. ಎಸ್. ನರಸಿಂಹ ಮೂರ್ತಿ ಎಂಬುವರನ್ನು ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ನೂತನ್ ಎಂಬುವವರು AI ಕ್ರಿಯೇಟರ್ ಆಗಿದ್ದಾರೆ. ತಿಂಗಳ ಹಿಂದೆಯೇ ಟೀಸರ್ ಕೂಡ ಬಿಡುಗಡೆ ಆಗಿತ್ತು.

95 ನಿಮಿಷಗಳ 'ಲವ್‌ಯು' ಚಿತ್ರದಲ್ಲಿ ಒಟ್ಟು 12 ಹಾಡುಗಳಿವೆ. ಆ ಹಾಡುಗಳನ್ನು ಕೂಡ AIನಲ್ಲೇ ಕಂಪೋಸ್ ಮಾಡಿ ರೆಕಾರ್ಡಿಂಗ್ ಮಾಡಿದ್ದಾರೆ. ಇದು ಬರೀ ಒಂದು ಸಿನಿಮಾ ಅಲ್ಲ, ಒಂದು ಕ್ರಾಂತಿ ಆಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. AI ತಂತ್ರಜ್ಞಾನ ಬಳಸಿ ದಿಗ್ಗಜ ಕಲಾವಿದರನ್ನು ತೆರೆಮೇಲೆ ತರುವಂತೆ ಅಭಿಮಾನಿಗಳು ಕೇಳುತ್ತಿರುತ್ತಾರೆ. ಇಂತಹ ಪ್ರಯತ್ನಗಳು ಮುಂದೆ ಅದನ್ನು ಸಾಧಿಸಲು ವೇದಿಕೆ ಆಗಲಿದೆ.

ಈಗಾಗಲೇ AI ತಂತ್ರಜ್ಞಾನವನ್ನು ಕೆಲ ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸಿನಿಮಾ ಪೋಸ್ಟರ್, ಟೀಸರ್ ಡಿಸೈನ್ ಮಾಡಲು ಬಳಕೆ ಆಗುತ್ತಿದೆ. ತೆಲುಗಿನ 'ವಿಶ್ವಂಭರ' ಚಿತ್ರದ ಟೀಸರ್‌ ಮಾಡಲು AI ತಂತ್ರಜ್ಞಾನ ಬಳಸಿಕೊಂಡಿದ್ದಾಗಿ ಚಿತ್ರತಂಡ ಹೇಳಿತ್ತು. ಹೀಗೆ ಸಾಕಷ್ಟು ಪ್ರಯೋಗಗಳು ಆರಂಭವಾಗಿದೆ. ಮುಂದೆ ಇದು ಚಿತ್ರ ಪ್ರಪಂಚದಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟುಮಾಡುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಸಿನಿಮಾ ಅಂದರೆ ನಾಯಕ ಯಾರು? ನಾಯಕಿ ಯಾರು? ಎನ್ನುವ ಪ್ರಶ್ನೆಗಳನ್ನು ಜನ ಕೇಳುತ್ತಾರೆ. ಆದರೆ AI ಚಿತ್ರಗಳಲ್ಲಿ ನಾವು ಸೃಷ್ಟಿಸಿದ ಪಾತ್ರಗಳೇ ಜೀವ ಪಡೆದು ನಟಿಸುತ್ತವೆ. ಕಲಾವಿದರು, ದೇಶ ವಿದೇಶಗಳಲ್ಲಿ ಚಿತ್ರೀಕರಣ, ಅದ್ಧೂರಿ ಸೆಟ್‌ಗಳ ನಿರ್ಮಾಣ ಯಾವುದರ ಅವಶ್ಯಕತೆ ಇಲ್ಲಿ ಇರುವುದಿಲ್ಲ. ತಂತ್ರಜ್ಞರ ಸಂಖ್ಯೆ ಕೂಡ ಕಮ್ಮಿ ಆಗಲಿದೆ.

More from Filmibeat

English summary
AI-Generated Kannada movie Love you teaser Goes viral;
Read more about: sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X