For Quick Alerts
  ALLOW NOTIFICATIONS  
  For Daily Alerts

  'ಎಣ್ಣೆ ಹೊಡೀತೀರಾ?' ಅಭಿಮಾನಿಯ ಪ್ರಶ್ನೆಗೆ ಅಭಿಷೇಕ್ ಅಂಬರೀಶ್ ಉತ್ತರ

  |

  ಸಾಮಾಜಿಕ ಜಾಲತಾಣದ ಜಮಾನಾದಲ್ಲಿ ಸಿನಿಮಾ ನಟ-ನಟಿಯರು ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಿಂದಾಗಿ ನಟ-ನಟಿಯರ ಖಾಸಗಿ ಜೀವನದ ಬಗ್ಗೆಯೂ ಅಭಿಮಾನಿಗಳಿಗೆ ಸಾಕಷ್ಟು ವಿಷಯ ತಿಳಿಯುವಂತಾಗಿದೆ.

  KABZA A NEW VISION OF UNDERWORLD PHOTOSHOOT | UPENDRA | KABZA | R CHANDRU| Filmibeat Kannada

  ಸೆಲೆಬ್ರಿಟಿಗಳು ಅಭಿಮಾನಿಗಳೊಂದಿಗೆ ಸಂವಾದ ನಡೆಸಲು, ನೇರವಾಗಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಲು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ಲೈವ್ ಬರುವುದು ಸಾಮಾನ್ಯ. ಇಲ್ಲಿ ಅಭಿಮಾನಿಗಳು ಇಷ್ಟದ ನಟ-ನಟಿಯರಿಗೆ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾರೆ.

  ಆದರೆ ಕೆಲವೊಮ್ಮೆ ಲೈವ್ ನಲ್ಲಿ ಅಭಿಮಾನಿಗಳು ತೀರಾ ಖಾಸಾ ಪ್ರಶ್ನೆಗಳನ್ನು ಕೇಳಿ ಸೆಲೆಬ್ರಿಟಿಗಳನ್ನು ಇಕ್ಕಟ್ಟಿಗೆ ತಳ್ಳಿಬಿಡುತ್ತಾರೆ. ಉತ್ತರವೇ ಕೊಡಲಾಗದ ಪರಿಸ್ಥಿತಿಗೆ ತಳ್ಳಿಬಿಡುತ್ತಾರೆ. ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್‌ಗೂ ಇದೇ ಪರಿಸ್ಥಿತಿ ಇಂದು ಎದುರಾಗಿದೆ.

  ಇನ್‌ಸ್ಟಾಗ್ರಾಂ ನಲ್ಲಿ ಲೈವ್ ಬಂದಿದ್ದ ಅಭಿಷೇಕ್

  ಇನ್‌ಸ್ಟಾಗ್ರಾಂ ನಲ್ಲಿ ಲೈವ್ ಬಂದಿದ್ದ ಅಭಿಷೇಕ್

  ಅಭಿಷೇಕ್ ಅಂಬರೀಶ್ ಅವರು ಇಂದು ಇನ್‌ಸ್ಟಾಗ್ರಾಂ ನಲ್ಲಿ ಲೈವ್ ಬಂದಿದ್ದರು. ಅಮ್ಮ ಸುಲಮತಾ ಆರೋಗ್ಯ, ಕೊರೊನಾ, ಸಿನಿಮಾ, ತಂದೆ ಅಂಬರೀಶ್ ಕುರಿತಾಗಿ ಹೀಗೆ ಹಲವು ವಿಷಯಗಳ ಬಗ್ಗೆ ಅಭಿಷೇಕ್ ಮಾತನಾಡಿದರು. ಆದರೆ ಒಬ್ಬ ಅಭಿಮಾನಿ ಮಾತ್ರ ಡಿಫರೆಂಟ್ ಪ್ರಶ್ನೆ ಕೇಳಿದ.

  ಅಭಿಷೇಕ್ ಕೊಟ್ಟ ಉತ್ತರವಿದು

  ಅಭಿಷೇಕ್ ಕೊಟ್ಟ ಉತ್ತರವಿದು

  ಪ್ರಶ್ನೆ ನೋಡಿ ನಕ್ಕುಬಿಟ್ಟ ಅಭಿಷೇಕ್, 'ಸದ್ಯ ಒಂದು ಲೋಟ ನೀರನ್ನು ಮಾತ್ರ ಕುಡಿಯುತ್ತೇನೆ' ಎಂದಿದ್ದಾರೆ. ತಾವು ಎಣ್ಣೆ ಹೊಡೆಯುವುದಿಲ್ಲ ಎಂದು ಅಭಿಷೇಕ್ ಹೇಳಿಲ್ಲ, ಬದಲಿಗೆ ಹೊಡೆಯುತ್ತೇನೆಂದು ಸಹ ಅಭಿಷೇಕ್ ಹೇಳಿಲ್ಲ. ಯಾವ ಉತ್ತರ ಸರಿ ಎಂಬ ಆಯ್ಕೆ ಅಭಿಮಾನಿಗಳಿಗೆ ಬಿಟ್ಟಿದ್ದು.

  ಸೂರಿ ನಿರ್ದೇಶನದ ಸಿನಿಮಾದಲ್ಲಿ ನಟನೆ

  ಸೂರಿ ನಿರ್ದೇಶನದ ಸಿನಿಮಾದಲ್ಲಿ ನಟನೆ

  ಅಭಿಷೇಕ್ ಅಂಬರೀಶ್ ಅವರು ಸೂರಿ ನಿರ್ದೇಶನದಲ್ಲಿ ನಟಿಸಲು ತಯಾರಾಗಿದ್ದಾರೆ. ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾಕ್ಕೆ ಅಭಿಷೇಕ್ ನಾಯಕರಾಗಿದ್ದು, ಪೋಸ್ಟರ್‌ಗಳು ಈಗಾಗಲೇ ಗಮನ ಸೆಳೆಯುತ್ತಿವೆ. ಇದು ಅವರ ಎರಡನೇ ಸಿನಿಮಾ ಆಗಿದೆ.

  English summary
  A Fan asked Abhishek Ambareesh that would he drink alcohol. Abhishek answered i only drink water now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X